ಶಾಂತಿ ವಾನವೀಯತೆಗಾಗಿ ಮಿಡಿಯಿತು ಕವಿ ಹೃದಯ : ಭಟ್ಕಳದಲ್ಲೊಂದು ಅಪರೂಪದ ಬಹುಭಾಷಾ ಕವಿಗೋಷ್ಟಿ

ಭಟ್ಕಳ,ಸೆ.5: ಜಮಾಅತೆ ಇಸ್ಲಾಮಿ ಹಿಂದ್ ನ ರಾಷ್ಟ್ರೀಯ ಅಭಿಯಾನ ಶಾಂತಿ ಮತ್ತು ಮಾನವೀಯತೆ ಅಂಗವಾಗಿ ಭಟ್ಕಳ ಇದಾರೆ ಅದಬೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ಬಹುಭಾಷಾಕವಿಗೋಷ್ಟಿ ನಡೆಯಿತು.
ಕೇವಲ ಉರ್ದು ಭಾಷೆಯ ಮುಷಾಯಿರಾ ಗಳನ್ನು ಕಂಡ ಭಟ್ಕಳದ ಸಾಹಿತ್ಯ ಪ್ರೇಮಿಗಳಿಗೆ ಕನ್ನಡ, ಹಿಂದಿ, ಸ್ಥಳೀಯ ನವಾಯತಿ ಭಾಷಾ ಕವಿಗಳು ಕಾವ್ಯ ವಾಚನಕ್ಕೆ ಸಭಾಭವನವೇ ಚಪ್ಪಾಳೆಂು ಕರತಾಡನಗೈಯ್ಯುವಂತಿತ್ತು.
ಕವಿ ಗಂಗಾಧರ್ ನಾಯ್ಕರ
ಜಾತಿಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ
ಬೆಂಕಿ ಹಚ್ಚಿದ ನಾವೇ
ಸುಟ್ಟು ಕರಕಲಾಗುತ್ತಿದ್ದೇವೆ.
ಧರ್ಮಗ್ರಂಥಗಳ ಪುಟಗಳೆಲ್ಲ
ಮುಗುಚುತ್ತಿವೆ
ನಾವೇ ಎಬ್ಬಿಸಿದ ಕಿಚ್ಚಿನ ರೊಚ್ಚಿನ ಗಾಳಿಗೆ ಬಿರುಗಾಳಿಗೆ
ಕಿತ್ತುಹೋಗಲಿಲ್ಲ, ಚಿಂದಿಯಾಗಲಿಲ್ಲ
ಯಾಕೆಂದರೆ ಅವುಗಳಲ್ಲಿ
ಇವೆ ಪ್ರೀತಿಯ ಕಾವು
ಅವುಗಳಿಗೆಲ್ಲಿ ಸಾವು...
ಯಾರ್ಯಾರೋ ಎಸೆದ ಬಾಂಬುಗಳಿಗೆ
ಬಂದೂಕಿನ ಗುಂಡುಗಳಿಗೆ
ಸುಟ್ಟುಹೋಗುವ ನಾವು
ನೆನಪಿಸಿಕೊಳ್ಳುತ್ತಿಲ್ಲ
ಗಾಂಧಿ,ಷರೀಫ,ತೆರೇಸಾರನ್ನು.....!
ಎಂಬ ಸಾಲುಗಳು ಪ್ರೇಕ್ಷರನ್ನು ಮನ ಮುಟ್ಟಿದ್ದು ಚಪ್ಪಾಳೆಯ ಮೂಲಕ ಅವರ ಸಂತತ ಹೊರಬಂದಿತು.
