ನೀವು ಖರೀದಿಸಿದ ಸುಗಂಧ ದ್ರವ್ಯ ಅಸಲಿಯೇ? ನಕಲಿಯೇ?
ಇಲ್ಲಿವೆ ಸುಲಭವಾಗಿ ಪತ್ತೆ ಹಚ್ಚುವ ವಿಧಾನಗಳು

ಚಾನೆಲ್ ಸುಗಂಧ ಅಗ್ಗದ ಬೆಲೆಗೆ ಸಿಗುತ್ತದೆ ಎಂದಾಗ ಖುಷಿಯಿಂದ ಕೊಳ್ಳಲು ಹೋಗುತ್ತೀರೆಂದಾದಲ್ಲಿ ನೀವು ಮೋಸ ಹೋಗಿದ್ದೀರಿ ಎಂದೇ ಅರ್ಥ. ಚಾನೆಲ್ ಎಂದಿಗೂ ಬೆಲೆ ಕಡಿಮೆ ಮಾಡುವುದಿಲ್ಲ. ಏಕೆಂದರೆ ಅದು ಚಾನೆಲ್, ಅದು ಚಾನೆಲ್. ಇಂತಹ ಕೊಡುಗೆಗಳಿಂದ ಮೋಸ ಹೋಗುವ ಮೊದಲು ಉತ್ತಮ ಗುಣಮಟ್ಟದ ಸುಗಂಧ ದ್ರವ್ಯಗಳೆಂದು ಅಸಲಿಯನ್ನೇ ಖರೀದಿಸುವ ವಿಧಾನ ಇಲ್ಲಿದೆ.
ಬಣ್ಣ ಗಮನಿಸಿ

ಅಧಿಕೃತ ಸುಗಂಧದ ಬಣ್ಣ ಡೈ ಬಳಸಿರುವ ಹೊರತಾಗಿಯೂ ತೆಳುವಾಗಿರುತ್ತದೆ. ಆದರೆ ನಕಲಿ ಸುಗಂಧದಲ್ಲಿ ಬಣ್ಣ ಹೆಚ್ಚೇ ಇದ್ದು, ಮೂಲ ಸುಗಂಧಕ್ಕಿಂತ ಗಾಢವಾಗಿರುತ್ತದೆ.
ಬಾಟಲಿಯ ರಚನೆ ಪರೀಕ್ಷಿಸಿ

ನಕಲಿ ಬಾಟಲಿಗೆ ಮೃದುವಾದ ಗ್ಲಾಸ್ ಇರುವುದಿಲ್ಲ. ಅದರ ಫಿನಿಶಿಂಗ್ ಉಬ್ಬಿರುತ್ತದೆ ಮತ್ತು ಸುಗಂಧ ತನ್ನ ಹೊಳಪನ್ನು ಕಳೆದುಕೊಂಡಿರುತ್ತದೆ.
ಕ್ರಮ ಸಂಖ್ಯೆ

ಬಾಕ್ಸಿನ ಮೇಲಿನ ಕ್ರಮ ಸಂಖ್ಯೆಯು ಸುಗಂಧ ಬಾಟಲಿಯ ಮೇಲಿನ ಕ್ರಮ ಸಂಖ್ಯೆಗೆ ಹೊಂದಿಕೊಳ್ಳಬೇಕು. ಸುಗಂಧ ಖರೀದಿಸುವ ಮೊದಲು ಅದನ್ನು ಬಾಕ್ಸಿನಿಂದ ತೆಗೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕ್ರಮ ಸಂಖ್ಯೆ ಪರೀಕ್ಷಿಸಲಾಗದು. ಆದರೆ ಬಾಕ್ಸಿನ ಕ್ರಮಸಂಖ್ಯೆ ಬಾಟಲಿಯ ಕ್ರಮ ಸಂಖ್ಯೆಗೆ ಹೊಂದಿಕೊಳ್ಳದಿದ್ದರೆ ಅದು ನಕಲಿ.
ಪ್ಲಾಸ್ಟಿಕ್ ರ್ಯಾಪಿಂಗ್

