ಜುಗಾರಿ ಆಟ: 7 ಮಂದಿಯ ಸೆರೆ
ಉಪ್ಪಿನಂಗಡಿ, ಸೆ.4: ಇಲ್ಲಿಗೆ ಸಮೀಪದ ಕೌಕ್ರಾಡಿ ಗ್ರಾಮದ ಪೊಟ್ಲಡ್ಕ ಎಂಬಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದತಂಡದ ಮೇಲೆ ಉಪ್ಪಿನಂಗಡಿ ಪೊಲೀ ಸರು ದಾಳಿ ನಡೆಸಿ 7 ಮಂದಿಯನ್ನು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ಗುಡ್ಡದ ಪೊದೆಗಳ ಮರೆಯಲ್ಲಿ ಟರ್ಪಾಲು ಹಾಸಿ ಹಣ ಪಣವಿಟ್ಟು ಜುಗಾರಿ ಆಟದಲ್ಲಿ ತೊಡಗಿದ್ದ ತಿಮ್ಮಪ್ಪಗೌಡ ಕಳೆಂಜ, ಚಂದ್ರಶೇಖರ ಗೌಡ ಕಳೆಂಜ, ವಿ.ಕೆ. ತಂಬಿ ಕೊಕ್ಕಡ, ರವಿ ಗೌಡ ಕಳೆಂಜ, ಶೇಖರ ಗೌಡ ಕಳೆಂಜ, ರಮೇಶ್ ನಾಯ್ಕ ಕೊಕ್ಕಡ, ಆದಂ ಕೌಕ್ರಾಡಿ ಎಂಬವರನ್ನು ಬಂಧಿಸಿ 4,500 ರೂ., ನಾಲ್ಕು ಬೈಕು, ನಾಲ್ಕು ಮೊಬೈಲ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Next Story





