ಈ ಬಾರಿಯ ಈದ್ ರಜೆಯಲ್ಲಿ ಎದ್ದು ಕಾಣುತ್ತಿದೆ ಆರ್ಥಿಕ ಮುಗ್ಗಟ್ಟು
ಸೌದಿ ಸಂಕಟ

ರಿಯಾದ್,ಸೆ.6 :ಕಳೆದ ತಿಂಗಳು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲ್ಪಟ್ಟ ಕಾರ್ಟೂನ್ ಒಂದು ಸೌದಿ ಅರೇಬಿಯಾದಾದ್ಯಂತ ವಸ್ತುಶಃ ವೈರಲ್ ಆಗಿತ್ತು. ಈ ವ್ಯಂಗ್ಯ ಚಿತ್ರದಲ್ಲಿ ಸಾಂಪ್ರದಾಯಿಕ ಧಿರಿಸು ಧರಿಸಿದ ನಿರುದ್ಯೋಗ, ದರಗಳು ಹಾಗೂ ಬಡತನ ಎಂಬ ಹೆಸರಿನನಾಲ್ಕು ವಯಸ್ಕ ಪುರುಷರು-ವೇತನವೆಂಬ ಹರಿದ ಬಟ್ಟೆಗಳನ್ನು ಧರಿಸಿದ್ದ ಹುಡುಗನನ್ನು ನೋಡುತ್ತಿದ್ದಾರೆ ಹಾಗೂ ‘‘ನಮ್ಮ ಹಾಗೆ ನೀನೂ ಯಾವಾಗ ಬೆಳದು ದೊಡ್ಡವನಾಗುತ್ತೀಯಾ?’’ಎಂದು ಅವರು ಬಾಲಕನನ್ನು ಪ್ರಶ್ನಿಸುವಂತಿದೆ.
ವಸ್ತುಶಃ ಸೌದಿಯ ಸಾಮಾನ್ಯ ನಾಗರಿಕರ ಪರಿಸ್ಥಿತಿ ಇದೇ ಆಗಿ ಬಿಟ್ಟಿದೆ.
ವಾರ್ಷಿಕ ಈದುಲ್ ಅಝಾ ರಜಾ ಕಾಲದಲ್ಲಿ ಸಾಮಾನ್ಯ ಸೌದಿ ನಾಗರಿಕರು ಹೊಸ ಬಟ್ಟೆ ಮತ್ತಿತರ ವಸ್ತುಗಳಿಗೆ ಹೇರಳ ವೆಚ್ಚ ಮಾಡುತ್ತಾರೆ ಹಾಗೂ ಪ್ರವಾಸಗಳಿಗೆ ಕೂಡ ಹೋಗುತ್ತಾರೆ. ಈ ವರ್ಷ ಸೆಪ್ಟೆಂಬರ್ 12 ರಿಂದ 15 ರವರೆಗೆ ಬಕ್ರೀದ್ ರಜೆಯಿದ್ದರೂ ಈ ಬಾರಿಯ ರಜೆಗೆ ಕಳೆದ ಒಂದು ದಶಕಗಳಿಂದೀಚೆಗೆ ಮೊದಲ ಬಾರಿ ಆರ್ಥಿಕ ಬಿಕ್ಕಟ್ಟಿನ ಬಿಸಿ ತಟ್ಟಲಿದೆ.
2015 ರಿಂದ ಆರಂಭಗೊಂಡಿರವ ತೈಲ ಬೆಲೆ ಕುಸಿತ ಸೌದಿ ಆರ್ಥಿಕತೆಯಪ್ರತಿಯೊಂದು ಕ್ಷೇತ್ರದಮೇಲೂ ತನ್ನ ಪರಿಣಾಮ ಬೀರಿದ್ದು ಸಾಮಾನ್ಯ ಸೌದಿ ನಾಗರಿಕನ ಆದಾಯ ಕುಂಠಿತಗೊಳ್ಳುತ್ತಿದೆ. ಇದು ಅವರ ಜೀವನ ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ. ಸೌದಿ ಅರೇಬಿಯಾದ ತೈಲೇತರ ಕ್ಷೇತ್ರ ಕಳೆದ ಒಂದು ವರ್ಷದಿಂದ ಈ ವರ್ಷದ ಮೊದಲ ತ್ರೈಮಾಸಿಕದ ಅಂತ್ಯದ ತನಕ ಶೇ 0.7 ಕುಸಿತ ಕಂಡಿದ್ದು ಇದು ಕಳೆದ ಐದು ವರ್ಷಗಳಲ್ಲಿಯೇ ಗರಿಷ್ಠ ಕುಸಿತವಾಗಿದೆ. ತರುವಾಯ ಎರಡನೇ ತ್ರೈಮಾಸಿಕದ ನಿರ್ವಹಣೆಯ ಬಗ್ಗೆ ದಾಖಲೆಗಳು ಲಭ್ಯವಿಲ್ಲವಾದರೂ ಲಂಡನ್ ಮೂಲದ ಕ್ಯಾಪಿಟಲ್ ಇಕನಾಮಿಕ್ಸ್ಅಂದಾಜಿನಂತೆ ಈ ಕ್ಷೇತ್ರ ಜೂನ್ ತಿಂಗಳಲ್ಲಿ ಶೇ 4.5 ರಷ್ಟು ಕುಸಿತ ಕಂಡಿದೆ.
