ಬೈಕಂಪಾಡಿ ಸಮುದ್ರದಲ್ಲಿ ಅನಾಥ ಬೋಟ್ ಪತ್ತೆ!
.gif)
ಮಂಗಳೂರು, ಸೆ.4: ನಗರ ಹೊರವಲಯದ ಬೈಂಕಪಾಡಿ ಸಮುದ್ರದಲ್ಲಿ ಅನಾಥ ಸ್ಟೀಲ್ ಬೋಟೊಂದು ಇಂದು ಸಂಜೆ ಪತ್ತೆಯಾಗಿದೆ.
ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಪತ್ತೆಯಾಗಿರುವ ಈ ಸ್ಟೀಲ್ ಬೋಟ್‌ನ ಕ್ಯಾಬಿನ್ ಸಂಪೂರ್ಣ ಹಾನಿಗೀಡಾಗಿದೆ. ಜಾನ್ ಲಾರೆನ್ಸ್ ಅಂತ ಹೆಸರನ್ನು ಹೊಂದಿರುವ ಈ ಬೋಟ್ ಮಂಗಳೂರು ಹಳೆಬಂದರ್‌ಗೆ ಸೇರಿದ್ದಾಗಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬೋಟ್ ಹೇಗೆ ಇಲ್ಲಿ ತಲುಪಿತು ಎಂಬುದು ಯಕ್ಷ ಪ್ರಶ್ನೆಯಾಗಿದ್ದು, ದುರಂತಕ್ಕೀಡಾದ ಬೋಟ್ ಆಗಿರಬಹುದೇ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
Next Story





