ಕಾಶ್ಮೀರದ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ: ರಾಜನಾಥ್ ಸಿಂಗ್

ಶ್ರೀನಗರ, ಸೆ.5: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಅಲ್ಲಿ ಕಂಡು ಬಂದಿರುವ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಶ್ರೀನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಯಾವತ್ತೂ ವಿಭಜಿಸಲು ಸಾಧ್ಯವಿಲ್ಲ ಎಂದು ಪ್ರತ್ಯೇಕತಾವಾದಿಗಳಿಗೆ ತಿರುಗೇಟು ನೀಡಿದರು.
ಸರ್ವ ಪಕ್ಷದ ನಿಯೋಗ ಗವರ್ನರ್, ಮುಖ್ಯಮಂತ್ರಿಯನ್ನು ಭೇಟಿಯಾಗಿದೆ.300 ಮಂದಿಯನ್ನು ನಿಯೋಗ ಭೇಟಿಯಾಗಿದೆ.
ರಾಜಕೀಯ ಪಕ್ಷಗಳು, ನಾಗರಿಕ ಸಮಾಜ, ವಿಶ್ವವಿದ್ಯಾಲಯ ಶಿಕ್ಷಕರು ಮತ್ತು ಕುಲಪತಿ , ಹಣ್ಣು ಬೆಳೆಗಾರರು, ವಿದ್ಯಾರ್ಥಿಗಳು, ಸಾರ್ವಜನಿಕರು, ಬುದ್ಧಿಜೀವಿಗಳನ್ನು ಭೇಟಿ ಮಾಡಲಾಗಿದೆ..ಪ್ರತಿಯೊಬ್ಬರೂ ಕಾಶ್ಮೀರದಲ್ಲಿನ ಸ್ಥಿತಿಗತಿಯಲ್ಲಿ ಸುಧಾರಣೆ ಬಯಸಿದ್ದಾರೆ.
ಕೆಲವು ಮಂದಿ ಸದಸ್ಯರು ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಹುರಿಯತ್ ನ್ನು ನಿಯೋಗ ಭೇಟಿಯಾಗುವುದು ಸರಿ ಅಥವಾ ತಪ್ಪು ಎಂದು ನಾನು ಹೇಳುವುದಿಲ್ಲ. ಆದರೆ ಅವರು ಮಾತುಕತೆಗೆ ಸಿದ್ದರಿಲ್ಲ ಎಂದರು ರಾಜನಾಥ್ ಸಿಂಗ್





