ರಿಲಯನ್ಸ್ ಜಿಯೋ ಸ್ಮಾರ್ಟ್ ಫೋನ್ ಸ್ಫೋಟ !

ಮುಂಬೈ, ಸೆ. 6 : ಭಾರೀ ಪ್ರಚಾರ ಭರಾಟೆಯೊಂದಿಗೆ ಮಾರುಕಟ್ಟೆಗೆ ಬಂದಿರುವ ರಿಲಯನ್ಸ್ ಜಿಯೋ ಗೆ ತಲೆನೋವಾಗುವ ವಿಷಯವೊಂದು ಫೇಸ್ ಬುಕ್ ಮೂಲಕ ಬೆಳಕಿಗೆ ಬಂದಿದೆ.
Gedi Route Jammu ಎಂಬ ಹೆಸರಿನ ಫೇಸ್ ಬುಕ್ ಪೇಜ್ ಪ್ರಕಾರ ಜಿಯೋ ಎಲ್ ವೈ ಎಫ್ ವಾಟರ್ ಒನ್ ( Jio LYF Water 1) ಅನ್ನು ಬಳಸುತ್ತಿರುವಾಗ ಜಮ್ಮು ಕಾಶ್ಮೀರದ ಕತುಆದಲ್ಲಿ ಹಠಾತ್ತನೆ ಸ್ಪೋಟಿಸಿದೆ. ಗ್ರಾಹಕನ ಕೈಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಈ ಪೇಜ್ ಹೇಳಿದೆ. ಸ್ಪೋಟಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
ಇತ್ತೀಚಿಗೆ ಸ್ಯಾಮ್ ಸಂಗ್ ನ ಹೊಸ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ನೋಟ್ 7 ಬ್ಯಾಟರಿ ಸ್ಪೋಟಗೊಂಡ ಬಳಿಕ ಕಂಪೆನಿ ಅದನ್ನು ಹಿಂಪಡೆದಿದ್ದು ಇದೀಗ ಜಿಯೋ ಫೋನ್ ಹೀಗಾಗಿದೆ ಎಂದು ಹೇಳಲಾಗಿದೆ. ಒನ್ ಪ್ಲಸ್ ತ್ರಿ ಹಾಗು ಐಫೋನ್ ಕೂಡ ಸ್ಫೋಟಿಸಿದ ಘಟನೆ ನಡೆದಿದೆ.
ಕೃಪೆ : indiatimes.com
Next Story







