Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಲ್ಪೆ: ಬಂಡೆಗೆ ಢಿಕ್ಕಿ ಹೊಡೆದ ಬೋಟ್; 7...

ಮಲ್ಪೆ: ಬಂಡೆಗೆ ಢಿಕ್ಕಿ ಹೊಡೆದ ಬೋಟ್; 7 ಮಂದಿ ಮೀನುಗಾರರಿಗೆ ಗಾಯ

ವಾರ್ತಾಭಾರತಿವಾರ್ತಾಭಾರತಿ6 Sept 2016 10:26 AM IST
share
ಮಲ್ಪೆ: ಬಂಡೆಗೆ ಢಿಕ್ಕಿ ಹೊಡೆದ ಬೋಟ್; 7 ಮಂದಿ ಮೀನುಗಾರರಿಗೆ ಗಾಯ

ಮಲ್ಪೆ, ಸೆ.6: ಮಲ್ಪೆ ಮೀನುಗಾರಿಕಾ ಬಂದರಿನಿಂದ ಸುಮಾರು ನಾಲ್ಕೂವರೆ ನಾಟೆಕಲ್ ಮೈಲು ದೂರದ ಸಮುದ್ರದಲ್ಲಿ ಸೈಂಟ್ ಮೇರಿಸ್ ದ್ವೀಪ ಸಮೀಪದಲ್ಲಿ ಸೆ.5ರಂದು ರಾತ್ರಿ 8ಗಂಟೆ ವೇಳೆ ಮೀನುಗಾರಿಕಾ ಬೋಟೊಂದು ಬಂಡೆಗೆ ಢಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಏಳು ಮಂದಿ ಮೀನುಗಾರರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಬೈಂದೂರು ಶಿರೂರಿನ ಸುಬ್ಬಯ್ಯ ನಾಯ್ಕ(48), ಭಟ್ಕಳ ಕರಿಕಲ್ಲುವಿನ ಮಂಜುನಾಥ್ ಮೊಗವೀರ(45), ಭಟ್ಕಳ ಗೊರಟ್ಟಿ ಕ್ರಾಸ್‌ನ ವಾಸು ನಾಯ್ಕಾ(35), ಕೋಟ ಹೈಸ್ಕೂಲ್ ಬಳಿಯ ಸಂತೋಷ್ ಮೊಗವೀರ(30), ಭಟ್ಕಳದ ಬೆಳ್ಕೆಯ ಪಾಂಡುರಂಗ ನಾಯ್ಕೆ(29), ಭಟ್ಕಳದ ಜಗದೀಶ್ ನಾಯ್ಕೆ(28), ಬೋಟಿನ ಕ್ಯಾಪ್ಟನ್ ಭಟ್ಕಳದ ವಾಸು ದೇವ ನಾಯ್ಕಾ(27) ಎಂದು ಗುರುತಿಸಲಾಗಿದೆ. ಇವರೆಲ್ಲ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರು ಮಲ್ಪೆ ಪಡುಕೆರೆಯ ಜಯಾ ಪಿ.ಕುಂದರ್ ಎಂಬವರ ಗೋಪಿ ಸಾಗರ್ ಬೋಟಿನಲ್ಲಿ ಆ.28ರಂದು ರಾತ್ರಿ 10:30ರ ಸುಮಾರಿಗೆ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಅಲ್ಲಿ ಮೀನು ಗಾರಿಕೆ ಮುಗಿಸಿ ಸೆ.5ರಂದು ರಾತ್ರಿ ಮಲ್ಪೆ ಬಂದರಿಗೆ ವಾಪಸ್ಸು ಬರುತ್ತಿದ್ದಾಗ ಬೋಟಿನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಬೋಟಿನ ಸ್ಟೇರಿಂಗ್ ಜಾಮ್ ಆಯಿತ್ತೆನ್ನಲಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬೋಟು ಸೈಂಟ್ ಮೇರಿಸ್ ದ್ವೀಪದ ಉತ್ತರ ದಿಕ್ಕಿನಲ್ಲಿರುವ ಬಂಡೆಗೆ ಢಿಕ್ಕಿ ಹೊಡೆಯಿತು. ಇದರ ಪರಿಣಾಮ ಬೋಟಿನೊಳಗೆ ನೀರು ನುಗ್ಗಲು ಪ್ರಾರಂಭವಾಯಿತು. ಅಪಾಯ ವನ್ನು ಅರಿತ ಕ್ಯಾಪ್ಟನ್ ವಾಸುದೇವ ನಾಯ್ಕಾ ಉಳಿದ ಮೀನುಗಾರರಿಗೆ ಮಾಹಿತಿ ನೀಡಿದರು.

ನಂತರ ಎಲ್ಲ ಏಳು ಮಂದಿ ಮೀನುಗಾರರು ಬೋಟಿ ನಿಂದ ನೀರಿಗೆ ಹಾರಿ ಪ್ರಾಣ ರಕ್ಷಿಸಿಕೊಳ್ಳಲು ಅಲ್ಲೇ ಸಮೀಪದ 20-30ಅಡಿ ಎತ್ತರ ಬಂಡೆಯನ್ನು ಏರಿದರು. ಬಂಡೆಯಿಂದಾಗಿ ಇವರ ಕಾಲು ಕೈಗಳಿಗೆ ತೀವ್ರ ಗಾಯಗಳಾಗಿವೆ. ಕಾರ್ಯಾಚರಣೆ ಆರಂಭ: ಈ ಬೋಟಿನಲ್ಲಿ ಹಿಂಬದಿಯಲ್ಲಿ ಬರುತ್ತಿದ್ದ ಜಯ ಕುಂದರ್ ಅವರ ಸಹೋದರ ಕೇಶವ ಕುಂದರ್ ಅವರ ಗೋಪಿ ಸಾಗರ್-1 ಬೋಟಿನಲ್ಲಿದ್ದ ಮೀನುಗಾರರು ಈ ವಿಚಾರ ತಿಳಿದು ಕೂಡಲೇ ಈ ಕುರಿತ ಮಾಹಿತಿಯನ್ನು ಬೋಟಿನ ಮಾಲಕರಿಗೆ ತಿಳಿಸಿದರು. ಅವರು ರಾತ್ರಿ 8:30ರ ಸುಮಾರಿಗೆ ಮಲ್ಪೆ ಕರಾವಳಿ ಕಾವಲು ಪಡೆ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

ದುರಂತ ಸಂಭವಿಸಿದ ಪ್ರದೇಶವು ಬಂಡೆ ಕಲ್ಲಿನಿಂದ ಆವೃತ್ತವಾಗಿದ್ದುದರಿಂದ ಬೇರೆ ಬೋಟುಗಳು ಸಮೀಪಕ್ಕೆ ತೆರಳಲು ಆಗುತ್ತಿರಲಿಲ್ಲ. ಮಲ್ಪೆ ತೀರ ದಲ್ಲಿ ರಾತ್ರಿಯೇ ಮೊಕ್ಕಾಂ ಹೂಡಿದ ಕರಾವಳಿ ಕಾವಲು ಪಡೆಯ ಎಸ್ಪಿ ಚೆನ್ನಬಸಪ್ಪ ಹಾಗೂ ಮಲ್ಪೆ ಠಾಣಾಧಿಕಾರಿ ರವಿ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು. ಸ್ಥಳೀಯ ಮೀನುಗಾರರೊಂದಿಗೆ ಚರ್ಚಿಸಿದ ಪೊಲೀಸರು ತಕ್ಷಣಕ್ಕೆ ಎರಡು ತಂಡಗಳನ್ನು ರಚಿಸಿ ದೋಣಿಗಳಲ್ಲಿ ಟಾರ್ಚ್, ಲೈಫ್ ಜಾಕೆಟ್ ಸಮೇತ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿಕೊಡಲಾಯಿತು. ಬಂಡೆ ಸಮೀಪ ಅಲೆಗಳು ತೀವ್ರವಾಗಿದ್ದ ಕಾರಣ ದೋಣಿ ಕೂಡ ಸಮೀಪಕ್ಕೆ ಹೋಗಲು ಸಾಧ್ಯವಾಗಲಿಲ್ಲ. ರಾತ್ರಿ ಕಾರ್ಯಾಚರಣೆಗೆ ಅಲೆಗಳು ಅಡ್ಡಿಪಡಿಸಿದವು.

ಬಂಡೆ ಮೇಲೆಯೇ ರಾತ್ರಿ ಕಳೆದರು: ಬಂಡೆ ಸಮೀಪದ ನೀರಿನ ರಭಸ ತೀವ್ರವಾಗಿದ್ದ ಕಾರಣ ಅಪಾಯದ ಮುನ್ಸೂಚನೆ ಅರಿತ ಬಂಡೆಯನ್ನು ಏರಿ ಕುಳಿತ ಏಳು ಮಂದಿ ಮೀನುಗಾರರು ಈಜಿ ಬಂದು ದೋಣಿಯನ್ನು ಏರಲು ನಿರಾಕರಿಸಿದರು. ಆದುದರಿಂದ ಪೊಲೀಸರು ದೂರದಲ್ಲೇ ಅವರೊಂದಿಗೆ ಸಂವಹನ ನಡೆಸಿ ಯೋಗಕ್ಷೇಮ ವಿಚಾರಿಸಿದರು.

