Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸೆ.9ರಂದು ‘ಸೌಹಾರ್ದ ಮಂಗಳೂರಿಗಾಗಿ’ ಒಂದೇ...

ಸೆ.9ರಂದು ‘ಸೌಹಾರ್ದ ಮಂಗಳೂರಿಗಾಗಿ’ ಒಂದೇ ವೇದಿಕೆಯಲ್ಲಿ ಸರ್ವಧರ್ಮಗಳ ಸಮಾನ ಮನಸ್ಕರ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ6 Sept 2016 8:09 PM IST
share
ಸೆ.9ರಂದು ‘ಸೌಹಾರ್ದ ಮಂಗಳೂರಿಗಾಗಿ’ ಒಂದೇ ವೇದಿಕೆಯಲ್ಲಿ ಸರ್ವಧರ್ಮಗಳ ಸಮಾನ ಮನಸ್ಕರ ಕಾರ್ಯಕ್ರಮ

ಮಂಗಳೂರು, ಸೆ.6: ಸುಶಿಕ್ಷಿತರು ಇರುವ ಬುದ್ದಿವಂತರ ಜಿಲ್ಲೆ, ಸುಸಂಸ್ಕೃತರ ಜಿಲ್ಲೆ ಎಂದು ಖ್ಯಾತಿ ಪಡೆದಿರುವ ದ.ಕ ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಇಲ್ಲಿನ ವಿಭಿನ್ನ ಧರ್ಮ, ಜಾತಿ, ಸಂಸ್ಕೃತಿಯನ್ನು ಹೊಂದಿರುವ ಜನ ಸಮುದಾಯಗಳ ನಡುವೆ ನಡೆಯುತ್ತಿರುವ ಅಹಿತಕರ ಘಟನೆಗಳು ಈ ಕೀರ್ತಿಗೆ ಸವಾಲಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ಘಟನೆಗಳು ಶಾಂತಿ ಪ್ರಿಯ ಮಂಗಳೂರಿಗರನ್ನು ಭೀತಿಯಲ್ಲಿ ಜೀವಿಸುವಂತೆ ಮಾಡಿದೆ.ಹೊರ ಜಗತ್ತಿಗೆ ಕೆಟ್ಟ ಸಂದೇಶವನ್ನು ನೀಡುತ್ತಿದೆ. ಇಂತಹ ಮಂಗಳೂರಿನಲ್ಲಿ ಶಾಂತಿ, ಸೌಹಾರ್ದ ನೆಲೆಸುವಂತೆ ಮಾಡಲು ಹೊಸ ಪ್ರಯತ್ನದ ಅಂಗವಾಗಿ ಮತ್ತೆ ಮಂಗಳೂರಿನ ಸೌರ್ಹಾದ ವಾತವರಣದ ನೆನಪನ್ನು ಇಲ್ಲಿನ ಜನರಲ್ಲಿ ಮೂಡಿಸುವ, ಸಕಾರಾತ್ಮಕ ಚಿಂತನೆಯ ಪಸರಿಸುವ ನಿಟ್ಟಿನಲ್ಲಿ ‘ಯುನೈಟೆಡ್ ಫಾರ್ ಬೆಟರ್ ಮಂಗಳೂರು’ ಎಂಬ ವೇದಿಕೆ ನಿರ್ಮಾಣವಾಗಿದೆ ಎಂದು ಹೋಫ್ ಫೌಂಡೇಶನ್ ಸಂಸ್ಥಾಪಕ ಹಾಗೂ ಸಮಾವೇಶದ ಸಂಚಾಲಕ ಸೈಫ್ ಸುಲ್ತಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2017ರಲ್ಲಿ ಸೌಹಾರ್ದ ದ.ಕ. ಜಿಲ್ಲೆಗಾಗಿ ಒಂದಾಗೋಣ ಕಾರ್ಯಕ್ರಮ

