ಯುಎಇ: ಪ್ರತಿ ಮಗುವಿನ ಜೀವಮಾನದ ಶಿಕ್ಷಣ ವೆಚ್ಚ 1.81 ಕೋಟಿ ರೂ.

ದುಬೈ, ಸೆ. 6: ತಮ್ಮ ಮಗುವಿಗೆ ಶಿಕ್ಷಣ ನೀಡಲು ಯುಎಇಯ ಹೆತ್ತವರು ತಮ್ಮ ಜೀವಮಾನದಲ್ಲಿ 1 ಮಿಲಿಯ ದಿರ್ಹಮ್ (ಸುಮಾರು 1.81 ಕೋಟಿ ರೂಪಾಯಿ) ಖರ್ಚು ಮಾಡುತ್ತಾರೆ ಎಂದು ‘ಝೂರಿಕ್ ಲೈಫ್’ನಲ್ಲಿ ಮಂಗಳವಾರ ಪ್ರಕಟಗೊಂಡ ಅಧ್ಯಯನವೊಂದು ತಿಳಿಸಿದೆ.
ಎರಡು ವರ್ಷಗಳ ಶಾಲಾಪೂರ್ವ ತರಗತಿಗಳಿಗೆ (29,346 ದಿರ್ಹಮ್), ಆರು ವರ್ಷಗಳ ಪ್ರಾಥಮಿಕ ಶಾಲೆಗೆ (35,230 ದಿರ್ಹಮ್), ಆರು ವರ್ಷಗಳ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ (43,052 ದಿರ್ಹಮ್) ಮತ್ತು ಬ್ರಿಟಿಶ್ ವಿಶ್ವವಿದ್ಯಾನಿಲಯವೊಂದರ ಮೂರು ವರ್ಷಗಳ ಅಧ್ಯಯನಕ್ಕೆ ಒಟ್ಟು 9,33,945 ದಿರ್ಹಮ್ ವೆಚ್ಚ ತಗಲುತ್ತದೆ ಎಂದು ಅದು ಹೇಳಿದೆ.
ಯುಎಇಯಲ್ಲಿ ಶಾಲಾಪೂರ್ವ, ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸದ ವೆಚ್ಚ ಪ್ರತಿ ಮಗುವಿಗೆ ಸರಾಸರಿ 5,28,390 ದಿರ್ಹಮ್ ಆಗಿರುತ್ತದೆ. ಇದರಲ್ಲಿ ಪುಸ್ತಕಗಳು, ಪ್ರವಾಸಗಳು ಮತ್ತು ಸಮವಸ್ತ್ರಗಳಿಗೆ ಮಾಡುವ ಖರ್ಚು ಸೇರಿಲ್ಲ.
Next Story





