ನೆನಪಾಗುವ ಅಪರೂಪದ ಗುರುಗಳು ಶೇಖ್ ಆದಂ ಸಾಹೇಬ್
ಶಿಕ್ಷಕರ ದಿನಾಚರಣೆ ವಿಶೇಷ

ಶಿಕ್ಷಕರ ದಿನಾಚರಣೆ ಮತ್ತೆ ಬಂದಿದೆ ಬೆಳಗ್ಗೆ ಎದ್ದು ನಮ್ಮ ಶಾಲಾ ಕಾಲೇಜಿನ ಶಿಕ್ಷಕರಿಗೆ ಶುಭಾಶಯ ಹೇಳಬೇಕು ಎಂದು ಸಂಭ್ರಮ, ಅದೇ ತರ ಹಳೆ ವಿದ್ಯಾರ್ಥಿ ಆದ ನನಗೂ ಕೂಡ ಸಂಭ್ರಮ.
ಬಂಟ್ವಾಳ ತಾಲೂಕಿನ ಪುಟ್ಟ ಊರಾದ ವಗ್ಗದಲ್ಲಿ ಸಂತ ತೋಮಸರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜುಗಳಿವೆ ನನ್ನ ವಿದ್ಯಾರ್ಥಿ ಜೀವನ ಇಲ್ಲಿಂದಲೇ ಆರಂಭವಾಯಿತು, ನಾನು ಹಲವಾರು ಶಿಕ್ಷಕರನ್ನು ಕಂಡಿರುವೆ, ಎಲ್ಲರೂ ಉತ್ತಮ ಶಿಕ್ಷಕರೇ, ಆದರೆ ನಾನಿಲ್ಲಿ ಒಬ್ಬ ಅಪರೂಪದ ಗುರುವರ್ಯರನ್ನು ಪರಿಚಯಿಸಬೇಕು.
ಹೌದು, ಅವರೇ ಶೇಖ್ ಆದಂ ಸಾಹೇಬ್, ಇವರ ಮುಂದಾಳತ್ವದಲ್ಲಿ ನಮ್ಮ ಕಾಲೇಜಿನಲ್ಲಿ ಅನೇಕ ಬದಲಾವಣೆಗಳಾದವು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಕಾಲೇಜಿನಲ್ಲಿ ಸಿಸಿ ಕ್ಯಾಮೆರಾ, ಕಾಂಕ್ರೀಟ್ ರಸ್ತೆ , ಇನ್ನೂ ವಿಶಾಲವಾದ ಕಾಂಪೌಂಡ್ ಕಾಲೇಜಿನ ಚಂದವನ್ನು ಹೆಚ್ಚಿಸುತ್ತದೆ,
ಪರಿಸರ ಪ್ರೇಮಿ ನಮ್ಮ ಆದಂ ಮಾಸ್ಟರ್, ಕಾಲೇಜಿನ ಕ್ಯಾಂಪಸ್ ಒಳಗಡೆ ಹಲವಾರು ರೀತಿಯ ಗಿಡಗಳನ್ನು ನೆಟ್ಟು, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ, ಈ ಬಾರಿಯ ವನಮಹೋತ್ಸವ ದಿನದಂದು ಕಾಲೇಜಿಗೆ ಭೇಟಿ ನೀಡಿದಾಗ ನನಗೂ ಸಸಿ ನೀಡಿದರು,
ಸಂಸ್ಥೆಯ 27 ನೇ ವರ್ಷದ ಇತಿಹಾಸದಲ್ಲಿ 2015-16ರ ಎಸ್ಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ.100. ಇದಕ್ಕಾಗಿ ಎಲ್ಲಾ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ .
ಒಂದು ದಿನ ನಾನು ಸಮವಸ್ತ್ರ ಹಾಕದೇ ಕ್ಲಾಸಿಗೆ ಹೋಗಿದ್ದೆ ಆದಂ ಮಾಸ್ಟರ್ ನನ್ನನ್ನು ಕರೆದು ಕೇಳಿದರು ನೀನು ಸಮವಸ್ತ್ರ ಯಾಕೆ ಧರಿಸಲಿಲ್ಲ ಎಂದು, ಅದಕ್ಕೆ ಸರಿಯಾದ ಉತ್ತರ ಕೊಡಬೇಕಿತ್ತು, ನಾನು ಹೇಳಿದೆ ‘ಸರ್ ನಿಮಗೆ ನಾನು ಮಾತ್ರ ಕಾಣಿಸುವುದಾ ಬೇರೆ ಯಾರೂ ಕಾಣಿಸಲ್ವಾ’ ಎಂದು ಕೋಪಗೊಂಡ ಸರ್ ಮತ್ತು ನನಗೆ ಸಣ್ಣ ಯುಧ್ದವೇ ನಡೆದು ಹೋಯಿತು, ಒಂದೆರಡು ದಿನ ನಂತರ ಕರೆದು ನನ್ನ ತಿದ್ದಿದ ಮಾಸ್ಟರ್ ಅವರ ಕೆಲವೊಂದು ಮಾತುಗಳು ಇಂದು ನನ್ನ ಜೀವನದಲ್ಲಿ ಪ್ರಭಾವ ಬೀರಿದೆ.
ಮದ್ರಸಾಗಳಲ್ಲಿ ಧಾರ್ಮಿಕ ವಿದ್ಯಾಭ್ಯಾಸ ನೀಡಿದ ಉಸ್ತಾದರಿಗೂ ಹಾಗೂ ಎಲ್ಲಾ ಶಿಕ್ಷಕರನ್ನು ನೆನೆಸುತ್ತಾ, ಭಗವಂತನು ಆಯುಷ್ಯ ಆರೋಗ್ಯ ನೀಡಲಿ ಎಂಬ ಪ್ರಾರ್ಥನೆಯೊಂದಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.








