ಗಾಂಧೀಜಿಯ ಚಿಂತನೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ಬಿ.ಕೆ.ಹರಿಪ್ರಸಾದ್
ಮಂಗಳೂರು, ಸೆ. 4: ಮಹಾತ್ಮ ಗಾಂಧೀಜಿಯ ಧ್ಯೇಯ, ಚಿಂತನೆ ಸಾಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಾಗಿದೆ ಎಂದು ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ದೇಶದ ಜನತೆಗೆ ಸಾಮಾಜಿಕ ಹಕ್ಕನ್ನು ಕಂದು ಕೊಟ್ಟಿರುವುದೇ ಕಾಂಗ್ರೆಸ್. ಇತ್ತೀಚಿನವರೆಗೆ ದೇಶದಲ್ಲಿರುವ ಬಡ ರೈತರಿಗೆ ಕಾಂಗ್ರೆಸ್ ಪಕ್ಷ ಮಾತ್ರ ಸಾಲ ಮನ್ನಾ ಮಾಡಿದೆ. ಆದರೆ ಬಿ.ಜೆ.ಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೇವಲ ದೊಡ್ಡ ಕೈಗಾರಿಕೋದ್ಯಮಗಳಿಗೆ ಸಾಲ ಮನ್ನಾ ಮಾಡಿದೆ. ದೇಶದ ಜವಾಬ್ದಾರಿ ಇಂದು ಕಾಂಗ್ರೆಸ್ ಮೇಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಕೇವಲ ಪ್ರಚಾರ ಮಾತ್ರ. ಇದರಿಂದ ಬಡ ಜನರ ಹೊಟ್ಟೆ ತುಂಬುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಎ.ಐ.ಸಿ.ಸಿ. ಸದಸ್ಯ ಪಿ.ವಿ.ಮೋಹನ್, ಜಿಲ್ಲಾ ಕಾಂಗ್ರೆಸ್ ನಾಯಕರಾದ ಎ.ಸಿ.ಭಂಡಾರಿ, ಬಲರಾಜ್ ರೈ, ಆರ್.ಕೆ.ಪ್ರಥ್ವಿರಾಜ್, ಟಿ.ಕೆ.ಸುಧೀರ್, ವಿಶ್ವಾಸ್ ಕುಮಾರ್ ದಾಸ್, ಬಾಲಕೃಷ್ಣ ಶೆಟ್ಟಿ, ಡಿ.ಡಿ.ಕಟ್ಟೆಮಾರ್, ಪದ್ಮನಾಭ ನರಿಂಗಾನ, ಶೂಭೋದಯ ಆಳ್ವ, ನಝೀರ್ ಬಜಾಲ್, ಲುಕ್‌ಮಾನ್ ಬಂಟ್ವಾಳ, ರಮಾನಂದ ಪೂಜಾರಿ, ಸದಾಶಿವ ಉೀನ್, ದುರ್ಗಾ ಪ್ರಸಾದ್, ನೀರಜ್ ಪಾಲ್, ಸಂಶುದ್ಧೀನ್ ಕುದ್ರೋಳಿ, ಅಬೂಬಕ್ಕರ್ ಬಜಾಲ್, ಆರಿಫ್ ಬಾವಾ, ಕಾರ್ಪೋರೇಟರ್‌ಗಳಾದ ಜೆಸಿಂತಾ ಆಲ್ಫೆಡ್, ಅಪ್ಪಿ, ಕೀತಾ ವಾಸು, ಆಶಾ ಡಿ’ಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.







