ಯುವತಿಗೆ ಎಸ್ಸೆಮ್ಮೆಸ್ ಸಂದೇಶ: ಯುವಕನ ಮೇಲೆ ಕೇಸು ದಾಖಲು
ಸುಳ್ಯ, ಸೆ.4: ಮೊಬೈಲ್ ರೀಚಾರ್ಜಿಗೆಂದು ಬಂದಿದ್ದ ಯುವತಿಗೆ ಸಂದೇಶ ರವಾನಿಸಿ ಹಿಂದೂ ಯುವಕನ ಹೆಸರಿನಲ್ಲಿ ಪರಿಚಯ ಮಾಡಲು ಹೊರಟಾತನನ್ನು ಸುಳ್ಯ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಳ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಆಗಾಗ ಕುಳಿತುಕೊಳ್ಳುತ್ತಿದ್ದ ಎನ್ನಲಾದ ಪೈಚಾರಿನ ರಹೀಂ ಎಂಬಾತ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ರೀಚಾರ್ಜಿಗೆ ಬಂದಾಗ ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದು ಸಂದೇಶ ಕಳುಹಿಸಲು ಆರಂಭಿಸಿದ್ದ. ಯುವತಿ ಈ ಸಂಗತಿಯನ್ನು ಸಂಘಪರಿವಾರದ ಕಾರ್ಯಕರ್ತರಿಗೆ ತಿಳಿಸಿ, ಸುಳ್ಯ ಠಾಣೆಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಯುವಕನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Next Story