ಹಾಗೆಯೆ ಸುರೇಶ್ ಮುುಡೇಶ್ವರ ವಾಚಿಸಿದ ಕನವ
ಹರಿದೊಗಿಯಿರಿ ಮೃಗೀಯ ಚರ್ಮ
ಅರಿತು ಬಾಳಿರಿ ವಿಶ್ವಶಾಂತಿಯ ಮರ್ಮಾ
ಜಗದ ಉಳಿವೆಗೆ ಬೇಕು ಶಾಂತಿ ಮತ್ತು ಮಾನವೀಯತೆ,
ಕ್ರೌರ್ಯದ ಅಳಿವೆಗೆ ಸಾಕು ಕವಿ,ಕಾವ್ಯ,ಕಥೆ, ಕವಿತೆ.
ಇದೂ ಕೂಡ ಜನಮೆಚ್ಚುಗೆ ಪಡೆಯಿತು. ನವಾಯತಿ ಕವಿ ಸಮಿಯುಲ್ಲಾ ಬರ್ಮಾವರ್ ತಮ್ಮ ಸುಶ್ರಾವ್ಯ ಕಂಠದಿಂದ ಶಾಂತಿಯ ಕವಿತೆಯನ್ನು ಹಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು. ಜಗತ್ತು ಎಲ್ಲರೀತಿಯಿಂದಲೇ ಹಾಳಾಗುತ್ತಿದೆ ನಾ ಹೇಗೆ ಗಝಲ್ ಹಾಡಲಿ ಎಂದು ಕವಿ ಅಶ್ರಫ್ ಬರ್ಮಾವರ್ ಹೇಳಿದರೆ ಅದಕ್ಕೆ ಉತ್ತರ ಎಂಬಂತೆ ಶಿವಮೊಗ್ಗದ ಕವಿ ’ನಾ ಹೇಳುವೆ ಗಝಲ್ ಶಾಂತಿ ಮಾನವೀಯತೆಗಾಗಿ ಎಂದು ಎಂತಹ ಸ್ಥಿತಿಯಲ್ಲೂ ನಾವು ಶಾಂತಿ,ಸೌಹಾರ್ಧತೆಯನ್ನು ಕಾಪಾಡಿಕೊಂಡು ಹೋಗಬೇಕೆಂಬ ಸಂದೇಶ ನೀಡಿದರು. ಯುವ ಕವಿ ಇಬ್ನೆ ಹಸನ್ ಭಟ್ಕಳದ ಪರಿಸರ ಕುರಿತಂತೆ ಇಲ್ಲಿ ಮಂದಿರ ಇದೆ, ಮಸೀದಿ ಇದೆ ಚರ್ಚ್‌ಗಳೀವೆ ಅವೆಲ್ಲವೂ ಶಾಂತಿಯ ಮಂತ್ರವನ್ನು ಹೇಳುತ್ತಿವೆ. ಎನ್ನುವುದರ ಮೂಲಕ ನಾವು ಅಶಾಂತಿಯಡೆಗೆ ಸಾಗುತ್ತಿರುವುದಾದರೂ ಏತಕ್ಕೆ ಎಂು ಕೇಳುವಂತಿತ್ತು ಅವರ ಕವನ.
ಎಂ.ಆರ್.ಮಾನ್ವಿ, ಪ್ರೋ.ಕೆ.ಸಿ.ನಝೀರ್, ಹನೀಫ್ ಶಾಹ ಶಬ್ನಮ್, ಅಬುಬಕರ್ ಮಾಲಿಕಿ ಮುಂತಾದ ಕವಿಗಳು ತವ್ಮು ಶಾಂತಿ ಕವನವನ್ನು ವಾಚಿಸಿದರು.
ಮೌಲಾನ ಮುಹಮ್ಮದ್ ಜಾಫರ್ ಫಕ್ಕಿಭಾವ್ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ಡಾ.ಹನೀಫ್ ಶಬಾಬ್ ನಿರ್ವಹಿಸಿದರು. ಅಬ್ರಾರ್-ಉಲ್-ಹಖ್ ಖತಿಬಿ ಧನ್ಯವಾದ ಅರ್ಪಿಸಿದರು.







