ದೀಪ ಧೈರ್ಯಕ್ಕೆ ಬೆರಗಾದ ಒಲಿಂಪಿಕ್ ಚಿನ್ನ ವಿಜೇತೆ ಸಿಮೊನ್ ಹೇಳಿದ್ದನ್ನು ಓದಲೇ ಬೇಕು
ಇದು ಚಿನ್ನಕ್ಕಿಂತ ಚಿಕ್ಕ ಸಾಧನೆಯಲ್ಲ

ಹೊಸದಿಲ್ಲಿ, ಸೆ.4: ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲದಿದ್ದರೂ, ಅಪೂರ್ವ ಪ್ರದರ್ಶನದ ಮೂಲಕ ಜನಮನ ಗೆದ್ದ ತ್ರಿಪುರದಾ ಜಿಮ್ನಾಸ್ಟಿಕ್ ಸಾಧಕಿ ದೀಪಾ ಕರ್ಮಾಕರ್ ಕೂಟದಲ್ಲಿ ನಾಲ್ಕನೆ ಸ್ಥಾನ ಪಡೆದಿದ್ದರು. ಅವರು ಪದಕ ಗೆಲ್ಲದಿದ್ದರೂ ಫೈನಲ್‌ನಲ್ಲಿ ಅಪಾಯಕಾರಿ ‘ಪ್ರೊಡೊನೊವಾ’ ವಿಭಾಗದಲ್ಲಿ ನೀಡಿದ ಪ್ರದರ್ಶನದ ಬಗ್ಗೆ ಚಿನ್ನ ವಿಜೇತೆ ಜಿಮ್ನಾಸ್ಟಿಕ್ ಚಿನ್ನ ಪಡೆದ ಅಮೆರಿಕದ ಸಿಮೋನ್ ಬೈಲ್ಸ್ ಇದೀಗ ದೀಪಾ ಕರ್ಮಾಕರ‍್ ಅವರದ್ದು ಚಿನ್ನಕ್ಕಿಂತ ಚಿಕ್ಕ ಸಾಧನೆಯಲ್ಲ ಎಂದು ಗುಣಗಾನ ಮಾಡಿದ್ದಾರೆ.
ಜಿಮ್ನಾಸ್ಟಿಕ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಭಾರತದ ಮೊದಲ ಮಹಿಳಾ ಜಿಮ್ನಾಸ್ಟಿಕ್ ಪಟು ಎನಿಕೊಂಡಿರುವ ದೀಪಾ ಕರ್ಮಾಕರ‍್ ಅವರ ಪ್ರೊಡೊನೊವಾ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಮೊನಾ ಅವರು " ನಾನು ಪ್ರೊಡೊನೊವಾ ಪ್ರಯತ್ನ ನಡೆಸಿದೆ ಆದರೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಹತ್ತೊಂಬತ್ತರ ಹರೆಯದ ಸಿಮೊನ್ ಓರ್ವ ಖ್ಯಾತ ಅಥ್ಲಿಟ್ ಆಗಿ ಹೊರಹೊಮ್ಮಿದ್ದಾರೆ. "ಆಕೆಯ ನನ್ನನ್ನು ಭೇಟಿಯಾದಾಗ ವಾಲ್ಟ್‌ಗೆ ಹೆಸರು ಪ್ರೊಡೊನೊವಾ ಬದಲಿಗೆ "ಕರ್ಮಾಕರ್ ವಾಲ್ಟ್’’ ಎಂದು ಬದಲಾಯಿಸುವುದು ಸೂಕ್ತ ಎಂದು ಹೇಳಿದ್ದರು. ನನಗೆ ಇದರಿಂದ ಬಹಳ ಸಂತಸವಾಗಿದೆ. ಕಠಿಣ ಪ್ರಯತ್ನದಿಂದ ಮುಂದೆಂದು ದಿನ ವಾಲ್ಟ್ ನಲ್ಲಿ ನನ್ನ ಹೆಸರನ್ನು ಶಾಶ್ವತವಾಗಿ ಉಳಿಸುವಂತೆ ಮಾಡುವೆ ” ಎಂದು ದೀಪಾ ಹೇಳಿದ್ದಾರೆ.





