ಮಣ್ಣಗುಡ್ಡೆ: ಪ್ರಸನ್ನ ಟೆಕ್ನಾಲಜಿಸ್‌ನಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

ಮಂಗಳೂರು, ಸೆ.7: ನಗರದ ಪಿವಿಎಸ್‌ನ ಪ್ರಸನ್ನ ಟೆಕ್ನಾಲಜಿಸ್‌ನಿಂದ ಮಣ್ಣಗುಡ್ಡೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸಾರಂಗ್ ರೇಡಿಯೋದ ಕಾರ್ಯಕ್ರಮ ನಿರೂಪಕ ರೋಷನ್ ಕ್ರಾಸ್ತ, ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಗಬೇಕಾಗಿದೆ. ಮಾತೃಭಾಷೆ, ಪ್ರಾದೇಶಿಕ ಭಾಷೆ, ರಾಷ್ಟ್ರ ಭಾಷೆ, ಜಾಗತಿಕ ಭಾಷೆಯನ್ನು ಅಭ್ಯಸಿಸುವ ಮೂಲಕ ಭಾಷೆಯ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಟೆಕ್ನಾಲಜಿಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸುಭೋದ್ ಶೆಟ್ಟಿ, ಮಣ್ಣಗುಡ್ಡೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅರುಣಾ ಕುಮಾರಿ, ಶಾಲಾಭಿವೃದ್ದಿ ಸಮಿತಿ ಗೌರವಾಧ್ಯಕ್ಷ ಎಂ.ಎಸ್. ಕಮಾರ್ ಉಪಸ್ಥಿತರಿದ್ದರು.
Next Story





