ಬಸ್, ಬೈಕ್ ಮುಖಾಮುಖಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಅಂಕೋಲಾ, ಸೆ.4: ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪೋಶ್ಟ್ ಬಾಳಿಗುಳಿ ಸಮೀಪ ಸಂಜೆೆ 4:15ರ ಸುಮಾರಿಗೆ ನಡೆದಿದೆ. ಕಾರವಾರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಬಾಳಿಗುಳಿ ವಡ್ಡರ್ ಕಾಲನಿಯ ನಿವಾಸಿ ಪ್ರಮೋದ ವರದರಾಜ್ ಸ್ವಾಮಿ (20) ಎಂಬವರು ಮೃತಪಟ್ಟ ಬೈಕ್ ಸವಾರ ಎಂದು ತಿಳಿದು ಬಂದಿದೆ. ಇವರು ಬಾಳಿಗುಳಿಯಿಂದ ಅಂಕೋಲಾದ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬಂದ ಬಸ್ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ತಲೆ ಭಾಗಕ್ಕೆ ಬಲವಾಗಿ ಪೆಟ್ಟು ಬಿದು,್ದ ಅತಿಯಾದ ರಕ್ತ ಸ್ರಾವದಿಂದ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಪಿಐ ಅರುಣಕುಮಾರ ಕೋಳೂರ, ಪಿಎಸ್‌ಐ. ಎಚ್.ಓಂಕಾರಪ್ಪನವರು ಸ್ಥಳಕ್ಕೆ ಭೇಟಿ ನೀಡಿ ಬಸ್‌ನ ಚಾಲಕ ವಿಜಯಪುರ ಮೂಲದ ಮಲಕಪ್ಪ ಕನ್ನೊಳ್ಳಿ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಬಸ್ ಕುಮಟಾ ಡಿಪೋಗೆ ಸಂಬಂಧಿಸಿದ್ದು ಎನ್ನಲಾಗಿದೆ.
Next Story





