ಗರಿಷ್ಠ ಗ್ರ‍್ಯಾಂಡ್ ಸ್ಲಾಮ್ ಜಯಿಸಿದ ಫೆಡರರ‍್ ದಾಖಲೆಯನ್ನು ಮುರಿದ ಸೆರೆನಾ
ಯುಎಸ್ ಓಪನ್

ನ್ಯೂಯಾರ್ಕ್, ಸೆ.6: ವಿಶ್ವದ ನಂ.1 ಮಹಿಳಾ ಟೆನಿಸ್ ತಾರೆ ಅಮೆರಿಕದ ಸೆರೆನಾ ವಿಲಿಯಮ್ಸ್ ಗರಿಷ್ಠ ಗ್ರ‍್ಯಾಂಡ್ ಸ್ಲಾಮ್ ಪಂದ್ಯಗಳಲ್ಲಿ ಜಯಿಸಿದ ಸ್ವಿಸ್‌ನ ರೋಜರ‍್ ಫೆಡರರ್ ದಾಖಲೆಯನ್ನು ಹಿಂದಿಕ್ಕಿ ತನ್ನ ಹೆಸರಲ್ಲಿ ನೂತನ ದಾಖಲೆ ಬರೆದಿದ್ದಾರೆ.
ಸೋಮವಾರ ಯರೊಸ್ಲಾವಾ ಶ್ವೆಡೊವಾ ವಿರುದ್ಧ 6-2,6-3 ಅಂತರದಲ್ಲಿ ಜಯ ಗಳಿಸಿ ಯುಎಸ್ ಓಪನ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಫೆಡರರ್ 307 ಗ್ರ‍್ಯಾಂಡ್ ಸ್ಲಾಮ್ ಪಂದ್ಯಗಳಲ್ಲಿ ಜಯ ಗಳಿಸಿದ ದಾಖಲೆ ಹೊಂದಿದ್ದಾರೆ. ಸೆರೆನಾ 308 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ತನ್ನ ಹೆಸರಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.
Next Story





