Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹಳ್ಳಿ ಮಕ್ಕಳಿಂದ ದೇಶಕ್ಕೆ ಕೀರ್ತಿ ತಂದ...

ಹಳ್ಳಿ ಮಕ್ಕಳಿಂದ ದೇಶಕ್ಕೆ ಕೀರ್ತಿ ತಂದ ಶೊರಿನ್ ರಿಯೋ ಸಂಸ್ಥೆ

ಅಂತಾರಾಷ್ಟ್ರೀಯ ಕರಾಟೆ ಪಟುಗಳ ಶಿಕ್ಷಕ ನದೀಮ್

ಇಮ್ತಿಯಾಝ್ ಶಾ ತುಂಬೆಇಮ್ತಿಯಾಝ್ ಶಾ ತುಂಬೆ5 Sept 2016 8:27 PM IST
share
ಹಳ್ಳಿ ಮಕ್ಕಳಿಂದ ದೇಶಕ್ಕೆ ಕೀರ್ತಿ ತಂದ ಶೊರಿನ್ ರಿಯೋ ಸಂಸ್ಥೆ

ಬಂಟ್ವಾಳ, ಸೆ.4: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಳ್ಳಿಯ ಮಕ್ಕಳನ್ನು ಕರಾಟೆಯಲ್ಲಿ ಕರಗತಗೊಳಿಸಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಮಿಂಚಿ ದೇಶ, ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ನೂರಾರು ವಿದ್ಯಾರ್ಥಿಗಳ ಶಿಕ್ಷಕ ಶಿಹಾನ್ ಮುಹಮ್ಮದ್ ನದೀಮ್ ಶಿಕ್ಷಕರ ಈ ಸುದಿನದಲ್ಲಿ ನೆನಪಾಗುತ್ತಿದ್ದಾರೆ.

ಮೂಡುಬಿದಿರೆಯ ಪುತ್ತಿಗೆ ಪದವಿನ ಬಾವು ಬ್ಯಾರಿ ಮತ್ತು ಅವ್ವಮ್ಮ ದಂಪತಿಯ ಪುತ್ರ ಶಿಹಾನ್ ಮುಹಮ್ಮದ್ ನದೀಮ್ ಬಾಲ್ಯದಲ್ಲಿಯೇ ಕರಾಟೆಯಲ್ಲಿ ಅಭಿರುಚಿ ಹೊಂದಿದ್ದರು. ಗುರುಗಳಾದ ಜೋಷ್ ಪಿ. ಥಾಮಸ್ ಹಾಗೂ ಜೋಸೆಫ್‌ರೊಂದಿಗೆ ಮೂರು ವರ್ಷಗಳ ನಿರಂತರ ಪರಿಶ್ರಮದೊಂದಿಗೆ ಕರಾಟೆ ತರಬೇತಿ ಪಡೆದರು. ಬಿಆರ್‌ಪಿ ಹೈಸ್ಕೂಲಿನ ಹತ್ತನೆ ತರಗತಿಯ ವಿದ್ಯಾರ್ಥಿಯಾಗಿದ್ದಾಗ 1997ರಲ್ಲಿ ಶೃಂಗೇರಿಯಲ್ಲಿ ನಡೆದ ರಾಜ್ಯ ಮಟ್ಟದ 40 ಕೆ.ಜಿ. ವಿಭಾಗದ 300 ಸ್ಪರ್ಧಾಳುಗಳು ಭಾಗವಹಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದರು.

ಈ ಸ್ಪರ್ಧೆಯಲ್ಲಿ ನದೀಮ್‌ನ ಪ್ರದರ್ಶನವನ್ನು ಕಂಡ ಗುರುಗಳಾದ ಜೋಷ್ ಪಿ. ಥಾಮಸ್ ಹಾಗೂ ಜೋಸೆಫ್ ನುಡಿದ ಭವಿಷ್ಯದಂತೆ ನದೀಮ್ ಕರಾಟೆ ಪಟುವಾಗಿ ಬೆಳೆದರು. ಬ್ಲ್ಯಾಕ್‌ಬೆಲ್ಟ್‌ನಲ್ಲಿ 6 ಡಿಗ್ರಿ ಪಡೆದ ನದೀಮ್ ಇಂದು ಬರೇ ಒಬ್ಬ ಕರಾಟೆ ಪಟುವಾಗಿರದೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸಾವಿರಾರು ಕರಾಟೆ ಪಟುಗಳ ಶಿಕ್ಷಕ ಕೂಡಾ ಹೌದು.

ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಗಲೇ ಕರಾಟೆ ತರಗತಿಗಳನ್ನು ನಡೆಸುವ ನಿರ್ಧಾರ ಮಾಡಿದ್ದರು. 1997ರಲ್ಲಿ ಒಂದು ಪುಟ್ಟ ಕೋಣೆಯಲ್ಲಿ ಕೇವಲ ಹತ್ತು ವಿದ್ಯಾರ್ಥಿಗಳಿಂದ ಆರಂಭವಾದ ನದೀಮ್‌ರ ಕರಾಟೆ ತರಗತಿ ಪ್ರಸ್ತುತ ಎಂಟು ಸಾವಿರ ವಿದ್ಯಾರ್ಥಿಗಳಿರುವ ದೊಡ್ಡ ಸಂಸ್ಥೆಯಾಗಿ ಉತ್ತುಂಗಕ್ಕೇರಿದೆ.

ನದೀಮ್ ತಮ್ಮದೇ ಶೊರಿನ್ ರಿಯೋ ಕರಾಟೆ ಅಸೋಸಿಯೇಶನ್ ಹೆಸರಿನ ಸಂಸ್ಥೆ ಆರಂಭಿಸಿದರು. ಪ್ರಸ್ತುತ ಈ ಸಂಸ್ಥೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ 120 ಶಾಖೆಗಳನ್ನು ಹೊಂದಿದ್ದು 3,800 ಹೆಣ್ಣು ಮಕ್ಕಳು ಸಹಿತ 8 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ಸಂಸ್ಥೆಯಿಂದ ಸರಕಾರದ ಪ್ರಾಯೋಜಿತವಾಗಿ ಜಿಲ್ಲೆಯ ಸುಮಾರು 45 ಸರಕಾರಿ ಶಾಲೆಗಳ ಹೆಣ್ಣು ಮಕ್ಕಳ ಆತ್ಮ ರಕ್ಷಣೆಗಾಗಿ ಕರಾಟೆ ತರಬೇತಿ ನೀಡಲಾಗುತ್ತಿದೆ. ನದೀಮ್‌ರ ಶೊರಿನ್ ರಿಯೋ ಸಂಸ್ಥೆಯಿಂದಲೇ ತರಬೇತಿ ಪಡೆದ 18 ಮಂದಿ ಈ ಸಂಸ್ಥೆಯಲ್ಲಿ ಶಿಕ್ಷಕರಾಗಿ ತರಬೇತಿ ನೀಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ತರಬೇತಿ ಪಡೆದ ಯುವತಿಯರಿಂದಲೇ ತರಗತಿ ನೀಡುತ್ತಿರುವುದು ಇನ್ನೊಂದು ವಿಶೇಷ.

ನದೀಮ್‌ರಿಂದ ಕರಾಟೆ ಕರಗತಗೊಳಿ ಸಿದ ಶಿಷ್ಯರಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಮಲೇಶಿಯಾ, ನೇಪಾಳ, ಶ್ರೀಲಂಕಾ, ಐರ್ಲ್ಯಾಂಡ್, ಭೂತಾನ್, ಜಪಾನ್ ಮೊದಲಾದ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆಯುವ ಮೂಲಕ ದೇಶದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದರೆ, ಸಾವಿರಾರು ವಿದ್ಯಾರ್ಥಿಗಳು ರಾಜ್ಯ, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2003ರಿಂದ 3 ರಾಷ್ಟ್ರ ಮಟ್ಟದ, 13 ಬಾರಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಹಾಗೂ 1 ಬಾರಿ ರಾಜ್ಯ ಮಟ್ಟದ ವುಸ್ ಚಾಂಪಿಯನ್‌ಶಿಪನ್ನು ಶೊರಿನ್‌ಸಂಸ್ಥೆಯಿಂದ ಆಯೋಜಿಸಲಾಗಿದೆ. ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕ.ಶಿ.ಸಂಘದ ಉಪಾಧ್ಯಕ್ಷರಾಗಿರುವ ನದೀಮ್‌ರ ಕರಾಟೆಯ ಆಸಕ್ತಿಗೆ ಬೆನ್ನೆಲುಬಾಗಿ ನಿಂತವರು ಅವರ ಅಣ್ಣ ಮುಹಮ್ಮದ್ ಶರೀಫ್. ಸಂಸ್ಥೆಯನ್ನು ಬೆಳೆಸುವಲ್ಲಿ ಪತ್ನಿ ಝಕಿಯಾ ಯಾಸ್ಮೀನ್‌ರ ಪಾತ್ರ ಕೂಡಾ ಮಹತ್ವದ್ದು. ಈಕೆಯೂ ಕರಾಟೆ ಶಿಕ್ಷಕಿಯಾಗಿದ್ದಾರೆ. ಕಳೆದ 22 ವರ್ಷಗಳಲ್ಲಿ ನದೀಮ್ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿರುವುದು ಗಮನಾರ್ಹ.

