Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜಗತ್ತಿನ ಟಾಪ್ ಮೂರು ಅತ್ಯಂತ ಸುರಕ್ಷಿತ...

ಜಗತ್ತಿನ ಟಾಪ್ ಮೂರು ಅತ್ಯಂತ ಸುರಕ್ಷಿತ ದೇಶಗಳಲ್ಲಿ ಎರಡು ಗಲ್ಫ್ ರಾಷ್ಟ್ರಗಳು

ಯಾವುವು ಅತ್ಯಂತ ಅಪಾಯಕಾರಿ ದೇಶಗಳು ?: ನೂರರ ಪಟ್ಟಿಯಲ್ಲಿಲ್ಲ ಅಮೆರಿಕಕ್ಕೆ ಸ್ಥಾನ

ವಾರ್ತಾಭಾರತಿವಾರ್ತಾಭಾರತಿ5 Sept 2016 12:33 PM IST
share
ಜಗತ್ತಿನ ಟಾಪ್ ಮೂರು ಅತ್ಯಂತ ಸುರಕ್ಷಿತ ದೇಶಗಳಲ್ಲಿ ಎರಡು ಗಲ್ಫ್ ರಾಷ್ಟ್ರಗಳು

ಜಿದ್ದಾ, ಸೆ.5: ವಿಶ್ವದ ಮೂರು ಅತ್ಯಂತ ಸುರಕ್ಷಿತ ದೇಶಗಳಲ್ಲಿಸೌದಿ ಅರೇಬಿಯಾ ಮೂರನೆ ಸ್ಥಾನ ಪಡೆದಿದೆ. ಈ ದೇಶದಲ್ಲುಂಟಾಗುವ ಕೆಲವೇ ಕೆಲವು ಪ್ರಾಕೃತಿಕ ವಿಕೋಪಗಳು ಹಾಗೂ ಆರೋಗ್ಯ, ಸುರಕ್ಷತೆ ಹಾಗೂ ಮೂಲ ಸೌಕರ್ಯಾಭಿವೃದ್ಧಿಗೆ ಅಲ್ಲಿನ ಸರಕಾರ ಮಾಡುತ್ತಿರುವ ಸತತ ಪ್ರಯತ್ನಗಳೇ ಇದಕ್ಕೆ ಕಾರಣವಾಗಿದೆ.
ವಿಶ್ವ ಸಂಸ್ಥೆ ವಿಶ್ವವಿದ್ಯಾಲಯದ ದಿ ಇನ್ಸ್ಟಿಟ್ಯೂಟ್ ಫಾರ್ ಎನ್ವಿರಾನ್ಮೆಂಟ್ ಆ್ಯಂಡ್ ಹ್ಯೂಮನ್ ಸೆಕ್ಯುರಿಟಿ ವರದಿಯ ಪ್ರಕಾರ ಪ್ರಥಮ ಎರಡು ಸ್ಥಾನಗಳು ಮಾಲ್ಟಾ ಹಾಗೂ ಕತರ್‌ಗೆ ಹೋಗಿವೆ.
ಆದರೆ ಆಶ್ಚರ್ಯಕರವಾಗಿ ಅಮೆರಿಕಾ ಈ ಪಟ್ಟಿಯಲ್ಲಿ ಪ್ರಥಮ ನೂರು ದೇಶಗಳಲ್ಲಿಯೂ ಸ್ಥಾನ ಪಡೆದಿಲ್ಲವಾಗಿದ್ದು, ಅದು 116ನೆ ಸ್ಥಾನದಲ್ಲಿದೆ. ಅದೇ ಸಮಯ ವನುಆಟು ಹಾಗೂ ಟೋಂಗಾ, ಫಿಲಿಪೈನ್ಸ್, ಗಾಟೆಮಾಲ ಹಾಗೂ ಬಾಂಗ್ಲಾದೇಶ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳೆಂದು ಈ ವರದಿ ತಿಳಿಸಿದೆ.
ಇನ್ಸ್ಟಿಟ್ಯೂಟ್ ಫಾರ್ ಎನ್ವಿರಾನ್ಮೆಂಟ್ ಆ್ಯಂಡ್ ಹ್ಯೂಮನ್ ಸೆಕ್ಯುರಿಟಿಯ ಅಧ್ಯಯನಕಾರರು ಇತ್ತೀಚೆಗೆ 171 ದೇಶಗಳಲ್ಲಿ ಇಂತಹ ದುರಂತಗಳು ಹಾಗೂ ಅವುಗಳು ಒಡ್ಡುವ ಅಪಾಯದ ಬಗ್ಗೆ ಅಧ್ಯಯನ ನಡೆಸಿದೆ.
ಈ ಅಧ್ಯಯನವು ವಿವಿಧ ದೇಶಗಳ ಪರಿಸರ, ಮೂಲಭೂತ ಸೌಕರ್ಯ ಮುಂತಾದವುಗನ್ನು ಪರಿಗಣನೆಗೆ ತೆಗೆದುಕೊಂಡು ಆ ದೇಶದ ಸುರಕ್ಷಾ ವ್ಯವಸ್ಥೆ ಸಂತ್ರಸ್ತರ ಸಹಾಯಕ್ಕೆ ಎಷ್ಟು ಬೇಗ ಆಗಮಿಸುವುದು ಮುಂತಾದ ವಿಚಾರಗಳನ್ನು ಪರಿಗಣಿಸಿ ವರದಿ ನೀಡಿದೆಯೆಂದು ಅಧ್ಯಯನದ ಪ್ರಾಜೆಕ್ಟ್ ಮ್ಯಾನೇಜರ್ ಪೀಟರ್ ಮ್ಯುಕ್ ಹೇಳಿದ್ದಾರೆ.
