ಎಸ್ಕೆ ಎಸ್ಸೆಸ್ಸೆಫ್ ಮುಲ್ಕಿ ಕ್ಲಷ್ಟರ್ ರಚನೆ

ಮುಲ್ಕಿ, ಸೆ.4: ಸಮಸ್ತ ಕೇರಳ ಜಂಹಿಯತುಲ್ ಉಲಮಾ ಇದರ ಪೋಷಕ ಸಂಘಟನೆ ಎಸ್ಕೆಎಸ್ಸೆಸ್ಸೆಫ್ ಮುಲ್ಕಿ ಕ್ಲಷ್ಟರ್‌ನ ಅಧ್ಯಕ್ಷರಾಗಿ ಎಂ. ಇಸ್ಮಾಯೀಲ್ ಕೊಲ್ನಾಡು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಉಸ್ಮಾನ್ ಸಾಗ್ ಹಳೆಯಂಗಡಿ ಇವರು ಆಯ್ಕೆಯಗಿದ್ದಾರೆ.
ಬೊಳ್ಳೂರು ಶಂಸುಲ್ ಉಲಮಾ ಮೆಮೋರಿಯಲ್ ಸೆಂಟರ್‌ನಲ್ಲಿ ಇತ್ತೀಚೆಗೆ ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್‌ನ ಜಿಲ್ಲಾಧ್ಯಕ್ಷರಾದ ಇಸ್ಹಾಕ್ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿಯ ಖಜಾಂಚಿಯಾಗಿ ಫರ್ವೀಝ್, ಕಾರ್ಯದರ್ಶಿಯಾಗಿ ಶಂಸುದ್ದೀನ್, ಉಪಾಧ್ಯಕ್ಷರಾಗಿ ಮುಹಮ್ಮದ್ ಜವಾದ್ ಕೊಲ್ನಾಡು, ಅಬ್ದುಲ್ ಅಝೀಝ್, ನಿಝಾಮ್, ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಆಶಿಕ್, ಝೈನುದ್ದೀನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಸ್ಕೆಸ್ಸೆಎಸ್ಸೆಫ್‌ನ ದ.ಕ. ಜಿಲ್ಲಾಧ್ಯಕ್ಷ ಇಸ್ಹಾಕ್ ಫೈಝಿ ತಿಳಿಸಿದ್ದಾರೆ.
ಸಭೆಯನ್ನು ಜಿಲ್ಲಾ ಪ್ರಧಾನ ಕರ್ಯದರ್ಶಿ ಇಸ್ಮಾಯೀಲ್ ಯಮಾನಿ ಉದ್ಘಾಟಿಸಿದರು. ಜೊತೆ ಕಾರ್ಯದರ್ಶಿ ಹನೀಫ್ ದಾರಿಮಿ ಅಂಕೋಲಾ ಸ್ವಾಗತಿಸಿದರು. ಶಂಸುದ್ದೀನ್ ವಂದಿಸಿದರು.





