ಕಾಸರಗೋಡು : ಆಸ್ಪತ್ರೆಯಲ್ಲಿ ಕಳವು

ಕಾಸರಗೋಡು,ಸೆ.5 : ಕಾಸರಗೋಡು ಜನರಲ್ ಆಸ್ಪತ್ರೆಯ ಕ್ಷಯ ರೋಗ ಘಟಕದ ಕಂಪ್ಯೂಟರ್ ಮತ್ತು ಮೊನಿಟರ್ ಕಳವುಗೈದ ಘಟನೆ ನಡೆದಿದೆ. ಸೋಮವಾರ ಬೆಳಿಗ್ಗೆ ಕೇಂದ್ರದ ಬಾಗಿಲು ತೆರೆದ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದೆ. ಕೇಂದ್ರದ ಹೊರಗಿನ ಕಿಟಿಕಿ ಗಾಜುಗಳು ಹುಡಿ ಮಾಡಲಾಗಿದೆ.
ಸ್ಥಳದಲ್ಲಿ ಗಾಜು ತಾಗಿ ರಕ್ತದ ಕಲೆ ಪತ್ತೆಯಾಗಿದೆ. ಇದು ಕಳ್ಳನದ್ದು ಆಗಿರಬಹುದು ಎಂದು ಶಂಕಿಸಲಾಗಿದೆ.
ಒಳನುಗ್ಗಿದ ಕಳ್ಳ ಆಸ್ಪತ್ರೆ ಸಿಬಂದಿಯ ಸಮವಸ್ತ್ರ ಕೂಡಾ ಕಳವುಗೈದಿದ್ದಾನೆ. ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು ತನಿಖೆ ನಡೆಯುತ್ತಿದೆ
Next Story





