ರೈಲ್ವೆ ಅಂಚೆ ಸೇವಾ ವಿಭಾಗ: ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ

ಮಂಗಳೂರು, ಸೆ.5: ಅಂಚೆ ಇಲಾಖೆಯ ಮಂಗಳೂರು ರೈಲ್ವೆ ಅಂಚೆ ಸೇವಾ (ಆರ್.ಎಂ.ಎಸ್.) ವಿಭಾಗದಲ್ಲಿ ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೇಶವ ಅಮೀನ್ ಹಾಗೂ ಟಿ.ಟಿ.ಭಟ್ ಅವರು ಸೇವೆಯಿಂದ ನಿವೃತ್ತರಾದ ಸಲುವಾಗಿ ಬೀಳ್ಕೊಡುಗೆ ಸಮಾರಂಭ ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿರುವ ಆರ್.ಎಂ.ಎಸ್. ಕಚೇರಿಯಲ್ಲಿ ಇತ್ತೀಚೆಗೆ ಜರಗಿತು.
ಆರ್.ಎಂ.ಎಸ್. ಮನರಂಜನಾ ಕೂಟ ಏರ್ಪಡಿಸಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ಸಬ್ ರೆಕಾರ್ಡ್ ಅಧಿಕಾರಿ ಯೂನುಸ್ ಮಿಯಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆರ್.ಎಂ.ಎಸ್. ಕ್ಯೂ ವಿಭಾಗದ ಎಎಸ್ಪಿರವೀಂದ್ರ ನಾಯಕ್ ಭಾಗವಹಿಸಿದ್ದರು. ಹಲವು ನಿವೃತ್ತ ಹಾಗೂ ಕಾರ್ಯನಿರ್ವಹಿಸುತ್ತಿರುವ ಸಹೋದ್ಯೋಗಿಗಳು ನಿವೃತ್ತರಾಗುತ್ತಿರುವವರ ಜೊತೆಗಿನ ಒಡನಾಟವನ್ನು ಈ ಸಂದರ್ಭ ನೆನಪಿಸಿಕೊಂಡರು.
ಆರ್.ಎಂ.ಎಸ್. ಮನರಂಜನಾ ಕೂಟದ ಕಾರ್ಯದರ್ಶಿ ಗಾಯತ್ರಿ ಸ್ವಾಗತಿಸಿದರು. ಎ.ಆರ್.ಡಿ ಕೋಸ್ಟ ವಂದಿಸಿದರು. ಸುಲ್ತಾನ್ ಮನ್ಸೂರ್ ಕಾರ್ಯಕ್ರಮ ನಿರೂಪಿಸಿದರು.
Next Story





