ಬಾರೆಬೆಟ್ಟು: ಕೋಳಿ ಅಂಕಕ್ಕೆ ದಾಳಿ ನಾಲ್ವರ ಬಂಧನ, 2 ಕೋಳಿ ವಶ
ಬಂಟ್ವಾಳ, ಸೆ.6: ಇಲ್ಲಿನ ಕೊಳ್ನಾಡು ಗ್ರಾಮದ ದೇವಸ್ಯ ಬಾರೆಬೆಟ್ಟು ಎಂಬಲ್ಲಿ ರವಿವಾರ ರಾತ್ರಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ಎರಡು ಕೋಳಿಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ಇಲ್ಲಿನ ಬೋಳಂತೂರು ಗ್ರಾಮದ ಕಲ್ಪಣೆ ನಿವಾಸಿಗಳಾದ ಹರಿಶ್ಚಂದ್ರ(28), ಮೋನಪ್ಪ(40), ಸಂಜೀವ(40) ಹಾಗೂ ಜಯಂತ(32) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Next Story





