ಹಾಲು ಅನಾರೋಗ್ಯಕರ, ತಕ್ಷಣ ಅದರ ಸೇವನೆ ನಿಲ್ಲಿಸಿ! ಏಕೆಂದರೆ?
ಕಟು ವಾಸ್ತವ

ಸತ್ಯವನ್ನು ಎದುರಿಸುವ ಸಮಯ ಬಂದಿದೆ. ಈಗಲೂ ಹಳೇ ಕಾಲದ ಆಹಾರವನ್ನೇ ತಿಂದು ನಾವು ಬೆಳೆಯಬೇಕಾಗಿಲ್ಲ. ಅಂತಹ ಒಂದು ವಸ್ತು ಹಾಲನ್ನು ಆರೋಗ್ಯಕರವೆಂದು ತಿಳಿದು ನಾವೆಲ್ಲಾ ಕುಡಿಯುತ್ತೇವೆ. ಹೆತ್ತವರು ತಮ್ಮ ಮಕ್ಕಳಿಗೆ ಹಾಲು ಅತೀ ಆರೋಗ್ಯಕರ ಎಂದುಕೊಂಡು ಕುಡಿಸುತ್ತಾರೆ. ಆದರೆ ಇದೇ ಹಾಲು ಮಕ್ಕಳು ಮತ್ತು ಹಿರಿಯರಲ್ಲಿ ಕೊಬ್ಬು ತುಂಬಲು ಕಾರಣವಾಗುತ್ತಿದೆ. ಇದರಲ್ಲಿ ಅತೀ ಹೆಚ್ಚು ಪ್ರಮಾಣದ ಕ್ಯಾಲ್ಸಿಯಂ ಇದೆ. ಪ್ರೊಟೀನುಗಳೂ ಇವೆ. ಆದರೆ ಅದರಲ್ಲಿರುವ ಲಾಕ್ಟೋಸ್ ಶುಗರ್ ಅನ್ನು ನಮ್ಮ ದೇಹ ಜೀರ್ಣಿಸಿಕೊಳ್ಳಲಾಗದೆ ಕೊಬ್ಬು ತುಂಬಿಕೊಳ್ಳುತ್ತದೆ.
ಹಾಲು ನಿಮಗೇಕೆ ಒಳ್ಳೆಯದಲ್ಲ ಎನ್ನುವುದಕ್ಕೆ ಇಲ್ಲಿ ನಾಲ್ಕು ಕಾರಣಗಳಿವೆ:
ತೂಕ ಬೆಳೆಸುತ್ತದೆ:ಅಂತಾರಾಷ್ಟ್ರೀಯ ಪ್ರಾಣಿ ದಯಾ ಸಂಘ ಪೀಟಾ ವರದಿ ಸೇರಿದಂತೆ ಹಲವಾರು ಅಧ್ಯಯನಗಳು ದನದ ಹಾಲು ಕುಡಿಯುವುದು ಮತ್ತು ಸ್ಕಿಮ್ಡ್ ಹಾಲು ಕುಡಿಯುವುದೂ ಸಹ ವಯಸ್ಕರು ಮತ್ತು ಮಕ್ಕಳಲ್ಲೂ ಕೂಡ ತೂಕ ವೃದ್ಧಿಸುತ್ತದೆ ಎಂದು ಹೇಳಿವೆ. ಸ್ಕಿಮ್ಡ್ ಹಾಲು ಶುಭ್ರ ಸಕ್ಕರೆ ನೀರಾಗಿದ್ದು, ಶೂನ್ಯ ಪೌಷ್ಠಿಕಾಂಶದ ಜೊತೆಗೆ ಲ್ಯಾಕ್ಟೋಸ್ ಶುಗರ್ ಮಾತ್ರ ಹೊಂದಿರುವ ಕಾರಣ ಉಬ್ಬುವಿಕೆಗೆ ಕಾರಣವಾಗಿ ತೂಕ ಹೆಚ್ಚಿಸುತ್ತದೆ.
ಲ್ಯಾಕ್ಟೋಸ್ ಅಸಹಿಷ್ಣುತೆ: ಜಾಗತಿಕವಾಗಿ ಬಹಳಷ್ಟು ಮಂದಿ ಲ್ಯಾಕ್ಟೋಸ್‌ಗೆ ಹೊಂದಿಕೊಳ್ಳದೆ ಇರುವ ಕಾರಣ ಅದನ್ನು ತಮ್ಮ ದೇಹದಲ್ಲಿ ಜೀರ್ಣಿಸಿಕೊಳ್ಳುವುದಿಲ್ಲ. ಈ ಅಸಹಿಷ್ಣುತೆ ಹಲವಾರು ಮುರಿತ, ಉಬ್ಬುವುದು ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ.
ಪ್ರೋಸ್ಟೇಟ್ ಕ್ಯಾನ್ಸರ್:ಇದು ಆಘಾತಕಾರಿ ಎಂದು ಅನಿಸಬಹುದು. ಡೈರಿ ಉತ್ಪನ್ನಗಳ ಸೇವನೆ ಕ್ಯಾನ್ಸರ್ ಪ್ರಗತಿಯನ್ನು ನಿಧಾನಿಸುತ್ತದೆ ಮತ್ತು ಮುಖ್ಯವಾಗಿ ಪ್ರೋಸ್ಟೇಟ್ ಕ್ಯಾನ್ಸರನ್ನು ಎನ್ನುವುದು ವಿಚಿತ್ರ.
ಹೊಟ್ಟೆಯ ಕೊಬ್ಬು:ನಂಬಿದರೆ ನಂಬಿ. ತೆಳುವಾಗಬೇಕು ಮತ್ತು ಮುಖ್ಯವಾಗಿ ನಿಮ್ಮ ಸೊಂಟದ ಅಳತೆ ಕಡಿಮೆ ಮಾಡುವುದು ನಿಮ್ಮ ಆಸೆಯಾಗಿದ್ದರೆ ಹಾಲಿನಿಂದ ಪ್ರಯೋಜನವಿಲ್ಲ. ಲ್ಯಾಕ್ಟೋಸ್ ಶುಗರ್ ಹೊಟ್ಟೆಯ ಸುತ್ತ ಸೇರಿಕೊಂಡು ಕೊಬ್ಬು ತುಂಬಲು ಹೊಸ ಹಾದಿ ಹುಡುಕುತ್ತದೆ. ಸಿಕ್ಸ್ ಪ್ಯಾಕ್ ಆಬ್ಸ್ ಪ್ರಯತ್ನಿಸಲು ಹಾಲು ಸೇವನೆ ಉಪಯುಕ್ತ ಎಂದುಕೊಂಡರೆ ಮತ್ತೊಮ್ಮೆ ಯೋಚಿಸಿ ನೋಡಿ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಮಂದಿಯ ಜೀವನಶೈಲಿಯಿಂದಾಗಿ ಹಾಲು ಕುಡಿದು ಜೀರ್ಣಿಸಿಕೊಳ್ಳುತ್ತಾರೆ. ಆದರೆ ನಗರದಲ್ಲಿ ನೆಲೆಸಿರುವವರು ಹೆಚ್ಚುವರಿ ಕೊಬ್ಬನ್ನು ತುಂಬಿಕೊಂಡು ಅದನ್ನು ಹೊರಹಾಕಲು ಸಾಧ್ಯವಾಗದೆ ಕಷ್ಟಪಡುತ್ತಾರೆ.
ಕೃಪೆ: www.dailyo.in







