ನದಿಗೆ ಬಿದ್ದು ವ್ಯಕ್ತಿ ಮೃತ್ಯು
ಗಂಗೊಳ್ಳಿ, ಸೆ.6: ಇಲ್ಲಿನ ಮ್ಯಾಂಗನೀಸ್ ಡಾಕ್‌ನಲ್ಲಿ ನಿಲ್ಲಿಸಿದ್ದ ಬೋಟಿನಿಂದ ಸೆ.4ರಂದು ಪಂಚಗಂಗಾವಳಿ ಹೊಳೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆ ಯಾಗಿದ್ದ ಒರಿಸ್ಸಾ ಮೂಲದ ದಯಾಸಾಗರ(35) ಎಂಬವರ ಮೃತದೇಹ ಸೆ.5ರಂದು ಬೆಳಗ್ಗೆ ಪತ್ತೆಯಾಗಿದೆ.
ಗಂಗೊಳ್ಳಿಯ ಯುವಕರ ತಂಡ, ಮೃತರ ಮನೆಯವರ ನಿರೀಕ್ಷೆಯಲ್ಲಿ ಮೃತ ದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದರು. ಮಧ್ಯಾಹ್ನ ವೇಳೆ ದಯಾಸಾಗರನ ಸಂಬಂಧಿಯೊಬ್ಬರು ಮೃತದೇಹವನ್ನು ಇಲ್ಲೇ ದಫನ್ ಮಾಡಹುದು ಎಂಬ ಪತ್ನಿ ಹಾಗೂ ತಾಯಿ ಒಪ್ಪಿಗೆ ಪತ್ರವನ್ನು ಒರಿಸ್ಸಾದಿಂದ ತರಿಸಿದ್ದರು.
ನಂತರ ಗಂಗೊಳ್ಳಿಯ ಸಾರ್ವಜನಿಕ ರುದ್ರಭೂಮಿಯಲ್ಲಿ ಅವರ ಧಾರ್ಮಿಕ ಪದ್ಧತಿಯಂತೆ ಮೃತದೇಹವನ್ನು ದಫನ್ ಮಾಡಲಾಯಿತು. ಇದರಲ್ಲಿ ಗಂಗೊಳ್ಳಿಯ ಇಬ್ರಾಹೀಂ, ಶಕೀಲ್ ವೌಲಾನಾ, ಮುಹಮ್ಮದ್ ಆದಿಲ್, ಅಬ್ದುಲ್ ಮಜೀದ್, ಮುಹಮ್ಮದ್ ಸುಬಾನ್, ಮುಹಮ್ಮದ್ ನದೀಮ್ ಸಹಕರಿಸಿದರು.
Next Story





