ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ ಆಪ್ ಶಾಸಕ

ಚಂಡಿಗಡ,ಸೆಪ್ಟಂಬರ್ 5: ಪಂಜಾಬ್‌ನಲ್ಲಿ ಆಮ್ ಆದ್ಮಿನಾಯಕರು ಪಾರ್ಟಿಯ ಟಿಕೆಟ್ ಪಡೆಯಲು ಮಹಿಳೆಯರನ್ನು ಕೂಡಾ ಬಳಸುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್‌ಗೆ ಪಕ್ಷದ ನಾಯಕರೊಬ್ಬರು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಟಿಕೆಟ್ ಖಚಿತಗೊಳಿಸಲಿಕ್ಕಾಗಿ ಪಕ್ಷದ ಕೆಲವು ನಾಯಕರು ಮಹಿಳೆಯರ ಶೋಷಣೆ ನಡೆಸುತ್ತಿದ್ದಾರೆ ಎಂದು ದಿಲ್ಲಿ ಶಾಸಕ ದೇವೀಂದರ್ ಶೇರಾವತ್ ಪತ್ರ ಮೂಲಕ ಕೇಜ್ರಿವಾಲ್‌ಗೆ ತಿಳಿಸಿದ್ದಾರೆ.
ಹಿರಿಯ ನಾಯಕರೇ ಮಹಿಳೆಯರಿಂದ ಇಂತಹ ಕೆಲಸವನ್ನು ಮಾಡಿಸುತ್ತಿದ್ದಾರೆ. ಇದನ್ನು ಸಾಬೀತುಪಡಿಸಲು ತನ್ನ ಬಳಿ ಸಾಕ್ಷ್ಯಗಳಿಲ್ಲ ಎಂದು ಅವರು ಹೇಳಿದ್ದಾರೆ. ದಿಲೀಪ್ ಪಾಂಡೆಯಂತಹವರು ಈ ಕೆಲಸವನ್ನುದಿಲ್ಲಿಯಲ್ಲಿಯೂ ಮಾಡುತ್ತಿದ್ದಾರೆ. ಪಕ್ಷದಲ್ಲಿರುವ ಒಂದು ವಿಭಾಗ ಪಕ್ಷದ ವರ್ಚಸ್ಸಿಗೆ ಕಳಂಕ ಹಚ್ಚುತ್ತಿದೆ. ಪಂಜಾಬ್‌ನ ಪಕ್ಷದ ನಾಯಕರಾದ ಆಶುತೋಷ್, ಸಂಜಯ್‌ಸಿಂಗ್ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಶೇರಾವತ್ ಬರೆದಿದ್ದಾರೆ.
ಸಂದೀಪ್‌ಕುಮಾರ್‌ರ ಅಶ್ಲೀಲ ಸಿಡಿ ವಿವಾದ ಲಜ್ಜೆ ಸೃಷ್ಟಿಸಿದ ಬೆನ್ನಿಗೆ ಹಿರಿಯ ನಾಯಕ ಶೇರಾವತ್ ಪತ್ರ ಬರೆದಿದ್ದು, ಅದು ಬಹಿರಂಗವಾಗಿದೆ. ದಿಲ್ಲಿಯ ಪಕ್ಷದ ಕನ್ವೀನರ್ ದಿಲೀಪ್‌ಪಾಂಡೆಯ ಚಾರಿತ್ರ್ಯವನ್ನು ಅವರುಪ್ರಶ್ನಿಸಿದ್ದಾರೆ. ಇಂತಹ ಜನರನ್ನು ಹೊರದಬ್ಬುವಕ್ರಮ ಜರಗಬೇಕೆಂದು ಕೇಜ್ರಿವಾಲ್‌ಗೆ ಬರೆದ ಪತ್ರದಲ್ಲಿ ಶೇರಾವತ್ ಆಗ್ರಹಿಸಿದ್ದಾರೆಂದು ವರದಿ ತಿಳಿಸಿದೆ.





