ಭಾರತದ ಆಸ್ಪತ್ರೆಯಲ್ಲಿ ಕರ್ಝಾಯಿಗೆ ಪುತ್ರಿ ಜನನ

ಹೊಸದಿಲ್ಲಿ, ಸೆ.4: ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯಿ ಅವರ ಪತ್ನಿ ಶನಿವಾರ ಇಲ್ಲಿಯ ಅಪೋಲೊ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಕರ್ಝಾಯಿ ದಂಪತಿ ಈಗಾಗಲೇ ಮೂವರು ಮಕ್ಕಳನ್ನು ಹೊಂದಿದ್ದಾರೆ.
ಶನಿವಾರ ಲಂಡನ್ನಿಗೆ ತೆರಳುವ ಮಾರ್ಗದಲ್ಲಿ ಪತ್ನಿ ಮತ್ತು ಮಗುವನ್ನು ನೋಡಲು ಕರ್ಜಾಯಿ ಅಪೋಲೊ ಆಸ್ಪತ್ರೆಗೆ ಸಂಕ್ಷಿಪ್ತ ಭೇಟಿಯನ್ನು ನೀಡಿದ್ದರು ಎಂದು ಭಾರತದಲ್ಲಿ ಅಫ್ಘಾನ್ ರಾಯಭಾರಿ ಶೈದಾ ಮುಹಮ್ಮದ್ ಅಬ್ದಾಲಿ ಅವರು ಸುದ್ದಿಗಾರರಿಗೆ ತಿಳಿಸಿದರು.
Next Story





