ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಹಾರಿದ ರೈತ

ಮಂಡ್ಯ, ಆ.6: ಸುಪ್ರೀಂ ಕೋರ್ಟ್‌ನ ಆದೇಶದಂತೆ ರಾಜ್ಯ ಸರಕಾರ ತಮಿಳುನಾಡಿಗೆ ನೀರು ಹರಿಸುವ ಸುದ್ದಿ ಪ್ರಕಟಗೊಂಡ ಬೆನ್ನಲ್ಲೆ ಶ್ರೀರಂಗಪಟ್ಟಣದ ಸ್ನಾನದ ಘಟ್ಟದ ಬಳಿ ರೈತರೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ ಘಟನೆ ವರದಿಯಾಗಿದೆ.
ಕೆಂಗಾಲ್ ಕೊಪ್ಪದ ನಿವಾಸಿ ಐವತ್ತರ ಹರೆಯದ ಸೂರಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ್ದಾರೆ.ತಕ್ಷಣ ಅವರನ್ನು ಹಗ್ಗದ ಸಹಾಯದಿಂದ ನೀರಿನಿಂದ ಮೇಲೆಕ್ಕೆತ್ತಿ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರ ಸ್ಪಷ್ಟನೆ: ರೈತ ಸೂರಿ ನದಿಗೆ ಹಾರಿಲ್ಲ. ಅವರು ಕಾಲುಜಾರಿ ನದಿಗೆ ಬಿದ್ದಿದ್ದಾರೆಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
Next Story





