ಕಾಶ್ಮೀರದ ಆಘಾತಕಾರಿ ಪರಿಸ್ಥಿತಿಯನ್ನು ತುರ್ತಾಗಿ ಕೊನೆಗೊಳಿಸಿ : ಮಲಾಲ ಮನವಿ

ಇಸ್ಲಾಮಾಬಾದ್,ಸೆ.7: ಕಾಶ್ಮೀರದ ಅಮಾನವೀಯ ಮತ್ತು ಆಘಾತಕಾರಿ ದುರವಸ್ಥೆಯಲ್ಲಿ ಪರಿವರ್ತನೆಗೆ ಭಾರತ, ಪಾಕಿಸ್ತಾನ ಮತ್ತು ಅಂತಾರಾಷ್ಟ್ರೀಯ ಸಮುದಾಯ ಒಂದಾಗಿ ಪ್ರಯತ್ನಿಸಬೇಕೆಂದು ಶಾಂತಿ ನೋಬೆಲ್ ಪಾರಿತೋಷ ವಿಜೇತ ಮಲಾಲ ಯೂಸುಫ್ ಝಾಯಿ ಹೇಳಿದ್ದಾರೆಂದು ವರದಿಯಾಗಿದೆ. ಕಾಶ್ಮೀರದಲ್ಲಿರುವವರು ಕೂಡಾ ಯಾವುದೇ ಜನವಿಭಾಗಗಳಂತೆ ಮೂಲಭೂತವಾದ ಮಾನವಹಕ್ಕುಗಳಿಗೆ ಅರ್ಹರು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವರಿಗೆ ಸ್ವತಂತ್ರವಾಗಿ ಮತ್ತು ಗೌರವಪೂರ್ಣವಾಗಿ ಜೀವಿಸಲು ಅತ್ಯಂತ ತುರ್ತಾಗಿ ಅವಕಾಶ ಒದಗಿಸಿಕೊಡಬೇಕೆಂದು ತಾನು ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಸಮುದಾಯ, ಭಾರತ ಹಾಗೂ ಪಾಕಿಸ್ತಾನದೊಂದಿಗೆ ತಾನು ವಿನಂತಿಸುತ್ತಿದ್ದೇನೆ ಎಂದು ಮಲಾಲ ಹೇಳಿದ್ದಾರೆ.ಹಿಝ್ಬುಲ್ ಮುಜಾಹಿದೀನ್ ನಾಯಕ ಬುರ್ಹಾನ್ ವಾನಿಯ ಮರಣಾನಂತರ ಕಾಶ್ಮೀರದಲ್ಲಿ ಸಂಜಾತವಾದ ಸಂಘರ್ಷದಲ್ಲಿ ಎಪ್ಪತ್ತಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ.
ಆಯುಧವಿಲ್ಲದೆ ಪ್ರತಿಭಟಿಸಿದ ಹಲವಾರು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ನೂರಾರು ಮಂದಿ ವಿರುದ್ಧ ಪೆಲೆಟ್ ಗನ್ ಪ್ರಯೋಗಿಸಿದರು. ವಾರಗಳುದ್ದಕ್ಕೂ ಕರ್ಫ್ಯೂ ಘೋಷಿಸಲಾಯಿತು. ಶಾಲೆಗಳನ್ನು ಮುಚ್ಚಿ ಮಕ್ಕಳನ್ನು ತರಗತಿ ಕೋಣೆಯಿಂದ ಹೊರಗಿಡಲಾಗಿದೆ. 140ಲಕ್ಷದಷ್ಟಿರುವ ಕಾಶ್ಮೀರದ ತನ್ನ ಸಹೋದರ ಸಹೋದರಿಯರು ಯಾವಾಗಲು ತನ್ನ ಹೃದಯಕ್ಕೆ ಹತ್ತಿರವಿದ್ದಾರೆಂದು ಮಲಾಲ ಹೇಳಿರುವುದಾಗಿ ವರದಿ ತಿಳಿಸಿದೆ.





