Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈ ಆರ್.ಟಿ.ಎ.ನಿಂದ ವಾಹನ ಮಾಲಕರಿಗೆ...

ದುಬೈ ಆರ್.ಟಿ.ಎ.ನಿಂದ ವಾಹನ ಮಾಲಕರಿಗೆ ಸಾರಿಗೆ ನಿಯಮಗಳ ಮಹತ್ವದ ಮಾಹಿತಿ

ಯಾವುದಕ್ಕೆ ದಂಡ ? ಯಾವುದಕ್ಕೆ ವಿನಾಯಿತಿ ?

ವಾರ್ತಾಭಾರತಿವಾರ್ತಾಭಾರತಿ5 Sept 2016 1:26 PM IST
share
ದುಬೈ ಆರ್.ಟಿ.ಎ.ನಿಂದ ವಾಹನ ಮಾಲಕರಿಗೆ ಸಾರಿಗೆ ನಿಯಮಗಳ ಮಹತ್ವದ ಮಾಹಿತಿ

ದುಬೈ ಸೆ.5: ದುಬೈ ನಿವಾಸಿಗಳು ತಮ್ಮ ಸ್ನೇಹಿತರಿಂದ ಹಾಗೂ ಸಂಬಂಧಿಕರಿಂದ ಶುಲ್ಕ ಸಂಗ್ರಹಿಸುವುದಿಲ್ಲವೆಂದಾದರೆ ಅವರನ್ನು ಎಷ್ಟು ಬಾರಿ ಬೇಕಾದರೂತಮ್ಮೊಂದಿಗೆ ವಾಹನದಲ್ಲಿ ಕುಳ್ಳಿರಿಸಿಕೊಂಡು ಕರೆದೊಯ್ಯಬಹುದು ಎಂದು ದುಬೈ ರಸ್ತೆ ಸಾರಿಗೆ ಪ್ರಾಧಿಕಾರ ಹೇಳಿದೆ.

ಅನಧಿಕೃತ ಟ್ಯಾಕ್ಸಿಗಳು ತಂದೊಡ್ಡುವ ಸಮಸ್ಯೆಯವಿಚಾರವಾಗಿ ಪ್ರವಾಸಿಗರಲ್ಲಿ ಹಾಗೂ ದುಬೈ ನಿವಾಸಿಗಳಲ್ಲಿ ಜಾಗೃತಿಯನ್ನುಂಟು ಮಾಡುವ ಅಭಿಯಾನವೊಂದಕ್ಕೆ ಆರ್ ಟಿ ಎ ಇತ್ತೀಚೆಗೆ ಚಾಲನೆ ನೀಡಿದ್ದು, ಅನಧಿಕೃತವಾಗಿ ಟ್ಯಾಕ್ಸಿ ಸೇವೆ ಸಡೆಸುವವರಿಗೆ ವಿಧಿಸಲಾಗುವ ದಂಡ ಮೊತ್ತದ ಬಗ್ಗೆ ವಿಮಾನ ನಿಲ್ದಾಣ ಹಾಗೂ ರಶೀದ್ ಪೋರ್ಟ್ ಸಮೀಪದ ಹಲವು ಪ್ರದೇಶಗಳಲ್ಲಿ ನೋಟಿಸ್ಗಳನ್ನು ಲಗತ್ತಿಸಲಾಗಿದೆ. ತಮ್ಮ ಸ್ನೇಹಿತರನ್ನು ಹಾಗೂ ಸಂಬಂಧಿಕರನ್ನು ತಮ್ಮ ವಾಹನಗಳಲ್ಲಿ ಕರೆದೊಯ್ಯುವ ಹಲವು ದುಬೈ ನಾಗರಿಕರಿಗೆ ಈ ನಿಯಮಾವಳಿಯಿಂದ ಸಮಸ್ಯೆಯಾಗಬಹುದೆಂಬ ಭಯವಿರುವ ಹಿನ್ನೆಲೆಯಲ್ಲಿ ಆರ್ ಟಿ ಎ ಮೇಲಿನಂತೆ ಸ್ಪಷ್ಟೀಕರಣ ನೀಡಿದೆ.
ಅನಧಿಕೃತ ಟ್ಯಾಕ್ಸಿಗಳ ಮೂಲಕ ಸಂಚರಿಸದಂತೆ ಆರ್ ಟಿ ಎ ದುಬೈ ನಾಗರಿಕರಿಗೆ ಮನವಿ ಮಾಡಿದೆ. ಅನಧಿಕೃತ ಟ್ಯಾಕ್ಸಿಗಳು ಪ್ರಯಾಣಿಕರನ್ನು ಕರೆದೊಯ್ಯುವುದು ಕಂಡು ಬಂದಿದ್ದೇ ಆದರಲ್ಲಿ ಅಂತಹ ಟ್ಯಾಕ್ಸಿಗಳಿಗೆ 20,000 ದಿರಮ್ಸ್ ನಿಂದ 50,000 ದಿರಮ್ಸ್ ತನಕ ದಂಡ ವಿಧಿಸಲಾಗುವುದು. ದಂಡ ಮೊತ್ತವನ್ನು ಈ ವರ್ಷ ನಿರ್ಣಯ ಸಂಖ್ಯೆ 6, 2016 ಮುಖಾಂತರ ಪರಿಷ್ಕರಿಸಲಾಗಿದೆ. ಅದೇ ಸಮಯ ಪರವಾನಿಗೆಯಿಲ್ಲದೆ ಕಾರ್ಯಾಚರಿಸುವ ಮೊಬೈವ್ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆಗಳು ಕಂಡು ಬಂದಲ್ಲಿ ಅವುಗಳಿಗೆ50,000 ದಿರಮ್ಸ್ ತನಕ ದಂಡ ವಿಧಿಸಲಾಗುವುದು. ತರುವಾಯ ಟ್ಯಾಕ್ಸಿ ಅಥವಾ ಲಿಮೋಸಿನ್ ವಾಹನಗಳನ್ನು ಚಲಾಯಿಸಲು ಪರವಾನಿಗೆಯಿಲ್ಲದ ಚಾಲಕರನ್ನು ನೇಮಿಸಿದ್ದೇ ಆದಲ್ಲಿ ಸಂಬಂಧಿತ ಸಂಸ್ಥೆಗಳು 20,000 ದಿರಮ್ಸ್ ತನಕ ದಂಡ ಪಾವತಿಸಬೇಕಾಗುವುದು.

