ಎಂಡೋ ಪೀಡಿತ ಬಾಲಕಿ ನಿಧನ
ಪುತ್ತೂರು, ಸೆ.6: ಇಲ್ಲಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಸಮೀಪದ ಮಾಯಂಗಳ ನಿವಾಸಿ ಎಂ.ಇಸ್ಮಾಯೀಲ್ ಎಂಬವರ ಪುತ್ರಿ, ಎಂಡೋ ಪೀಡಿತ ಬಾಲಕಿ ಆಯಿಷತ್ ರಿಲಾ (13) ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಹುಟ್ಟಿನಿಂದಲೇ ಇವರು ಎಂಡೋ ಪೀಡಿತರಾಗಿದ್ದು, ಕೈಕಾಲು,ಸೊಂಟ ಮತ್ತು ಕುತ್ತಿಗೆ ಭಾಗದಲ್ಲಿ ಬಲಹೀನತೆಯಿಂದ ಮಲಗಿದಲ್ಲಿಯೇ ಇದ್ದರು. ಸೋಮವಾರ ರಾತ್ರಿ ಅವರ ಕಾಯಿಲೆ ತೀವ್ರವಾಗಿ ಉಲ್ಬಣಿಸಿದ ಪರಿಣಾಮ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರ ಸಲಹೆಯಂತೆ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲು ಸಿದ್ಧ್ದತೆ ನಡೆಸುತ್ತಿದ್ದಂತೆಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
Next Story





