ಫ್ರೆಂಚ್ ಶಾಲಾ ಆವರಣದಲ್ಲಿ ಪರ್ದಾಧಾರಿ ಪೋಷಕರಿಗೆ ತಡೆ
ಮಾರ್ಸಿಲ್ಲೆ, ಸೆ.7: ಮುಖಾವರಣವಿದ್ದ ಪರ್ದಾಧರಿಸಿದ್ದ ಮುಸ್ಲಿಮ್ ಮಹಿಳೆಯರನ್ನು ಅವರ ಮಕ್ಕಳು ಕಲಿಯುತ್ತಿರುವ ನರ್ಸರಿ ಶಾಲೆಯನ್ನು ಪ್ರವೇಶಿಸದಂತೆ ತಡೆದ ಘಟನೆ ಫ್ರಾನ್ಸ್‌ನ ದಕ್ಷಿಣ ದ್ವೀಪವಾದ ಕೋರ್ಸಿಕದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಶಾಲೆಯ ಪ್ರದೇಶದಲ್ಲಿ ತಮ್ಮ ಮಕ್ಕಳನ್ನು ತಂದು ಬಿಡಲು ಬಂದಿದ್ದ ಮಹಿಳೆಯರನ್ನು ಅಲ್ಲಿದ್ದ ಬೇರೆ ಮಕ್ಕಳ ಇಬ್ಬರು ಪೋಷಕರು ಶಾಲೆಯಲ್ಲಿ ಧಾರ್ಮಿಕ ಚಿಹ್ನೆಗೆ ಪ್ರವೇಶವಿಲ್ಲ ಎಂದು ತಡೆದಿದ್ದಾರೆ ಎನ್ನಲಾಗಿದೆ. ಆದರೆ ಈ ಮಹಿಳೆಯರು ಮುಖಾವರಣ ವಿದ್ದ ಶಿರೋವಸ್ತ್ರ ಧರಿಸಿದ್ದರು ಎಂದು ಫ್ರೆಂಚ್ ಅಧಿಕಾರಿಗಳು ತಿಳಿಸಿದ್ದಾರೆ.ಶಾಲೆಯಲ್ಲಿ ಸಾಮಾನ್ಯ ಪ್ರವೇಶವನ್ನು ದೃಢಪಡಿಸಲು ಅಧಿಕಾರಿಗಳು ಮಧ್ಯಪ್ರವೇಶಿಸಿದ್ದು, ಪೊಲೀಸರು ಮತ್ತು ಶಾಲಾ ಇನ್ಸ್‌ಪೆಕ್ಟರ್‌ರನ್ನು ಘಟನೆ ನಡೆದ ಶಾಲೆಗೆ ಕಳುಹಿಸಿದ್ದಾರೆ.
ಆದರೆ ಅಲ್ಲಿ ಘರ್ಷಣೆ,ಬೆದರಿಕೆ, ನಿಯಮೋಲ್ಲಂಘನೆ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ಫ್ರಾನ್ಸ್‌ನಲ್ಲಿ ತಲೆದೋರಿರುವ ಮುಸ್ಲಿಂ ತಾರತಮ್ಯದ ಅತ್ಯಂತ ಹೊಸ ಉದಾಹರಣೆ ಇದು ಎನ್ನಲಾಗಿದೆ. ಈ ಹಿಂದೆ ಫೆಂಚ್‌ನಗರಗಳ ಬೀಚ್‌ಗಳಲ್ಲಿ ಬುರ್ಕಿನಿ ನಿಷೇಧ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪರಮೋಚ್ಚ ಕೋರ್ಟಿನ ನಿಷೇಧವನ್ನು ಕಳೆದ ದಿವಸ ನೀಸ್‌ನ ಕೋರ್ಟು ತೆರವುಗೊಳಿಸಿತ್ತು ಎಂದು ವರದಿ ತಿಳಿಸಿದೆ.








