ಮಂಗಳೂರು : ಗಣೇಶ ಹಬ್ಬಕ್ಕೆ ಭರದ ಸಿದ್ಧತೆ

ಮಂಗಳೂರು, ಸೆ.4: ಸೋಮವಾರದಂದು ನಡೆಯುವ ಗಣೇಶ ಚತುರ್ಥಿಯ ಪ್ರಯುಕ್ತ ನಗರದಲ್ಲಿ ಇಂದು ಕಬ್ಬು, ಹೂವಿನ ಖರೀದಿ ಭರಾಟೆಯಿಂದ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಹೂವಿನ ವ್ಯಾಪಾರಿಗಳು, ಕಬ್ಬು ಮಾರಾಟಗಾರರು ಜಿಲ್ಲೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಹಬ್ಬಕ್ಕೆ ಬೇಕಾದ ಕಬ್ಬು, ಹೂವಿನ ಖರೀದಿ ಪ್ರಕ್ರೀಯೆ ಜೋರಾಗಿಯೆ ನಡೆಯಿತು.
ಆದಿತ್ಯವಾರ ಗೌರಿ ಪೂಜೆಯನ್ನು ಆಚರಿಸಿದ ಭಕ್ತರು ಸೋಮವಾರದ ಗಣೇಶ ಚತುರ್ಥಿಗೆ ಸಿದ್ದತೆಗಳನ್ನು ನಡೆಸಿದ್ದಾರೆ. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಗಣೇಶ ಪ್ರತಿಷ್ಠಾಪನೆಗೆ ಬೇಕಾದ ಸಿದ್ದತೆಗಳನ್ನು ನಡೆಸಲಾಗಿದೆ.
Next Story





