ಉತ್ತರ ಪ್ರದೇಶ ಸರಕಾರದಿಂದ ಪ್ರತಿಕುಟುಂಬಕ್ಕೆ ಉಚಿತ ಮೊಬೈಲ್
ಲಕ್ನೊ, ಸೆಪ್ಟಂಬರ್ 6: ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿದ ಬೆನ್ನಿಗೆ ಉಚಿತ ಮೊಬೈಲ್ ಫೋನ್ ವಿತರಣೆಗೆ ಉತ್ತರಪ್ರದೇಶದ ಅಖಿಲೇಶ್ ಯಾದವ್ ಸರಕಾರ ಮುಂದಾಗಿದೆ ಎಂದು ವರದಿಯಾಗಿದೆ. ವಾರ್ಷಿಕ ಆದಾಯ ಎರಡು ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳ ಹೈಸ್ಕೂಲ್ ಶಿಕ್ಷಣ ಪೂರ್ತಿಮಾಡಿರುವ ಹದಿನೆಂಟು ವರ್ಷ ದಾಟಿದವರಿಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷದ ಸರಕಾರ ಮೊಬೈಲ್ ಫೋನ್ ನೀಡಲಿದೆ. ಆದರೆ ಸರಕಾರಿ ನೌಕರರಿಗೆ ಈ ಸೌಲಭ್ಯ ಲಭಿಸುವುದಿಲ್ಲ. 2012ರ ವಿಧಾನಸಭಾ ಚುನಾವಣೆಯ ವೇಳೆ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿದ್ದು ಸಮಾಜವಾದಿ ಪಕ್ಷಕ್ಕೆ ಉಪಯುಕ್ತವಾಗಿತ್ತು ಎಂದು ವರದಿ ತಿಳಿಸಿದೆ.
Next Story





