ಆರ್ ಬಿಐ ನೂತನ ಗವರ್ನರ್ ಊರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ

ಮುಂಬೈ,ಸೆ.5: ಭಾರತೀಯ ರಿಸರ್ವ್ ಬ್ಯಾಂಕ್‌ನ ನೂತನ ಗವರ್ನರ್ ಆಗಿ ಡಾ.ಊರ್ಜಿತ್ ಪಟೇಲ್ ಇಂದು ಅಧಿಕಾರ ಸ್ವೀಕರಿಸಿದರು.
52 ವರ್ಷ ವಯಸ್ಸಿನ ಡಾ. ಊರ್ಜಿತ್ ಪಟೇಲ್ ಆರ್'ಬಿಐ'ನ 24ನೇ ಗವರ್ನರ್ ಆಗಿದ್ದಾರೆ. ಅವರು ಜನವರಿ 2013 ರಿಂದ ಆರ್‌ಬಿಐನ ಉಪಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು .
ಊರ್ಜಿತ್ ಪಟೇಲ್ ಅವರ ಅಧಿಕಾರದ ಅವಧಿ 3 ವರ್ಷ. ಹಿಂದಿನ ಗವರ್ನರ್ ರಘುರಾಮ್ ರಾಜನ್ ಅಧಿಕಾರದ ಅವಧಿ ಸೆಪ್ಟಂಬರ್ 4 (ರವಿವಾರ) ಕ್ಕೆ ಕೊನೆಗೊಂಡಿತ್ತು.
ಪಟೇಲ್ 1990ರಿಂದ 1995ರವರೆಗೆ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಯಲ್ಲಿ ಅಮೆರಿಕ, ಭಾರತ ಮತ್ತು ಬಹಾಮಾಸ್ ವ್ಯವಹಾರಗಳನ್ನು ನೋಡಿಕೊಳ್ಳುವ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ.
1996–1997ರಲ್ಲಿ ಐಎಂಎಫ್‌ನಿಂದ ನಿಯೋಜನೆ ಮೇರೆಗೆ ಆರ್‌ಬಿಐನಲ್ಲಿ ಕೆಲಸ ಮಾಡಿದ್ದಾರೆ. 1998ರಿಂದ 2001ರವರೆಗೆ ಹಣಕಾಸು ಸಚಿವಾಲಯದ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.
Next Story