ಸುಗಂಧ ಬಾಕ್ಸುಗಳ ಮೇಲಿನ ಪ್ಲಾಸ್ಟಿಕ್ ರ್ಯಾಪಿಂಗ್ ಕೂಡ ಅದು ಅಸಲಿಯೇ ನಕಲಿಯೇ ಎಂದು ತಿಳಿಸುತ್ತದೆ. ಪ್ಲಾಸ್ಟಿಕ್ ರ್ಯಾಪಿಂಗಿನ ಜೋಡಣೆಗಳು ಅಸಮವಾಗಿದ್ದು, 5 ಮಿಲಿಮೀಟರಿಗಿಂತ ಹೆಚ್ಚು ಅಗಲವಾಗಿದ್ದರೆ ಖರೀದಿಸಿದ ಬಾಟಲಿ ನಕಲಿ.
ಒಳಗಿನ ಪ್ಯಾಕೇಜಿಂಗ್

ಬಾಕ್ಸಿನ ಒಳಗಿನ ಪೇಪರ್ ಪ್ಯಾಕೇಜಿಂಗ್ ಶುಭ್ರ ಬಿಳಿಯಾಗಿರಬೇಕೇ ಹೊರತು ಬೂದು ಬಣ್ಣದಲ್ಲಿರಬಾರದು. ಅಲ್ಲದೆ ಬಾಟಲಿ ತುಂಡಾಗುವುದನ್ನು ತಡೆಯಲು ಕಾರ್ಡ್‌ಬೋರ್ಡ್ ಇರಬೇಕು.
ಬಾಟಲಿ ಕ್ಯಾಪ್

ಬಾಟಲಿಯ ಮೇಲಿರುವ ಲೋಗೋ ಸಿಮೆಟ್ರಿಕಲ್ (ಕೇಂದ್ರೀಯ) ಆಗಿರಬೇಕು. ಕ್ಯಾಪಿನ ಕೇಂದ್ರದ ಬದಲಾಗಿ ಇತರ ಕಡೆಗೆ ಲೋಗೋ ಇದ್ದಲ್ಲಿ ಅದು ಅಸಲಿಯಾಗಿರುವುದು ಪ್ರಶ್ನಾರ್ಹ.
ಖರೀದಿಗೆ ಮುನ್ನ ವೆಬ್‌ತಾಣ ಗಮನಿಸಿ.
ಸುಗಂಧ ದ್ರವ್ಯಕ್ಕೆ ಸಂಬಂಧಿಸಿದ ವೆಬ್‌ತಾಣವನ್ನು ಪರೀಕ್ಷಿಸಿದರೆ ಖರೀದಿಸುವ ಉತ್ಪನ್ನಕ್ಕೆ ಸಂಬಂಧಿಸಿ ಸೂಕ್ತ ಮಾಹಿತಿ ಸಿಗಬಹುದು.
ಅಂತರ್ಜಾಲದಲ್ಲಿ ಖರೀದಿಸಬೇಡಿ

ಸುಗಂಧ ದ್ರವ್ಯಗಳನ್ನು ಅಂತರ್ಜಾಲದಲ್ಲಿ ಖರೀದಿಸಬೇಡಿ. ಸುಗಂಧವನ್ನು ಅಂತರ್ಜಾಲದಲ್ಲಿ ಪರಿಮಳ ನೋಡಲು ಸಾಧ್ಯವಿಲ್ಲದ ಕಾರಣ ಅದನ್ನು ಖರೀದಿಸುವುದರಲ್ಲಿ ಅರ್ಥವಿಲ್ಲ.
ಅರ್ಧಬೆಲೆಗೆ ಸಿಕ್ಕರೆ ಏನೋ ಮೋಸವಿದೆ
ಉತ್ತಮ ಗುಣಮಟ್ಟದ ಸುಗಂಧದ ಬ್ರಾಂಡ್‌ಗಳು ಎಂದೂ ತಮ್ಮ ಬೆಲೆ ಇಳಿಸುವುದಿಲ್ಲ. ನಕಲಿ ವಸ್ತುಗಳು ಮಾತ್ರ ಅರ್ಧ ಬೆಲೆಗೆ ಇಳಿಸಿ ಗ್ರಾಹಕರನ್ನು ಆಕರ್ಷಿಸುತ್ತವೆ.
ಕೃಪೆ: www.indiatimes.com







