ಒಂದೇ ವಾರದಲ್ಲಿ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಆಝಮ್ ಖಾನ್ ರ ಭಯಂಕರ ಐಡಿಯಾ

ಲಕ್ನೋ, ಸೆ. 4 : ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಉತ್ತರ ಪ್ರದೇಶದ ಸಚಿವ ಹಾಗೂ ಸಮಾಜವಾದಿ ಪಕ್ಷದ ಹಿರಿಯ ನಾಯಕ ಮೊಹಮ್ಮದ್ ಆಝಮ್ ಖಾನ್ ಶನಿವಾರ ಅಂತಹದೇ ಇನ್ನೊಂದು ಹೇಳಿಕೆ ನೀಡಿದ್ದಾರೆ.
ರಾಂಪುರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಆಝಮ್ ಅವರು ಪ್ರಧಾನಿ ಮೋದಿ ಹಾಗೂ ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಗಡಿಯಲ್ಲಿ ನಮ್ಮ ಸೈನಿಕರು ಬಲಿಯಾಗುತ್ತಿರುವಾಗ ಪ್ರಧಾನಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಧಾನಿಯ ತಾಯಿಯ ಕಾಲಿಗೆ ಬಿದ್ದಿದ್ದಾರೆ ಎಂದು ಆರೋಪಿಸಿದ ಆಝಮ್ "ನನ್ನನ್ನು ಪ್ರಧಾನಿ ಮಾಡಿದರೆ ಒಂದೇ ವಾರದಲ್ಲಿ ಎರಡು ಕಾಶ್ಮೀರ ಗಳನ್ನು ( ಜಮ್ಮು ಕಾಶ್ಮೀರ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ) ಒಂದು ಮಾಡುತ್ತೇನೆ" ಎಂದು ಹೇಳಿದ್ದಾರೆ.
Next Story