ಬೆಳಗ್ಗೆಯವರೆಗೆ ಬಂಡೆಯ ಮೇಲೆ ಇರಲು ಅವರು ನಿರ್ಧರಿಸಿದರು. ಆ ಹಿನ್ನೆಲೆಯಲ್ಲಿ ಈ ಎರಡು ದೋಣಿ ಮತ್ತು ಗೋಪಿ ಸಾಗರ್-1 ಬೋಟು ಸ್ಥಳದಲ್ಲೇ ಮೊಕ್ಕಂ ಹೂಡಿತು. ನಂತರ ಬೆಳಗಿನ ಜಾವ 5:30ರ ಸುಮಾರಿಗೆ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ಕೂಡ ತನ್ನ ರಾಜ್‌ದೂತ್ ಶಿಪ್‌ನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿತು. ಅಲ್ಲದೆ ಎಸ್ಪಿ ಚೆನ್ನಬಸಪ್ಪ ನೇತೃತ್ವದ ತಂಡ ಕೂಡ ಘಟನಾ ಸ್ಥಳಕ್ಕೆ ತೆರಳಿ ಎಲ್ಲ ಏಳು ಮೀನುಗಾರರನ್ನು ರಕ್ಷಿಸಿ ದೋಣಿಯಲ್ಲಿ ದಡಕ್ಕೆ ಕರೆದುಕೊಂಡು ಬರಲಾಯಿತು. ಬಳಿಕ ಅವರನ್ನು ಅಗತ್ಯ ಚಿಕಿತ್ಸೆಗಾಗಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಯಿತು.

ಸುಮಾರು 20ಮೀಟರ್ ಉದ್ದದ ಈ ಬೋಟಿನಲ್ಲಿ 12 ಟನ್‌ನಷ್ಟು ಮದ್ಮಲ್, ಅಂಜಲ್, ಬಂಡಾಸ್ ಮೀನುಗಳಿದ್ದವು. ನೀರು ಬೋಟಿನೊಳಗೆ ನುಗ್ಗಿದ ಪರಿಣಾಮ ಬೋಟ್ ಸಮುದ್ರದಲ್ಲಿ ಸಂಪೂರ್ಣ ಮುಳುಗಿದ್ದು, ಸುಮಾರು 35ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಬೋಟು ಬಂಡೆಗೆ ಢಿಕ್ಕಿ ಹೊಡೆದ ಕೂಡಲೇ ನೀರು ನುಗ್ಗಲು ಆರಂಭ ವಾಯಿತು. ಈ ಕುರಿತ ಅಪಾಯವನ್ನು ಅರಿತ ನಾವು ಕೂಡಲೇ ನೀರಿಗೆ ಹಾರಿ ಸಮೀಪದ ಬಂಡೆಗೆ ಏರಿ ಪ್ರಾಣ ರಕ್ಷಿಸಿಕೊಂಡೆವು. ನಂತರ ನಮ್ಮ ರಕ್ಷಣೆಗೆ ದೋಣಿ ಬಂದರೂ ಕೂಡ ಬಂಡೆಗೆ ನೀರು ತೀವ್ರವಾಗಿ ಬಡಿಯು ತ್ತಿದ್ದ ಕಾರಣ ನಾವು ಹೋಗಿಲ್ಲ. ಜೀವಭಯದಿಂದ ಬೆಳಗ್ಗೆವರೆಗೆ ಬಂಡೆಯ ಮೇಲೆ ಕುಳಿತುಕೊಂಡಿದ್ದೆವು.

ಜಗದೀಶ್ ನಾಯ್ಕ, ಗಾಯಾಳು ಮೀನುಗಾರ.

ನಿನ್ನೆ ರಾತ್ರಿ 8:30ಕ್ಕೆ ನಮಗೆ ಬಂದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದೆವು. ಆದರೆ ನೀರಿನ ರಭಸ ಹೆಚ್ಚು ಇದ್ದ ಕಾರಣ ರಿಸ್ಕ್ ತೆಗೆದುಕೊಳ್ಳು ವುದು ಬೇಡ ಎಂಬ ಕಾರಣಕ್ಕೆ ಅವರನ್ನು ಬಂಡೆಯ ಮೇಲೆ ಇರಲು ತಿಳಿಸಿದೆವು. ನಂತರ ಬೆಳಗಿನ ಜಾವ ಅವರನ್ನು ರಕ್ಷಿಸಿ ದಡಕ್ಕೆ ಕರೆತಂದೆವು.

-ಚೆನ್ನಬಸಪ್ಪ, ಎಸ್ಪಿ, ಕರಾವಳಿ ಕಾವಲು ಪ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X