ಈತನ್ಮಧ್ಯೆ ತಮ್ಮ ಸ್ನೇಹಿತರು ಯಾ ಸಂಬಂಧಿಗಳನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ಯಾ ಅಲ್ಲಿಂದ ನಗರಕ್ಕೆ ಹೋಗುವ ವಾಹನಿಗರನ್ನು ಆರ್ ಟಿ ಎ ಅಧಿಕಾರಿಗಳು ತನಿಖೆ ನಡಸುತ್ತಿದ್ದು, ಕೆಲ ಸಂದರ್ಭಗಳಲ್ಲಿ ಕಾರುಗಳ ಚಾಲಕರು ಹಾಗೂ ಅದರಲ್ಲಿ ಪ್ರಯಾಣಿಸುವವರ ಸಂಬಂಧಗಳನ್ನು ಸಾಬೀತುಪಡಿಸಲು ಪುರಾವೆಗಳನ್ನು ಕೇಳಲಾಗುತ್ತಿದೆ ಎಂದು ಕೆಲವರು ದೂರಿದ್ದಾರೆ. ಆದರೆ ಸಂಬಂಧಗಳ ಪುರಾವೆಯನ್ನು ಕೊನೆಯ ಕ್ರಮವಾಗಿ ಕೇಳಲಾಗುತ್ತದೆ, ಎಂದು ಆರ್ ಟಿ ಎ ಇದರ ಸಾರ್ವಜನಿಕ ಸಾರಿಗೆ ಏಜನ್ಸಿ ಸಿಇಒ ಅಬ್ದುಲ್ಲಾ ಯೂಸುಫ್ ಅಲ್ ಅಲಿ ಹೇಳಿದ್ದಾರೆ.
ಅದೇ ಸಮಯ ತನ್ನ ಮೇಲೆ ತಪ್ಪಾಗಿ ದಂಡ ವಿಧಿಸಲಾಗಿದೆ ಎಂದು ಯಾವುದೇ ನಾಗರಿಕ ತಿಳಿದುಕೊಂಡಲ್ಲಿ ಅಂತಹವರು ತಮ್ಮ ದೂರನ್ನು ಆರ್ ಟಿ ಎಗೆ ಸಂಖ್ಯೆ 8009090 ಗೆ ಕರೆ ಮಾಡುವ ಮೂಲಕ ದಾಖಲಿಸಬಹುದು ಎಂದು ಅವರು ವಿವರಿಸಿದ್ದಾರೆ.
ದುಬೈ ನಿಂದ ಬೇರೆ ಯಾವುದೇ ಎಮಿರೇಟ್ ದೇಶಕ್ಕೆ ಪ್ರಯಾಣಿಸುವಲ್ಲಿ ಅಗತ್ಯ ಪರವಾನಿಗೆ ಹೊಂದದೇ ಇದ್ದ ಹೊರತಾಗಿಯೂ ಅಲ್ಲಿಗೆ ಪ್ರಯಾಣಿಸುವವಾಹನಗಳಿಗೂ 20,000 ದಿರಮ್ಸ್ ತನಕ ದಂಡ ವಿಧಿಸಲಾಗುವುದು.
ಸಾರ್ವಜನಿಕ ಸಾರಿಗೆ ಕ್ಷೇತ್ರವನ್ನು ಪುನರ್ ಸಂಘಟಿಸಿ ದುಬೈ ರಾಜಕುಮಾರ್ ಶೈಖ್ ಹಮ್ ದನ್ ಬಿನ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೌಮ್ ಕೆಲ ಸಮಯದ ಹಿಂದೆ ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X