ಕರ್ಜಾಯಿಗೆ ಪುತ್ರಿ ಜನನ

ಹೊಸದಿಲ್ಲಿ,ಸೆ.4: ಅಫಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಅವರ ಪತ್ನಿ ಶನಿವಾರ ಇಲ್ಲಿಯ ಅಪೋಲೊ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನನ ನೀಡಿದ್ದಾರೆ.
ಕರ್ಜಾಯಿ ದಂಪತಿ ಈಗಾಗಲೇ ಮೂವರು ಮಕ್ಕಳನ್ನು ಹೊಂದಿದ್ದಾರೆ.
ಶನಿವಾರ ಲಂಡನ್ನಿಗೆ ತೆರಳುವ ಮಾರ್ಗದಲ್ಲಿ ಪತ್ನಿ ಮತ್ತು ಮಗುವನ್ನು ನೋಡಲು ಕರ್ಜಾಯಿ ಅಪೋಲೊ ಆಸ್ಪತ್ರೆಗೆ ಸಂಕ್ಷಿಪ್ತ ಭೇಟಿಯನ್ನು ನೀಡಿದ್ದರು ಎಂದು ಭಾರತದಲ್ಲಿ ಅಫಘಾನ್ ರಾಯಭಾರಿ ಶೈದಾ ಮೊಹಮ್ಮದ್ ಅಬ್ದಾಲಿ ಅವರು ಸುದ್ದಿಗಾರರಿಗೆ ತಿಳಿಸಿದರು.
Next Story





