ಉಡುಪಿ, ಸೆ.4: ಸಿಟಿ ಬಸ್ ನಿಲ್ದಾಣ ಬಳಿ ಸೆ.3ರಂದು ಮಧ್ಯಾಹ್ನ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಮಣಿಪಾಲದ ಜಯರಾಜ್ ಸನಿಲ್(22) ಹಾಗೂ ಕಟಪಾಡಿ ಮಟ್ಟುವಿನ ರಾಜೇಶ್(42) ಎಂಬವರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 1,030 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.