ವಿವಿಧ ಧರ್ಮ, ಜಾತಿಗಳಲ್ಲಿರುವ ಶಾಂತಿ ಪ್ರಿಯರು ‘ಯುನೈಟೆಡ್ ಫಾರ್ ಬೆಟರ್ ಮಂಗಳೂರು’ ಎಂಬ ತಂಡವೊಂದನ್ನು ರಚಿಸಿ ಇದೇ ಹೆಸರಿನಡಿ ಸೆ.9ರಂದು ಸಂಜೆ 4ಕ್ಕೆ ನಗರದ ಪುರಭವನದಲ್ಲಿ ಸೌಹಾರ್ದ ಮಂಗಳೂರಿಗಾಗಿ ಸಮಾನ ಮನಸ್ಕರು ಒಗ್ಗೂಡಿ ಸೌಹಾರ್ದ ಸಂದೇಶವನ್ನು ಸಾರಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ಹಂತದಲ್ಲಿ ವಿವಿಧ ತಾಲೂಕು ಮಟ್ಟದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿ ಕೊಂಡು ಮಾರ್ಚ್ 2017ರಲ್ಲಿ ‘ಸೌಹಾರ್ದ ದ.ಕ ಜಿಲ್ಲೆಗಾಗಿ ಒಂದೋಗೋಣ ಕಾರ್ಯಕ್ರಮ ಆಯೋಜಿಸಲಾಗುವುದು.

ಜಿಲ್ಲೆಯ ವಿವಿಧ ಸಂಘಟನೆಗಳಾದ ಅಹಿಂದ ದ.ಕ ಜಿಲ್ಲೆ, ಅಲ್ ಹಕ್ ಫೌಂಡೇಶನ್, ಬಂಟರ ಯಾನೆ ನಾಡವರ ಮಾತೃ ಸಂಘ, ಮೊಗವೀರ ಮಹಾಜನ ಸಂಘ, ಶ್ರೀಗುರು ಸಿಂಘ್ ಸಭಾ ಸೊಸೈಟಿ, ಯುವವಾಹಿನಿ ಕೇಂದ್ರ ಸಮಿತಿ, ಕೆಥೊಲಿಕ್ ಡಯಾಸಿಸ್ ಆಫ್ ಮಂಗಳೂರು, ದಸಂಸ ( ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ದ.ಕ. ಜಿಲ್ಲೆ, ಜೈನ್ ಸಮಿತಿ ಮಂಗಳೂರು, ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಮಿಷನ್ ನೆಟ್‌ವರ್ಕ್ ದ.ಕ. ಜಿಲ್ಲೆ, ಹಿದಾಯ ಫೌಂಡೇಶನ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ, ಹೋಪ್ ಫೌಂಡೇಶನ್, ಕೆಕೆಎಂಎ ಕರ್ನಾಟಕ ಬ್ರಾಂಚ್, ಎಂ- ಫ್ರೆಂಡ್ಸ್, ಮುಸ್ಲಿಂ ಲೇಖಕರ ಸಂಘ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸೌಹಾರ್ದ ಮಂಗಳೂರಿಗಾಗಿ ಕಾರ್ಯಾಚರಿಸುತ್ತಿದೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸೈಫ್ ಸುಲ್ತಾನ್ ತಿಳಿಸಿದರು.

