Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕರ್ನಾಟಕದ ಈ ಯುವತಿ ಈವರೆಗೆ ಪಾರ್ಲೆ ಜಿ...

ಕರ್ನಾಟಕದ ಈ ಯುವತಿ ಈವರೆಗೆ ಪಾರ್ಲೆ ಜಿ ಬಿಸ್ಕೆಟ್ ಬಿಟ್ಟು ಬೇರೇನನ್ನೂ ತಿಂದಿಲ್ಲ!

ವಾರ್ತಾಭಾರತಿವಾರ್ತಾಭಾರತಿ7 Sept 2016 2:27 PM IST
share
ಕರ್ನಾಟಕದ ಈ ಯುವತಿ ಈವರೆಗೆ ಪಾರ್ಲೆ ಜಿ ಬಿಸ್ಕೆಟ್ ಬಿಟ್ಟು ಬೇರೇನನ್ನೂ ತಿಂದಿಲ್ಲ!

ವಿಚಿತ್ರ ಮತ್ತು ವಿಲಕ್ಷಣ ಆಹಾರ ಪದ್ಧತಿಗಳು ಜಗತ್ತಿನಲ್ಲಿ ಹೊಸ ವಿಷಯವೇನೂ ಅಲ್ಲ. ಕೆಲವರು ಹುಚ್ಚು ಅಭ್ಯಾಸ ಬೆಳೆಸಿಕೊಂಡಿದ್ದರೆ, ಇನ್ನು ಕೆಲವರ ಜೀವನಶೈಲಿ ಆಯ್ಕೆಗಳೂ ಇಂತಹ ಆಹಾರಕ್ಕೆ ಕಾರಣವಾಗಿರುತ್ತದೆ. ಇಂತಹ ಒಂದು ವಿಚಿತ್ರ ಆಹಾರ ಸೇವನೆ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿದೆ. ಕರ್ನಾಟಕದ 18 ವರ್ಷದ ಯುವತಿಯೊಬ್ಬಳು ತನ್ನ ಜೀವನವಿಡೀ ಪಾರ್ಲೆಜಿ ಬಿಸ್ಕತ್ತುಗಳನ್ನೇ ತಿಂದು ಬದುಕಿರುವ ವರದಿಯಾಗಿದೆ!

ರಾಮವ್ವ ಎನ್ನುವ ಈ ಯುವತಿ ದಿನಕ್ಕೆ ಆರರಿಂದ ಏಳು ಬಿಸ್ಕತ್ತುಗಳನ್ನು ಸೇವಿಸುತ್ತಾಳೆ. ರಾಮವ್ವ ಮತ್ತು ಆಕೆಯ ಅವಳಿ ಸೋದರರಿಗೆ ಬಾಲ್ಯದಲ್ಲಿ ಹಾಲಿನ ಜೊತೆಗೆ ಪಾರ್ಲೆ ಜಿ ಬಿಸ್ಕತ್ತುಗಳನ್ನು ಕೊಡಲಾಗುತ್ತಿತ್ತು. ಸಹೋದರ ನಿಧಾನವಾಗಿ ಇತರ ಆಹಾರಗಳಿಗೆ ಹೊಂದಿಕೊಂಡರೂ ರಾಮವ್ವ ಮಾತ್ರ ಬಿಸ್ಕತ್ತು ಬಿಟ್ಟು ಬೇರೇನನ್ನೂ ತಿನ್ನುತ್ತಿರಲಿಲ್ಲ.

ಗೋಕಾಕ ತಾಲೂಕಿನ ಸಣ್ಣ ಗ್ರಾಮದ ನಿವಾಸಿಗಳಾಗಿರುವ ರಾಮವ್ವರ ಕೃಷಿಕ ಹೆತ್ತವರು ಆಕೆಯ ಬಿಸ್ಕತ್ತುಗಳನ್ನು ಖರೀದಿಸಲೂ ಕಷ್ಟಪಡುತ್ತಾರೆ ಮತ್ತು ಚಿಕಿತ್ಸೆಗೂ ಹಣವಿಲ್ಲ. ಮಕ್ಕಳ ತಾಯಿ ಚಿಕ್ಕಂದಿನಲ್ಲಿ ಮೊಲೆ ಹಾಲುಣಿಸದೆ ಹಾಲು ಮತ್ತು ಬಿಸ್ಕತ್ತುಗಳನ್ನೇ ಮಕ್ಕಳಿಗೆ ತಿನಿಸಿದ್ದಳು ಎನ್ನಲಾಗಿದೆ. ಬೇರೇನನ್ನೂ ತಿನ್ನಲು ಇಷ್ಟವಾಗುವುದಿಲ್ಲ ಎನ್ನುತ್ತಾರೆ ರಾಮವ್ವ. ಪಾರ್ಲೆ ಜಿ ಬಿಸ್ಕತ್ತು ತಯಾರಿಸುವುದನ್ನು ಕಂಪೆನಿ ನಿಲ್ಲಿಸಿದರೆ ತನ್ನ ಗತಿಯೇನು ಎಂದೂ ಆಕೆಗೆ ಭಯವಾಗಿದೆ. ಹೆತ್ತವರು ರಾಮವ್ವಳ ಆಹಾರ ಅಭ್ಯಾಸವನ್ನು ಬದಲಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆಕೆಯ ಮದುವೆಗೂ ಇದರಿಂದ ತೊಂದರೆಯಾಗಬಹುದು ಎನ್ನುವ ಭಯ ಅವರದು.

