ಮಾತುಕತೆಯೇ ಕಾಶ್ಮೀರಕ್ಕೆ ಪರಿಹಾರ
ಮಾನ್ಯರೆ,
ಮೋದಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಕಾಶ್ಮೀರದಲ್ಲಿ ಸೇನೆಗಳ ದಾಂಧಲೆ ಜಾಸ್ತಿಯಾಗಿದೆ. ಬಹುಶಃ ಕಳೆದ ಒಂದು ದಶಕದಲ್ಲಿ ಕಾಶ್ಮೀರ ಇಂತಹ ಸ್ಥಿತಿಯನ್ನು ಎದುರಿಸಲೇ ಇಲ್ಲ. ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಸಾಮಾನ್ಯ ನಾಗರಿಕರ ಮೇಲೆ ಪಾಲೆಟ್ ಗನ್ ಬಳಸಿರುವುದು. ಇದರಿಂದಾಗಿ ಅವರ ಮುಖಗಳು ಛಿದ್ರವಾಗಿವೆ. ಹಲವರು ಕುರುಡರಾಗಿದ್ದಾರೆ. ಕನ್ನಡಿಯಲ್ಲಿ ಮುಖ ನೋಡಿದರೆ, ಸದಾ ಸೇನೆಯ ಅನ್ಯಾಯ ನೆನಪಿಗೆ ಬರಬೇಕು. ಅಂತಹ ಸ್ಥಿತಿಯನ್ನು ಸೇನೆ ಅಲ್ಲಿನ ಜನಸಾಮಾನ್ಯರಿಗೆ ನಿರ್ಮಾಣ ಮಾಡಿದೆ. ಆದರೆ ಪ್ರತಿಭಟನೆ ಮಾತ್ರ ತಣ್ಣಗಾಗಿಲ್ಲ. ಅಂದರೆ ಗುಂಡಿನಿಂದ ಜನರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಹೀಗಿರುವಾಗ ಕಾಶ್ಮೀರದ ಜನರ ಮೂಲಭೂತ ಬೇಡಿಕೆಗಳ ಬಗ್ಗೆ ಸರಕಾರ ಗಮನ ಹರಿಸಬೇಕು. ಮಾತುಕತೆಯ ಮೂಲಕವಷ್ಟೇ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗಲು ಸಾಧ್ಯ. ಇಲ್ಲವಾದರೆ ಪರಿಸ್ಥಿತಿಯನ್ನು ನೆರೆರಾಷ್ಟ್ರಗಳು ದುರುಪಯೋಗ ಪಡಿಸಿಕೊಳ್ಳುತ್ತವೆ.
Next Story