ಸಮಾರಂಭದಲ್ಲಿ ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಚೊಕ್ಕಬೆಟ್ಟು ಮೊಹ್ಯುದ್ದೀನ್ ಜುಮಾ ಮಸೀದಿಯ ಖತೀಬರಾದ ವೌಲಾನಾ ಅಬ್ದುಲ್ ಅಝೀಝ್ ದಾರಿಮಿ, ಹಿರಿಯ ಜೈನ ವಿದ್ವಾಂಸರಾದ ಎಂ.ಕೆ.ನಿರ್ಮಲ್ ಕುಮಾರ್, ಮಂಗಳೂರು ಗುರುದ್ವಾರದ ಬಾಯಿ ಪರ್ವಿನ್ ಸಿಂಗ್, ತೊಕ್ಕೊಟ್ಟು ಮಸ್ಜಿದುಲ್‌ಹುದಾದ ಖತೀಬರಾದ ಮುಹಮ್ಮದ್ ಕುಂಞ, ಜೆಪ್ಪು ಸಂತ ಜೊಸೆಫ್ ಸಂಸ್ಥೆಯ ನಿರ್ದೇಶಕರಾದ ರೆ.ಫಾ.ಓನಿಲ್ ಡಿ ಸೋಜ, ವಿಜಯಪುರ ಎಐಆರ್‌ಫ್‌ನ ಅಧ್ಯಕ್ಷ ವೌಲಾನಾ ಬಶೀರ್ ಅಹ್ಮದ್ ಉಮರಿ ಹಾಗೂ ಮಂಗಳೂರು ಥಿಯೊಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರೆ.ಡಾ.ಹನಿಬಾಲ್ ಆರ್.ಕಬ್ರಾಲ್ ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಮತ್ತು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಧರ್ಮಗಳ ಧಾರ್ಮಿಕ ಚಿಂತಕರು, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರು ಪೊಲೀಸ್ ಉಪ ಆಯುಕ್ತ ಸಂದೀಪ್ ಪಾಟೀಲ್ ಶುಭ ಹಾರೈಸಲಿದ್ದಾರೆ.ಕಮಿಷನರ್ ಎಂ. ಚಂದ್ರಶೇಖರ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಸೈಫ್ ಸುಲ್ತಾನ್ ತಿಳಿಸಿದರು.

ಎಲ್ಲಾ ಜಾತಿ,ಧರ್ಮದವರನ್ನು ಒಂದೇ ವೇದಿಕೆಯಲ್ಲಿ ತಂದು ನಮ್ಮ ಜನ ಸಮುದಾಯದ ನಡುವಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದು ಕಾರ್ಯಕ್ರಮದಲ್ಲಿ ಎಲ್ಲರನ್ನು ಸೇರಿಸುವ ಪ್ರಯತ್ನ ಹಮ್ಮಿ ಕೊಂಡಿದ್ದೇವೆ ಎಂದು ಸಂಚಾಲಕ ಬಂಟರಯಾನೆ ನಾಡವರ ಮಾತೃ ಸಂಘದ ಪ್ರತಿನಿಧಿ ಹಾಗೂ ಸಮಾವೇಶದ ಸಂಚಾಲಕ ಶಶಿರಾಜ್ ಕೊಳಂಬೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ, ಅಹಿಂದ ದ.ಕ ಜಿಲ್ಲೆಯ ಅಧ್ಯಕ್ಷ ವಾಸುದೇವ ಬೋಳೂರು, ಅಲ್ ಹಕ್ ಫೌಂಡೇಶನ್‌ನ ಪ್ರತಿನಿಧಿ ಅಬ್ದುಲ್ಲತಿಫ್, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರತಿನಿಧಿ ಶಶಿರಾಜ್ ಕೊಳಂಬೆ, ಶ್ರೀಗುರು ಸಿಂಘ್ ಸಭಾ ಸೊಸೈಟಿಯ ಪ್ರತಿನಿಧಿ ಇಕ್ಭಾಲ್ ಸಿಂಗ್ ರಾಠೋಡ್,ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಪ್ರೇಮನಾಥ್ ಕೆ., ಕೆಥೊಲಿಕ್ ಸಭಾದ ಅಧ್ಯಕ್ಷ ಅನಿಲ್ ಲೋಬೊ, ಜೈನ್ ಸಮಿತಿ ಮಂಗಳೂರು ಪ್ರತಿನಿಧಿ ಭರತ್ ಜೈನ್, ಕರ್ನಾಟಕ ಮಿಶನ್ಸ್ ನೆಟ್‌ವರ್ಕ್ ಅಧ್ಯಕ್ಷ ರೆ.ಫಾ,ವಾಲ್ಟರ್ ಮಾಬೆನ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಅಧ್ಯಕ್ಷ ನಾಝಿಮ್ ಎಸ್.ಎಸ್., ಹೋಪ್ ಫೌಂಡೇಶನ್‌ನ ಪ್ರತಿನಿಧಿ ಫಯಾಝ್ ಅಬ್ದುಲ್ ಜಬ್ಬಾರ್, ಕೆಕೆಎಂಎ ಕರ್ನಾಟಕ ಬ್ರಾಂಚ್ ಪ್ರತಿನಿಧಿ ಎಸ್.ಎಂ.ಫಾರೂಕ್, ಅಯ್ಯೂಬ್ ಸೂರಿಂಜೆ, ಎಂ- ಫ್ರೆಂಡ್ಸ್ ಪ್ರತಿನಿಧಿ ಝುಬೈರ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಗ್ಗೆ ಸಂಘಟಕರ ಅನಿಸಿಕೆಗಳು