ರಾಮವ್ವರ ಈ ವಿಶೇಷ ಆಹಾರ ಅಭ್ಯಾಸದ ಬಗ್ಗೆ ತಿಳಿದ ಲೇಕ್ ವ್ಯೆ ಆಸ್ಪತ್ರೆ ಆ ಬಗ್ಗೆ ಅಧ್ಯಯನ ಆರಂಭಿಸಿದೆ. ವೈದ್ಯರೂ ಆಕೆಗೆ ವಿಭಿನ್ನ ಆಹಾರ ತಿನ್ನಿಸಲು ಪ್ರಯತ್ನಿಸಿ ಸೋತಿದ್ದಾರೆ. ಪೌಷ್ಠಿಕಾಂಶಗಳ ಕೊರತೆಯಿಂದ ರಾಮವ್ವ ನೋಡಲು 12-13 ವರ್ಷಗಳ ಬಾಲಕಿಯ ಚಹರೆ ಹೊಂದಿದ್ದಾಳೆ. ರಾಮವ್ವಳ ವಿಶೇಷ ಆಹಾರ ಅಭ್ಯಾಸ ಪ್ರಚಾರ ಪಡೆದುಕೊಂಡ ಮೇಲೆ ಈಗ ಸಾಮಾಜಿಕ ತಾಣಗಳಲ್ಲಿ ಪಾರ್ಲೆಜಿ ತಿಂದು ಬದುಕಲು ಸಾಧ್ಯವೇ ಎನ್ನುವ ಚರ್ಚೆಯೇ ಆರಂಭವಾಗಿದೆ. ವಾಸ್ತವದಲ್ಲಿ ಒಂದು ಪ್ಯಾಕ್ ಬಿಸ್ಕತ್ತಲ್ಲಿ 450 ಕ್ಯಾಲರಿಗಳಿರುತ್ತವೆ. ಅದು ಆರೋಗ್ಯಕರ ಎಂದೂ ಹೇಳಲಾಗುತ್ತಿದೆ. ಲೋ ಬಿಪಿ ಇರುವವರೂ ಕೈಯಲ್ಲಿ ಬಿಸ್ಕತ್ತು ಹಿಡಿದುಕೊಂಡೇ ತಿರುಗುತ್ತಾರೆ. ಮಧುಮೇಹ ಇರುವವರೂ ಗ್ಲುಕೋಸ್ ಮಟ್ಟ ಅಧಿಕಗೊಳಿಸಲು ಬಿಸ್ಕತ್ತು ಬಳಸುತ್ತಾರೆ.

ರಾಮವ್ವರನ್ನು ಪರೀಕ್ಷಿಸಿರುವ ವೈದ್ಯರ ಪ್ರಕಾರ ದೈಹಿಕ ಬೆಳವಣಿಗೆ ಕುಂಠಿತಗೊಂಡಿರುವ ಹೊರತು ಇನ್ಯಾವ ಅನಾರೋಗ್ಯವೂ ಆಕೆಗೆ ಇಲ್ಲ. ಭವಿಷ್ಯದಲ್ಲಿ ಇತರ ಆಹಾರ ಕ್ರಮಗಳನ್ನು ಅಭ್ಯಾಸ ಮಾಡಿಕೊಂಡರೆ ದೈಹಿಕ ಬೆಳವಣಿಗೆಗೆ ಸಮಸ್ಯೆ ಇರದು ಎನ್ನುತ್ತಾರೆ ವೈದ್ಯರು. ಆದರೆ ಮಾನಸಿಕವಾಗಿ ಆಕೆ ಇತರ ಆಹಾರ ಸೇವನೆಗೆ ತೆರೆದುಕೊಳ್ಳಬೇಕಿದೆ.

ಕೃಪೆ: indianexpress.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X