ಹಾಸನ: ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ
.jpg)
ಹಾಸನ,ಸೆ.4: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಜಾಗೃತಿವಹಿಸಬೇಕು ಎಂದು ವೈದ್ಯರಾದ ಡಾ. ಸಾವಿತ್ರಿ ಅವರು ಮಕ್ಕಳಿಗೆ ಸಲಹೆ ನೀಡಿದರು.
ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಭಾಗ ಕಛೇರಿ ಹಿಂಬಾಗ ಇರುವ ಬಾಲಕಿಯರ ಬಾಲ ಮಂದಿರದಲ್ಲಿ ಸ್ಪಂದನ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ನಂತರ ಮಕ್ಕಳಿಗೆ ಬಾಗಿನ ನೀಡಿ ಮಾತನಾಡಿದ ಅವರು, ಆರೋಗ್ಯದ ಬಗ್ಗೆ ಯಾರು ನಿರ್ಲಕ್ಷ ಮನೋಬಾವನೆ ಮಾಡದೆ, ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿದರು. ನಂತರ ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಪ್ರಿಯ ಮಾತನಾಡಿ, ಮಕ್ಕಳಿಂದಲೇ ಸಂಸ್ಕಾರ ಬೆಳೆಸುವ ಮೂಲಕ ಅವರ ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಬಹುದು. ಗಿಡವಾಗಿ ಬಗ್ಗದೆ ಮರವಾಗಿ ಬಗ್ಗಿತೆ ಎಂಬ ಗಾದೆ ನುಡಿ ಇಂದಿಗೂ ಕೂಡ ಅನುಸರಿಸುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ನೀತಿ ಶಿಕ್ಷಣವನ್ನು ನೀಡಿದರೇ ಒಳ್ಳೆಯದು ಎಂದು ಸಲಹೆ ನೀಡಿದರು. ಸ್ಪಂದನ ವೇದಿಕೆ ಅಧ್ಯಕ್ಷರಾದ ಕಲಾವತಿ ಮಧುಸೂದನ್ ಪ್ರಾಸ್ತವಿಕ ನುಡಿಯಲ್ಲಿ ಮಾತನಾಡಿ, ಮಂಗಲ ದ್ರವ್ಯಗಳು ಸಮೃದ್ಧಿಯ ಸಂಕೇತಗಳು. ನಿಶ್ವಾರ್ಥದಿಂದ ನಿರ್ಮಲವಾಗಿ ಅರಳಿ ಪರಿಸರವನ್ನು ಪರಿಮಳಭರಿತವಾಗಿ ಸುಂಧರವನ್ನಾಗಿಸುತ್ತದೆ. ಆಗೇ ಫಲಗಳು ಸವಿಯನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮನ್ನು ಅರ್ಪಣೆ ಮಾಡುತ್ತದೆ. ಈ ಪ್ರಕೃತಿಯಿಂದ ಲಭ್ಯವಾಗುವ ಬಾಗಿನದ ಎಲ್ಲಾ ದ್ರವ್ಯಗಳು ವೈಜ್ಞಾನಿಕವಾಗಿಯೋ, ಸಾಂಪ್ರದಾಯಕವಾಗಿಯೋ ಸಕರಾತ್ಮಕ ಪೂರಕವಾಗಿರುತ್ತದೆ ಎಂದ ಅವರು ಇಂತಹ ಶುಭ ಸಂದರ್ಭದಲ್ಲಿ ಮಕ್ಕಳಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡರ ಪತ್ನಿ ಚೈತ್ರ, ಕಸಾಪ ಉಪಾಧ್ಯಕ್ಷರಾದ ನಾಗರತ್ನ ಹಾಗೂ ಸ್ಪಂದನ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ವರಿ ಸ್ವಾಗತಿಸಿದರು. ಶಾಂತ ಅತ್ನಿ ನಿರೂಪಿಸಿದರು.





