ಸುಳ್ಯ: ನದಿಯಲ್ಲಿ ನೀರುಪಾಲಾಗುತ್ತಿದ್ದವರನ್ನು ರಕ್ಷಿಸಿದ ಆಟೊ ಚಾಲಕ

ಸುಳ್ಯ, ಸೆ.7: ಸ್ನಾನಕ್ಕೆ ಇಳಿದಿದ್ದ ಇಬ್ಬರು ಯುವಕರು ಕಾಲು ಜಾರಿ ನೀರುಪಾಲಾಗುತ್ತಿದ್ದ ವೇಳೆ ಸ್ಥಳೀಯ ಅಟೋಚಾಲಕ ಕಾರ್ತಿಕ್ ಇಬ್ಬರನ್ನು ದಡ ಸೇರಿಸಿ ಸಾಹಸ ಮೆರೆದಿದ್ದಾರೆ.
ಇಲ್ಲಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕರ ತಂಡ ಸ್ನಾನಕ್ಕೆ ನಾಗಪಟ್ಟಣ ಸೇತುವೆ ಬಳಿ ಪಯಸ್ವಿನಿ ನದಿಗೆ ಇಳಿದಿತ್ತು. ಈ ಸಂದರ್ಭ ಅವರಲ್ಲಿ ಇಬ್ಬರು ಯುವಕರು ಕಾಲು ಜಾರಿದ್ದು, ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿದ್ದರು. ಈ ಸಂದರ್ಭ ಸೇತುವೆಯಿಂದ ಕೆಳಗೆ ಸ್ವಲ್ಪದೂರದಲ್ಲಿ ನಡುಗುಡ್ಡೆಯಲ್ಲಿ ಆಶ್ರಯ ಪಡೆದರು.
ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ನಾಗಪಟ್ಟಣ ಕಾಲನಿ ನಿವಾಸಿ ಆಟೊಚಾಲಕ ಕಾರ್ತಿಕ್ ಇಬ್ಬರನ್ನು ದಡ ತಲುಪಿದರು.
Next Story