ತೀರಾ ಕಡಿಮೆ ಸುರಕ್ಷಾ ವ್ಯವಸ್ಥೆಯಿರುವ 15 ದೇಶಗಳಲ್ಲಿ 13 ದೇಶಗಳು ಆಫ್ರಿಕನ್ ಖಂಡದಲ್ಲಿವೆಯೆಂದು ಈ ವರದಿ ಹೇಳಿದೆ. ಮುಖ್ಯವಾಗಿ ವನುಆಟು ಹಾಗೂ ಟೋಂಗಾ ಆಗಾಗ ಭೂಕಂಪ ಹಾಗೂ ಜ್ವಾಲಾಮುಖಿಗಳಿಂದ ತೊಂದರೆಗೀಡಾಗಿವೆ.
ಈ ವರದಿ ನೀಡಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದೇಶಗಳಲ್ಲಿ ಉತ್ತಮ ಮೂಲಭೂತ ಸೌಕರ್ಯಗಳು, ಟೆಲಿಕಮ್ಯುನಿಕೇಶನ್ ಸೌಲಭ್ಯಗಳು, ವಿದ್ಯುತ್, ಒಳಚರಂಡಿ, ನೀರು ಹಾಗೂ ಆಹಾರ ಪೂರೈಕೆ ವ್ಯವಸ್ಥೆಗಳಿವೆಯೆಂದು ಹೇಳಲಾಗಿದೆ.
ಆಸ್ಟ್ರೇಲಿಯಾದಲ್ಲಿ ಆಗಾಗ ನೆರೆ ಹಾವಳಿಯುಂಟಾಗುವುದರಿಂದ ಈ ದೇಶವು ಪಟ್ಟಿಯಲ್ಲಿ 121ನೆ ಸ್ಥಾನ ಪಡೆದಿದೆ. ಪ್ರಾಕೃತಿಕ ವಿಕೋಪಗಳು ಸಾಮಾನ್ಯವಾಗಿರುವ ಜಪಾನ್ ಕೂಡಪಟ್ಟಿಯಲ್ಲಿ ಕೆಳಗಿನ ಸ್ಥಾನ ಪಡೆದುಕೊಂಡಿದೆ.
ಅದೇ ಸಮಯ ಲೈಬೀರಿಯಾ (56ನೆ ಸ್ಥಾನ), ಝಾಂಬಿಯಾ(66) ಹಾಗೂ ಮಧ್ಯ ಆಫ್ರಿಕಾ (71 ನೆ ಸ್ಥಾನ) ಮುಖ್ಯವಾಗಿ ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಂಪನ್ಮೂಲಗಳ ಕೊರತೆಯನ್ನನುಭವಿಸುತ್ತಿವೆ.
ಹಲವಾರು ದೇಶಗಳಲ್ಲಿ ಕೆಟ್ಟ ರಸ್ತೆಗಳಿಂದಾಗಿ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ತುರ್ತು ಸೇವಾ ತಂಡಗಳಿಗೆ ಕೆಲ ಪ್ರದೇಶಗಳಿಗೆ ಸಹಾಯ ನೀಡಲು ಧಾವಿಸಲು ಕಷ್ಟಸಾಧ್ಯವಾಗುತ್ತಿದೆಯೆಂದೂ ವರದಿಯಲ್ಲಿ ತಿಳಿಸಲಾಗಿದೆ.
‘‘ವಿವಿಧ ದೇಶಗಳು ತಮ್ಮಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳನ್ನುಹಾಗೂ ಕೆಲವೆಡೆ ನಡೆಯುತ್ತಿರುವ ಯುದ್ಧಗಳನ್ನು ನಿಲ್ಲಿಸಲು ಅಸಾಧ್ಯವಾದರೂ, ಅಲ್ಲಿನ ಸರಕಾರಗಳು ಇವುಗಳಿಂದ ನಾಗರಿಕರಿಗುಂಟಾಗುವ ಅಪಾಯವನ್ನು ಕಡಿಮೆಗೊಳಿಸುವಲ್ಲಿ ಹಾಗೂ ಸಂತ್ರಸ್ತರ ಸಂಖ್ಯೆಯನ್ನು ಕಡಿಮೆಗೊಳಿಸುವಲ್ಲಿಕ್ರಮ ಕೈಗೊಳ್ಳಬಹುದು’’ ಎಂದು ಈ ಅಧ್ಯಯನ ವರದಿ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X