ಮೊಬೈಲ್ ಅಂಗಡಿಗಳಲ್ಲಿ ಸಂಪೂರ್ಣ ಸೌದೀಕರಣ ಜಾರಿ: ವ್ಯಾಪಕ ತಪಾಸಣೆ ಆರಂಭ
ಸೌದಿ ಸಂಕಟ

ರಿಯಾದ್,ಸೆಪ್ಟಂಬರ್ 4: ನೂರಾರು ಭಾರತೀಯರ ಜೀವನೋಪಾಯಕ್ಕೆ ಕಂಟಕವಾಗಿ ಪರಿಣಮಿಸಿರುವ ಮೊಬೈಲ್ ಅಂಗಡಿಗಳ ಸಂಪೂರ್ಣ ಸೌದೀಕರಣ ಪ್ರಕ್ರಿಯೆ ಜಾರಿಗೆ ಬಂದಿದೆ. ಸೌದಿಪ್ರಜೆಗಳಾದ ಯುವಕರು,ಯುವತಿಯರಿಗೆ ಕೆಲಸ ನೀಡುವುದರ ಅಂಗವಾಗಿ ಈತೀರ್ಮಾನವನ್ನು ತಳೆಯಲಾಗಿದ್ದು ಶುಕ್ರವಾರದಿಂದ ಶೇ.100 ರಷ್ಟು ಸೌದೀಕರಣ ಜಾರಿಗೆ ಬಂದಿದೆ ಹಾಗೂ ಕಾನೂನು ಜಾರಿಗೊಳಿಸದಿರುವ ಅಂಗಡಿಗಳ ತಪಾಸಣೆಕಾರ್ಯ ಸಾಗುತ್ತಿದೆ ಎಂದು ವರದಿಯಾಗಿದೆ.
ಜೂನ್‌ನಿಂದಲೇ ಮೊಬೈಲ್ ಮಾರಾಟದ ಮತ್ತು ದುರಸ್ತಿ ಕ್ಷೇತ್ರದಲ್ಲಿ ಸೌದೀಕರಣ ಏರ್ಪಡಿಸಲಾಗಿತ್ತು. ಪ್ರತಿ ಅಂಗಡಿಗಳಲ್ಲಿ ಅರ್ಧದಷ್ಟು ಸೌದಿ ಪ್ರಜೆಗಳಿದ್ದರೆ ಸಆಕು ಎಂದು ಆರಂಭಿಕ ಹಂತದಲ್ಲಿ ಸೂಚನೆ ನೀಡಲಾಗಿತ್ತು. ಸೆಪ್ಟಂಬರ್‌ನಿಂದ ಸಂಪೂರ್ಣ ಉದ್ಯೋಗಿಗಳು ಸೌದಿಗಳೇ ಇರಬೇಕೆಂದು ಕಾರ್ಮಿಕ ಸಚಿವಾಲಯ ಎಚ್ಚರಿಕೆ ನೀಡಿತ್ತು. ಶನಿವಾರದಿಂದ ಅದು ತಪಾಸಣೆಯನ್ನು ತೀವ್ರಗೊಳಿಸಿದೆ. ರಿಯಾದ್, ಜಿದ್ದ, ದಮ್ಮಾಂ ಮೊದಲಾದೆಡೆ ಕಾರ್ಮಿಕ ಸಚಿವಾಲಯದ ಅಧಿಕಾರಿಗಳು ತಪಾಸಣೆಗೆ ಬರುತ್ತಿದ್ದಾರೆ. ಕಾನೂನು ಜಾರಿಗೊಳಿಸದ ಅಂಗಡಿಗಳನ್ನುಮುಚ್ಚಿಸುತ್ತಿದ್ದಾರೆ. ಸೌದಿ ಕಾರ್ಮಿಕರನ್ನು ನೇಮಿಸದ ಭಾರತೀಯರಲ್ಲಿ ಹಲವರು ತಮ್ಮ ಅಂಗಡಿಗಳನ್ನು ಮುಚ್ಚಿರಿಸಿದ್ದಾರೆ. ಪರಿಸರದಲ್ಲೇ ಮೊಬೈಲ್ ಕಾಡ್ ಮತ್ತು ಇತರ ವಸ್ತುಗಳನ್ನು ಅಗತ್ಯವಿರುವವರಿಗೆ ನೀಡುತ್ತಿದ್ದಾರೆ. ಕಾರ್ಮಿಕ, ಗ್ರಹ, ವಾಣಿಜ್ಯಮುಂತಾದ ಸಚಿವಾಲಯಗಳ ಅಧಿಕಾರಿಗಳು ಸೌದಿಪ್ರಜೆಗಳನ್ನು ನೇಮಿಸದ ಅಂಗಡಿಗಳ ವಿರುದ್ಧ ಕ್ರಮಜರಗಿಸುತ್ತಿದ್ದಾರೆ. ತೀರ್ಮಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾರ್ಮಿಕಸಚಿವ ಡಾ. ಮುಫ್ರರಿಜ್ ಹಕ್‌ಬಾನಿ ಪುನರುಚ್ಚರಿಸಿದ್ದಾರೆ. ಭಾರತೀಯರ ಕೆಲವು ಮೊಬೈಲ್ ಅಂಗಡಿಗಳನ್ನು ಫ್ಯಾನ್ಸಿ,ವಾಚ್ ಮುಂತಾದ ಅಂಗಡಿಗಳನ್ನಾಗಿ ಪರಿವರ್ತಿಸಲಾಗಿದೆ. ಹೀಗೆ ಮಾಡಲು ಸಾಧ್ಯವಿಲ್ಲದವರು ಅಂಗಡಿಗಳನ್ನು ಮುಚ್ಚಿ ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದಾರೆ.
ಪ್ರಮುಖ ಮೊಬೈಲ್ ಸರ್ವಿಸಿಂಗ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರನ್ನುಆಗಸ್ಟ್ 31ಕ್ಕೆ ಕೆಲಸದಿಂದ ತೆಗೆದುಹಾಕಲಾಗಿದೆ. ಒಂದೆರೆಡು ಉದ್ಯೋಗಿಗಳನ್ನು ಹೊಂದಿದ್ದ ಸಣ್ಣಪುಟ್ಟ ಅಂಗಡಿಗಳಲ್ಲಿ ಭಾರತೀಯರು ಕೆಲಸಕ್ಕಿದ್ದರು. ಸ್ವದೇಶಿಗಳಿಗೆ ಅಂಗಡಿ ನಡೆಸಲು ಭಾರೀ ಕೊಡುಗೆಯನ್ನು ಸೌದಿ ಸರಕಾರ ನೀಡಿದೆ. ಸೌದಿ ಪ್ರಜೆಗಳಿಗೆ ಸರಕಾರವೇ 2000ರಿಯಾಲ್ ಸಂಬಳವನ್ನು ಎರಡು ವರ್ಷಗಳ ವರೆಗೆ ನೀಡಲಿದೆ. ಸ್ವಂತ ಅಂಗಡಿ ಮಾಡಲು ನಿರ್ಧರಿಸುವ ಸೌದಿ ಪ್ರಜೆಗಳಿಗೆ ಎರಡು ಲಕ್ಷ ರಿಯಾಲ್‌ವರೆಗೆ ಸರಕಾರ ಸಾಲ ನೀಡುತ್ತಿದೆ. ಸ್ಪಷ್ಟಯೋಜನೆಯೊಂದಿಗೆ ಸೌದಿ ಕಾರ್ಮಿಕ ಸಚಿವಾಲಯ ಮೊಬೈಲ್ ಅಂಗಡಿಗಳ ಸೌದೀಕರಣವನ್ನು ಈಬಾರಿ ನಡೆಸಿದೆ ಎಂದು ವರದಿ ತಿಳಿಸಿದೆ.







