ಕುವೈಟ್‌ನಲ್ಲಿ ಮತ್ತೆ ಮಾದಕವಸ್ತು ವಶ: ಸಿರಿಯ ಪ್ರಜೆಯ ಬಂಧನ

ಕುವೈಟ್ ಸಿಟಿ,ಸೆಪ್ಟಂಬರ್6: ದೇಶದಲ್ಲಿ ಮತ್ತೆ ಭಾರೀ ಪ್ರಮಾಣದ ಮಾದಕವಸ್ತು ಪತ್ತೆಯಾಗಿದೆ. ಸೋಮವಾರ ಮೂರು ಮಿಲಿಯನ್ ಮಾದಕವಸ್ತುವಿನ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಹಸಚಿವಾಲಯ ತಿಳಿಸಿದೆ ಎಂದು ವರದಿಯಾಗಿದೆ. ಏರ್ ಕಂಪ್ರೆಸರ್‌ನಲ್ಲಿ ಅಡಗಿಸಿಟ್ಟ ಮಾದಕವಸ್ತುಗಳ ಮಾತ್ರೆಗಳನ್ನು ಜಲೀಬಿಲ್‌ನಿಂದ ವಶಪಡಿಸಿಕೊಳ್ಳಲಾಗಿದ್ದು ,ಇದಕ್ಕೆ ಸಂಬಂಧಿಸಿಓರ್ವ ಸಿರಿಯನ್ ಪ್ರಜೆಯನ್ನು ಬಂಧಿಸಲಾಗಿದೆ.
ಈತನ ಮುಂದಿನ ತನಿಖೆಗಾಗಿ ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಲಾಗಿದೆ.ಶುವೈಖ್ ಬಂದರ್‌ನ ಮೂಲಕ ಯುರೋಪಿಯನ್ ರಾಷ್ಟ್ರಗಳಿಂದ ಬಂದಿದ್ದ ಕಂಟೈನರ್‌ಗಳಲ್ಲಿ ಮಾದಕವಸ್ತು ಪತ್ತೆಯಾಗಿವೆ. ಕಂಟೈನರ್ ತುಂಬಾ ಇಲೆಕ್ಟ್ರಾನಿಕ್ ಉಪಕರಣಗಳಿದ್ದವು. ಗ್ರಹಸಚಿವ ಶೇಖ್ ಮುಹಮ್ಮದ್ ಅಲ್ ಖಾಲಿದ್ ಅಸ್ಸಬಾಹ್, ಅಧೀನ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಸುಲೈಮಾನ್ ಫಹದ್ ಅಲ್ ಫಹದ್ ಕಂಟೈನರ್‌ಗೆ ಭೇಟಿ ನೀಡಿದ್ದಾರೆ. ಈ ವರ್ಷ ವೊಂದರಲ್ಲಿ ಕುವೈಟ್‌ನಲ್ಲಿ1031 ಮಾದಕವಸ್ತು ಪ್ರಕರಣಗಳು ದಾಖಲಾಗಿದ್ದು ಎರಡುಕೋಟಿಗೂ ಅಧಿಕ ಮಾದಕವಸ್ತು ಮಾತ್ರೆಗಳನ್ನುವಶಪಡಿಸಲಾಗಿದೆ. ಕಳೆದ ಎಂಟುತಿಂಗಳಲ್ಲಿ420ಕೆಜಿ ಗಾಂಜಾವನ್ನು ವಶಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 1374 ಮಂದಿಯನ್ನು ಬಂಧಿಸಿ ಕ್ರಮಕೈಗೊಳ್ಳಲಾಗುತ್ತಿದೆ. 235 ಮಂದಿಯನ್ನು ಗಡಿಪಾರುಗೊಳಿಸಲಾಗಿದೆ. ಮೂರು ಲಕ್ಷ ದೀನಾರ್ ಬೆಲೆಯ 160ಕೆಜಿ ಹಶೀಷ್ ಇತ್ತೀಚೆಗೆ ಇಲ್ಲಿನ ಭದ್ರತಾ ವಿಭಾಗ ವಶಪಡಿಸಿಕೊಂಡಿತ್ತು.