ಸೌದಿ ಅರೇಬಿಯಾಆಮದು ಮಾಡಿದ ಒಟ್ಟು ವಸ್ತುಗಳ ಮೌಲ್ಯವೂ ಶೇ .24 ರಷ್ಟು ಕುಸಿತ ಕಂಡಿತ್ತು. ಸರಕಾರ ಖರೀದಿಸಿದ್ದಉಪಕರಣಗಳಲ್ಲಿ ಕಡಿಮೆಯಾಗಿರುವುದುಇದಕ್ಕೆ ಒಂದು ಕಾರಣವಾಗಿದೆಯಾದರೆ ಕನ್ಸ್ಯೂಮರ್ ಸರಕುಗಳ ಆಮುದು ಕೂಡ ಕಡಿಮೆಯಾಗಿರುವುದು ಇನ್ನೊಂದು ಕಾರಣ.
ಸೌದಿ ನಾಗರಿಕರಲ್ಲಿ ನಿರುದ್ಯೋಗ ಪ್ರಮಾಣ ಸುಮಾರು ಶೇ .11.5ಆಗಿದೆ. ಆದರೆ ಆರ್ಥಿಕ ಕುಸಿತದಿಂದ ಕೆಲವೇ ಕೆಲವು ಸೌದಿಗಳು ಕೆಲಸ ಕಳೆದುಕೊಂಡಿದ್ದು ಕಾನೂನು ತೊಡಕುಗಳಿಂದ ಸೌದಿ ನಾಗರಿಕರನ್ನು ನೌಕರಿಯಿಂದ ಕಿತ್ತೊಗೆಯುವುದು ಅಷ್ಟೊಂದು ಸುಲಭಸಾಧ್ಯವಿಲ್ಲವಾಗಿದೆ. ಆದರೆ ಸರಕಾರಿ ಕಚೇರಿಗಳಲ್ಲಿ ಒಂದೊಮ್ಮೆ ಸಾಮಾನ್ಯವಾಗಿದ್ದ ಬೋನಸ್, ಓವರ್ ಟೈಮ್ ವೇತನ ಹಾಗೂ ಇತರ ಸವಲತ್ತುಗಳು ಈಗ ಕಡಿಮೆಯಾಗಿವೆ.
ತೈಲದ ಆದಾಯದ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ತಮ್ಮದೇ ಉದ್ಯಮಗಳನ್ನು ತೆರೆಯಲು ರಿಯಾಧ್ ತನ್ನ ನಾಗರಿಕರನ್ನು ಉತ್ತೇಜಿಸುತ್ತಿದೆಯಾದರೂ ಈ ಕಾರ್ಯ ಕೂಡ ಅನೇಕರಿಗೆ ದೊಡ್ಡ ಸವಾಲಾಗಿ ಬಿಟ್ಟಿದೆ.
ಆದರೂ ಕೆಲವೊಂದು ಸಮೀಕ್ಷೆಗಳ ಪ್ರಕಾರ ಖಾಸಗಿ ರಂಗದ ಬೆಳವಣಿಗೆ ನಿಧಾನವಾಗಿ ವೇಗ ಪಡೆದುಕೊಂಡಿದೆ ಹಾಗೂ ಹಲವರು ಮುಂದಿನ ವರ್ಷ ತೈಲ ಬೆಲೆ ಉತ್ತಮಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಮೇಲಾಗಿ ಇಲ್ಲಿನ ಸರಕಾರ 2018 ರಲ್ಲಿ ಶೇ .5 ರಷ್ಟು ವ್ಯಾಟ್ ಜಾರಿಗೊಳಿಸಲು ಯೋಚಿಸುತ್ತಿದೆಯೆನ್ನಲಾಗಿದೆ. ಈ ಪ್ರಸ್ತಾವಕ್ಕೆ ಇಲ್ಲಿಯ ತನಕ ಯಾವ ಕಡೆಯಿಂದಲೂ ವಿರೋಧ ವ್ಯಕ್ತವಾಗದೇ ಇದ್ದರೂ, ಟ್ವಿಟರ್ ನಲ್ಲಂತೂ ‘‘ಸ್ಯಾಲರಿ ಡಸನ್ಟ್ ಮೀಟ್ ಅವರ್ ನೀಡ್ಸ್’’ (ವೇತನ ನಮ್ಮ ಅವಶ್ಯಕತೆಗಳನ್ನು ಪೂರೈಸಲು ಅಸಾಧ್ಯವಾಗಿದೆ) ಎಂಬರ್ಥ ನೀಡುವ ಹ್ಯಾಶ್ ಟ್ಯಾಗ್ ಗಳು ಸಾಮಾನ್ಯವಾಗಿ ಬಿಟ್ಟಿದೆ.