ಜಿಲ್ಲೆಯಲ್ಲಿ ಸೌಹಾರ್ದ ಮೂಡಿಸಲು ಹೊಸ ಪ್ರಯತ್ನವನ್ನು ಮಾಡುತ್ತಿದ್ದೇವೆ. ವಿವಿಧ ಸಮುದಾಯಗಳಲ್ಲಿರುವ ಹಲವು ಸಮಸ್ಯೆಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನು ಎಲ್ಲರೂ ಒಟ್ಟಾಗಿ ಸೇರಿ ಪರಿಹರಿಸಲು ಪ್ರಯತ್ನ ಮಾಡುತ್ತಿದ್ದೇವೆ.

- ಸೈಫ್ ಸುಲ್ತಾನ್, ಹೋಪ್ ಫೌಂಡೇಶನ್.

 
ಜಿಲ್ಲೆಯಲ್ಲಿ ಕೆಲವೊಂದು ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಎಲ್ಲ ಜನರನ್ನು ಒಟ್ಟಿಗೆ ಸೇರಿಸಿಕೊಂಡು ಹೋಗಬೇಕೆನ್ನುವ ನೆಲೆಯಲ್ಲಿ ಱಯುನೈಟೆಡ್ ಫಾರ್ ಬೆಟರ್ ಮಂಗಳೂರು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

-ಇಕ್ಬಾಲ್ ಸಿಂಗ್ ರಾಠೋಡ್, ಶ್ರೀ ಗುರುಸಿಂಗ್ ಸಭಾ ಸೊಸೈಟಿ ಮುಖಂಡರು.

 
ಮಂಗಳೂರಿನಲ್ಲಿ ಮುಸ್ಲಿಂ, ಕ್ರೈಸ್ತ ಹಿಂದೂ ಸಮಾಜದ ಜನರು ಬದುಕುತ್ತಿದ್ದಾರೆ. ಈ ಸಮುದಾಯಗಳ ನಡುವೆ ಅನ್ಯೋನ್ಯತೆಯನ್ನು ಬಲಪಡಿಸಲು, ಏಕತೆಯನ್ನು ಮೂಡಿಸುವ ಉದ್ದೇಶದೊಂದಿಗೆ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

-ಭರತ್ ಜೈನ್, ಜೈನ್ ಸಮಿತಿ ಮಂಗಳೂರು, ಮುಖಂಡರು.


ಮಂಗಳೂರಿನಲ್ಲಿ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. ಜಿಲ್ಲೆಯಲ್ಲಿ ಅನ್ಯೋನ್ಯತೆಗೆ ಧಕ್ಕೆ ಬಂದಿದೆ. ಜನರು ಇತರ ಧರ್ಮಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಇದರಿಂದ ನಗರದ ಅಭಿವೃದ್ದಿಗೆ ತೊಡಕಾಗಿದೆ. ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ವಿದೇಶಗಳಲ್ಲಿಯೂ ಮಂಗಳೂರಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಬಂದಿದೆ. ಈ ಭಾವನೆಗಳನ್ನು ಹೋಗಲಾಡಿಸಲು ಈ ಹೊಸ ಪ್ರಯತ್ನವನ್ನು ಮಾಡುತ್ತಿದ್ದೇವೆ.

-ಪ್ರೇಮನಾಥ, ಮಾಜಿ ಅಧ್ಯಕ್ಷರು, ಯುವ ವಾಹಿನಿ, ಕೇಂದ್ರ ಸಮಿತಿ

     
ಪ್ರಸಕ್ತ ಮಂಗಳೂರಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮಾಡುವ ಮೂಲಕ ನಾವೆಲ್ಲ ಒಟ್ಟಾಗಿದ್ದೇವೆ ಎಂಬ ಸಂದೇಶ ನೀಡಲು ಈ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಯುವಕರನ್ನು ಮನವೊಲಿಸುವ ಪ್ರಯತ್ನವನ್ನು ಮಾಡುವ ಉದ್ದೇಶ ಹೊಂದಿದ್ದೇವೆ.