ಕರಾಟೆಯಲ್ಲೂ ಪದವಿಗಳಿವೆ. ಅವು ಎರಡು ಮೂರು ವರ್ಷದಲ್ಲಿ ಕಲಿತು ಮುಗಿಸುವಂತಹ ಪದವಿಗಳಲ್ಲ. ಬ್ಲಾಕ್‌ಬೆಲ್ಟ್ ಎಂಬುದು ಹೆಚ್ಚಿನವರಿಗೆ ತಿಳಿದಿರುವ ವಿಷಯವಾದರೂ ಕರಾಟೆಯ ಗರಿಷ್ಠ ಮಿತಿ ರೆಡ್ ಬೆಲ್ಟ್ ಆಗಿದೆ. ಮೊದಲು ವೈಟ್ ಬೆಲ್ಟ್, ಯೆಲ್ಲೋ ಬೆಲ್ಟ್, ಆರಂಜ್ ಬೆಲ್ಟ್, ಗ್ರೀನ್ ಬೆಲ್ಟ್, ಬ್ಲೂ ಬೆಲ್ಟ್, ಪರ್ಪಲ್ ಬೆಲ್ಟ್, ಬ್ರೌನ್ ಬೆಲ್ಟ್ ಹೀಗೆ ಹಲವು ಹಂತಗಳಲ್ಲಿ ಕಲಿಕೆ ಸಾಗುತ್ತದೆ. ಈ ಎಲ್ಲ ಹಂತದ ಕಠಿಣ ತರಗತಿ, ನಿರಂತರ ಪರಿಶ್ರಮ, ಗುರುಗಳ ಪರೀಕ್ಷೆ ಎದುರಿಸಿ ಅದರಲ್ಲಿ ಬಂದ ಅಂಕಗಳ ಮೇಲೆ ನಿರ್ಧಾರ ಮಾಡಿದ ಮೇಲೆಯೇ ಬ್ಲ್ಯಾಕ್‌ಬೆಲ್ಟ್ ನೀಡಲಾಗುವುದು. ಬ್ಲಾಕ್‌ಬೆಲ್ಟ್ ನಂತರದ 10 ಹಂತದ ಡಿಗ್ರಿಗಳನ್ನು ಪೂರ್ಣಗೊಳಿಸಿದ ಬಳಿಕ ಸಿಗುವುದೇ ರೆಡ್ ಬೆಲ್ಟ್. ಈ ಹಂತ ತಲುಪಿದ ಒಬ್ಬನೇ ಒಬ್ಬ ಭಾರತದಲ್ಲಿ ಇಲ್ಲ. ರೆಡ್ ಬೆಲ್ಟ್ ಪಡೆಯುವಾಗ ವ್ಯಕ್ತಿಯ ವಯಸ್ಸು ಸುಮಾರು 70 ಆಗಿರುತ್ತದೆ.

ಶಿಹಾನ್ ಮುಹಮ್ಮದ್ ನದೀಮ್

share
ಇಮ್ತಿಯಾಝ್ ಶಾ ತುಂಬೆ
ಇಮ್ತಿಯಾಝ್ ಶಾ ತುಂಬೆ
Next Story
X