ಬನ್ನೇರುಘಟ್ಟದಲ್ಲಿ ಪ್ರವಾಸಿಗರ ವಾಹನದ ಮೇಲೆರಗಿದ ಸಿಂಹಗಳು !
ವೀಡಿಯೊ ನೋಡಿ

ಬೆಂಗಳೂರು, ಸೆ. 5 : ಇಲ್ಲಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನವೊಂದರ ಮೇಲೆ ಮೂರು ಸಿಂಹಗಳು ದಾಳಿ ಮಾಡಿದ ಘಟನೆ ತಡವಾಗಿ ಬಹಿರಂಗವಾಗಿದೆ. ಮೊದಲು ಎರಡು ಸಿಂಹಗಳು ಕಾರನ್ನು ತಡೆದು ಮತ್ತೆ ಕಾರಿನ ಮೇಲೆರಲು ಪ್ರಯತ್ನಿಸಿ , ಅದರ ಸುತ್ತಮುತ್ತ ತಿರುಗಿ ಕೊನೆಗೆ ಹಿಂಬಾಲಿಸಿದ ಘಟನೆ ನಡೆದಿದೆ. ಚೇಂಜ್ ಡಾಟ್ ಆರ್ಗ್ ನ ದುರ್ಗಾ ನಂದಿನಿ ಅವರು ಇದರ ವೀಡಿಯೊ ಚಿತ್ರೀಕರಿಸಿದ್ದು ದಿ ನ್ಯೂಸ್ ಮಿನಿಟ್ ವೆಬ್ ಸೈಟ್ ನ ಪ್ರಧಾನ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ಇದನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.
ದಾಳಿಯಿಂದ ಕಾರಿಗೆ ಹಾನಿಯಾಗದ್ದು ರಂಧ್ರವಾಗಿದೆ ಎಂದು ಎಂದು ಬರೆದಿರುವ ಧನ್ಯಾ ಸಿಂಹಗಳು ಸ್ವಲ್ಪ ಹೊತ್ತು ವಾಹನವನ್ನು ನಿಲ್ಲಿಸಿ ಭಯ ಸೃಷ್ಟಿಸಿದ್ದವು ಎಂದು ಹೇಳಿದ್ದಾರೆ.
Next Story





