ಆಸ್ಟ್ರೇಲಿಯಕ್ಕೆ ಸರಣಿ ಜಯ

ಪಲ್ಲೇಕೆಲೆ, ಸೆ.4: ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಐದನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಐದು ವಿಕೆಟ್‌ಗಳ ಜಯ ಗಳಿಸಿದ ಆಸ್ಟ್ರೇಲಿಯ ಸರಣಿಯನ್ನು 4-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಗೆಲುವಿಗೆ 196 ರನ್ ಮಾಡಬೇಕಿದ್ದ ಆಸ್ಟ್ರೇಲಿಯ 43 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 199 ರನ್ ಗಳಿಸಿತು.
ನಾಯಕ ಡೇವಿಡ್ ವಾರ್ನರ್ 106 ರನ್(167ನಿ, 126ಎ, 9ಬೌ) ಮತ್ತು ಜಾರ್ಜ್ ಬೈಲಿ 44 ರನ್ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ 40.2 ಓವರ್‌ಗಳಲ್ಲಿ 195 ರನ್‌ಗಳಿಗೆ ಆಲೌಟಾಗಿತ್ತು.
ಆಸ್ಟ್ರೇಲಿಯ ತಂಡದ ಮಿಚೆಲ್ ಸ್ಟಾರ್ಕ್(40ಕ್ಕೆ3), ಹೆಡ್(22ಕ್ಕೆ2), ಝಾಂಪ(43ಕ್ಕೆ2) ,ಹೇಸ್ಟಿಂಗ್ಸ್(30ಕ್ಕೆ1), ಬೊಲಾಂಡ್(28ಕ್ಕೆ1), ಫಾಕ್ನೆರ್(30ಕ್ಕೆ1) ದಾಳಿಗೆ ಸಿಲುಕಿ ಬೇಗನೆ ಆಲೌಟಾಗಿತ್ತು. ಲಂಕಾದ ಗುಣತಿಲಕ(39), ಡಿ ಸಿಲ್ವ(34), ಮೆಂಡಿಸ್(33), ಪಥಿರಣ(32),ತರಂಗ(15) ಮತ್ತು ಪೆರೆರಾ(14) ಮತ್ತು ಶಣಕ (13) ಎರಂಡಕೆಯ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಶ್ರೀಲಂಕಾ 40.2 ಓವರ್‌ಗಳಲ್ಲಿ ಆಲೌಟ್195(ಗುಣತಿಲಕ 39, ಡಿ ಸಿಲ್ವ 34, ಮೆಂಡಿಸ್ 33; ಸ್ಟಾರ್ಕ್ 40ಕ್ಕೆ 3).
ಆಸ್ಟ್ರೇಲಿಯ 43 ಓವರ್‌ಗಳಲ್ಲಿ 199/5(ವಾರ್ನರ್ 106, ಬೈಲಿ 44; ಪೆರೆರಾ51ಕ್ಕೆ 3).
ಪಂದ್ಯಶ್ರೇಷ್ಠ :ಡೇವಿಡ್ ವಾರ್ನರ್
ಸರಣಿಶ್ರೇಷ್ಠ: ಜಾರ್ಜ್ ಬೈಲಿ.