-ಅನಿಲ್ ಲೋಬೊ, ಅಧ್ಯಕ್ಷರು, ಕ್ಯಾಥೊಲಿಕ್ ಸಭಾ,ಮಂಗಳೂರು ಪ್ರಾಂತ.

ಮಂಗಳೂರಿನಲ್ಲಿ ಕೋಮುದ್ವೇಷದ ಘಟನೆಗಳು ಮರುಕಳಿಸುತ್ತಿವೆ. ಇವುಗಳು ಕಡಿಮೆಯಾಗ ಬೇಕು.ಅದಕ್ಕಾಗಿ ಈ ಕಾರ್ಯಕ್ರಮ ಮಂಗಳೂರಿನಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದರೆ ಮುಂದೆ ಜಿಲ್ಲೆಯಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಮಾಡುವ ಯೋಜನೆಯಿದೆ. ಮಂಗಳೂರಿನಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆಯುತ್ತಿರುವ ಘಟನೆಗಳಿಂದ ಶಾಂತಿ ಪ್ರಿಯ ಮಂಗಳೂರಿನ ಜನರು ಸಾಕಷ್ಟು ನೊಂದಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸೌಹಾರ್ದ ವಾತಾವರಣಕ್ಕೆ ಧಕ್ಕೆ ಬಾರದಂತಹ ಪರಿಸ್ಥಿತಿಯನ್ನು ನಿರ್ಮಿಸಬೇಕಾಗಿದೆ.

- ಗಂಗಾಧರ ಕರ್ಕೆರ, ಅಧ್ಯಕ್ಷ, ದ.ಕ.ಜಿಲ್ಲಾ ಮೊಗವೀರ ಮಹಾಜನ ಸಂಘ .

ಜಿಲ್ಲೆಯಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆ ತಂದು ಯುವಜರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಮತ್ತು ಮಾನವ ಹಕ್ಕುಗಳ ಬಗ್ಗೆ ಮಾತನಾಡಿದರೂ ದೇಶದ್ರೋಹ ಎಂದು ಬಿಂಬಿಸಲಾಗುತ್ತಿದೆ. ಜಿಲ್ಲೆಯ ಜನರಿಗೆ ಕೋಮುಸಂಘರ್ಷಗಳು, ಅಶಾಂತಿಯ ವಾತಾವರಣ ಬೇಕಾಗಿಲ್ಲ. ಇಲ್ಲಿನ ಜನರಿಗೆ ಬೇಕಾಗಿರುವುದು ಸೌಹಾರ್ದ, ಸಹಬಾಳ್ವೆ. ಇದಕ್ಕಾಗಿ ಈ ಪ್ರಯತ್ನ ಮಾಡಲಾಗುತ್ತಿದೆ.

- ರಘು ಎಕ್ಕಾರ್, ಮುಖಂಡರು, ದಸಂಸ, (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)

ಮಂಗಳೂರಿನಲ್ಲಿ ಸಹೋದರತೆ, ಶಾಂತಿ ನೆಲಸಬೇಕು, ಜಿಲ್ಲೆಯ ಎಲ್ಲ ಧರ್ಮೀಯರು ಸಹೋದರರಾಗಿ ಬಾಳಬೇಕಾದ ಶಾಂತಿ ವಾತಾವರಣ ನಿರ್ಮಾಣ ಮಾಡಬೇಕೆಂಬ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದೆ ಇನ್ನಷ್ಟು ಕಾರ್ಯಕ್ರಮಗಳ ಮೂಲಕ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

-ವಾಸುದೇವ ಬೋಳೂರು, ಅಧ್ಯಕ್ಷ, ಅಹಿಂದ, ದ.ಕ. ಜಿಲ್ಲೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X