ಪ್ರೀತಿಸಲು ವಯಸ್ಸು ಅಡ್ಡಿಯಲ್ಲ ಎಂದು ಸಾಬೀತು ಪಡಿಸಿದ ವಯೋವೃದ್ಧ ವಧುವರರು!

ಮಂಡಿ(ಹಿಮಾಚಲ ಪ್ರದೇಶ),ಸೆಪ್ಟಂಬರ್ 4: ಪ್ರೀತಿಸಲು ವಯಸ್ಸಿನ ಹಂಗೇತಕೆ? ಹೀಗೊಂದು ಮದುವೆ ಹಿಮಾಚಲದ ಮಂಡಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ವರನಿಗೆ 76 ವರ್ಷ ವಯಸ್ಸು ಮತ್ತು ವರಳಿಗೆ 56 ವರ್ಷವಯಸ್ಸು. 76ವರ್ಷದ ರಾಮ್ ನಂದ ಮತ್ತು 56ವರ್ಷ ಶೀಲಾದೇವಿಯನ್ನು ಸುಂದರನಗರದ ಶೀತಲಾದೇವಿ ಮಾತಾ ಮಂದಿರದಲ್ಲಿ ಮದುವೆಯಾಗಿದ್ದಾರೆ. ವರದಿಯಾಗಿರುವ ಪ್ರಕಾರ ಮಂಡಿ ಜಿಲ್ಲೆಯ ಸುಹಡಾ ಕೋಠಿ ಎಂಬಲ್ಲಿನ ನಿವಾಸಿ ರಾಮ್‌ನಂದ ಮತ್ತು ಸಿವೋರಿ ಮಜವಾಡಾ ಜಿಲ್ಲೆಯ ಮಂಡಿ ನಿವಾಸಿ ಶೀಲಾದೇವಿಯನ್ನು ವಿವಾಹವಾಗಿದ್ದು ಇವರಿಬ್ಬರು ವಿಧುರ, ವಿಧವೆಯರಾಗಿದ್ದಾರೆ. ವರನ ಪತ್ನಿ ತೀರಿಕೊಂಡಿದ್ದರೆ ವಧುವಿನ ಪತಿ ತೀರಿಹೋಗಿದ್ದಾರೆ. ಆನಂತರ ಅವರಿಬ್ಬರಲ್ಲಿ ಪರಿಚಯ ಪ್ರೇಮವಾಗಿ ಅರಳಿ ಇದೀಗ ಅವರಿಬ್ಬರು ಹಸೆಮಣೆಯೇರಿದ್ದಾರೆ ಎಂದು ವರದಿ ತಿಳಿಸಿದೆ.
Next Story





