ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕರಾಗಿ ಕಾರ್ಯನಿರ್ವಸಲು ಆಸಕ್ತರಿಂದ ಅರ್ಜಿ ಆಹ್ವಾನ
ಮಂಗಳೂರು, ಸೆ. 4: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾದ ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕರಾಗಿ ಕಾರ್ಯನಿರ್ವಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಮಂಗಳೂರು ವಿಶ್ವವಿದ್ಯಾನಿಲಯದ ಯಾವುದೇ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕರು ಅಥವಾ ಅದಕ್ಕೂ ಮೇಲಿನ ಹುದ್ದೆಯವರಾಗಿರಬೇಕು ಹಾಗೂ ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಸಲ್ಲಿಸಿರಬೇಕು, ಅರ್ಜಿದಾರರು ಯಾವುದಾದರು ಶಿಕ್ಷಣ ಸಂಸ್ಥೆಯ ಸ್ನಾತ/ಸ್ನಾತಕೋತ್ತರ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಧ್ಯಾಪಕರಾಗಿರಬಹುದು. ಪಿ.ಎಚ್.ಡಿ ಪದವಿ ಅಪೇಕ್ಷಣೀಯ.
ಬ್ರಹ್ಮ ಶ್ರೀ ನಾರಾಯಣಗುರುರವರ ಜೀವನ ಹಾಗೂ ತತ್ವಗಳ ಕುರಿತು ಅಪಾರ ಅಧ್ಯಯನ, ಸಂಶೋಧನೆ ಹಾಗೂ ಪ್ರಕಟನೆಗಳನ್ನು ಮಾಡಿ ಅನುಭವವಿರಬೇಕು. ಅರ್ಜಿದಾರರು 65 ವರ್ಷ ವಯೋಮಿತಿಯ ಒಳಗಿರಬೇಕು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ತಿಳಿದವರಾಗಿರಬೇಕು. ತುಳು, ಮಲಯಾಳಂ ಭಾಷೆಗಳ ಜ್ಞಾನ ಅಷೇಕ್ಷಣೀಯ. ಆಯ್ಕೆಯಾದ ನಿರ್ದೇಶಕರು ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಇಲ್ಲಿ ಕಾರ್ಯನಿರ್ವಸಲು ತಯಾರಾಗಿರಬೇಕು. ನಿರ್ದೇಶಕರ ಹುದ್ದೆ ತಾತ್ಕಾಲಿಕವಾಗಿದ್ದು ಮೂರು ವರ್ಷಗಳ ಅವಧಿಯದ್ದಾಗಿರುತ್ತದೆ. ನೇಮಕಗೊಂಡ ನಿರ್ದೇಶಕರಿಗೆ ಗೌರವಧನ, ಪ್ರಯಾಣ ಭತ್ತೆ, ಇತರ ಭತ್ತೆಗಳನ್ನು ವಿಶ್ವವಿದ್ಯಾನಿಲಯದ ನಿಯಮಾನುಸಾರ ನೀಡಲಾಗುವುದು.
ಅರ್ಜಿದಾರರು ತಮ್ಮ ಅರ್ಹತೆಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಹಾಗೂ ಬ್ರಹ್ಮ ಶ್ರೀ ನಾರಾಯಣಗುರು ಅವರ ಕುರಿತು ನಡೆಸಿದ ಅಧ್ಯಯನ, ಸಂಶೋಧನೆ ಹಾಗೂ ಪ್ರಕಟನೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಅರ್ಜಿಯನ್ನು ದಾಖಲೆಗಳ ಪ್ರತಿಗಳೊಂದಿಗೆ ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇವರಿಗೆ ಸೆಪ್ಟಂಬರ್ 6ರೊಳಗಾಗಿ ತಲುಪುವಂತೆ ಕಳುಹಿಸಬೇಕು
ಹೆಚ್ಚಿನ ಮಾತಿಗಾಗಿಶ್ವದ್ಯಾನಿಲಯದ ವೆಬ್ ಸೈಟ್ www.mangaloreuniversity.ac.in ನಿಂದ ಪಡೆಯಲು ಕುಲಸಚಿವರ ಕಚೇರಿ ಪ್ರಕಟನೆ ತಿಳಿಸಿದೆ.







