ಜುಗಾರಿ: ಆರು ಮಂದಿ ಸೆರೆ
ಕಾರ್ಕಳ, ಸೆ.4: ಸಾಣೂರು ಗ್ರಾಮದ ಬಾವಗುತ್ತು ಎಂಬಲ್ಲಿ ಸೆ.3ರಂದು ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವಿಜಯ(30), ಯೋಗೀಶ(34), ಅಬ್ದುರ್ರಹ್ಮಾನ್ (43), ಸಲಾಂ (39), ರಾಜ (22), ಶ್ರೀಧರ ಶೆಟ್ಟಿ (52) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 7,810 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





