Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಪೈಲಟ್ ತಪ್ಪಿನಿಂದ ಬೇರೆಯೇ ದೇಶಕ್ಕೆ ಹೋಗಿ...

ಪೈಲಟ್ ತಪ್ಪಿನಿಂದ ಬೇರೆಯೇ ದೇಶಕ್ಕೆ ಹೋಗಿ ಇಳಿದ ವಿಮಾನ !

ವಾರ್ತಾಭಾರತಿವಾರ್ತಾಭಾರತಿ7 Sept 2016 10:01 PM IST
share
ಪೈಲಟ್ ತಪ್ಪಿನಿಂದ ಬೇರೆಯೇ ದೇಶಕ್ಕೆ ಹೋಗಿ ಇಳಿದ ವಿಮಾನ !

ಮೆಲ್ಬರ್ನ್,ಸೆ.7: ಪೈಲಟ್ ತಪ್ಪು ಸಂಕೇತಾಕ್ಷರಗಳನ್ನು ಒತ್ತಿದ್ದರಿಂದ ಸಿಡ್ನಿಯಿಂದ ಮಲೇಷಿಯಾದ ರಾಜಧಾನಿ ಕೌಲಾಲಂಪೂರ್‌ಗೆ ತೆರಳಬೇಕಾಗಿದ್ದ ವಿಮಾನವೊಂದು ಮೆಲ್ಬರ್ನ್‌ನಲ್ಲಿ ಇಳಿದಿತ್ತು ಎನ್ನುವುದನ್ನು ಆಸ್ಟ್ರೇಲಿಯಾದ ವೈಮಾನಿಕ ತನಿಖಾ ವರದಿಯೊಂದು ಪತ್ತೆ ಹಚ್ಚಿದೆ.

2015,ಮಾರ್ಚ್ 15ರಂದು ಈ ಘಟನೆ ನಡೆದಿತ್ತು. ಏರ್ ಏಷ್ಯಾ ವಿಮಾನಯಾನ ಸಂಸ್ಥೆಯ ವಿಮಾನ 212 ಪ್ರಯಾಣಿಕರೊಂದಿಗೆ ಕೌಲಾಲಂಪೂರ್‌ಗೆ ಹಾರಲು ಸಜ್ಜಾಗಿತ್ತು. ಆಗಲೇ ವಿಮಾನದ ಸಿಬ್ಬಂದಿ ಆ ದಿನ ಮಾಡಿದ್ದ ಹಲವಾರು ತಪ್ಪುಗಳ ಪೈಕಿ ಮೊದಲ ತಪ್ಪು ನಡೆದುಹೋಗಿತ್ತು. ಧರಿಸಿದ್ದ ಹೆಡ್‌ಫೋನ್‌ಗಳಲ್ಲಿ ದೋಷವಿದ್ದರಿಂದ ಪೈಲಟ್ ಮತ್ತು ಫಸ್ಟ್ ಆಫೀಸರ್ ವಿಮಾನ ಹಾರಾಟಕ್ಕೆ ಮೊದಲಿನ ತಮ್ಮ ಕರ್ತವ್ಯಗಳನ್ನು ಪರಸ್ಪರ ಬದಲಾಯಿಸಿಕೊಂಡಿದ್ದರು.

ಸಾಮಾನ್ಯವಾಗಿ ಪೈಲಟ್ ವಿಮಾನದ ಬಾಹ್ಯ ಪರೀಕ್ಷೆಯನ್ನು ನಡೆಸಿದರೆ,ಫಸ್ಟ್ ಆಫೀಸರ್ ಕಾಕ್‌ಪಿಟ್‌ನಲ್ಲಿದ್ದುಕೊಂಡು ಸಿದ್ಧತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಾನೆ. ಅಂದು ಫಸ್ಟ್ ಆಫೀಸರ್ ಹೊರಗಿದ್ದು ಪೈಲಟ್ ಕಾಕ್‌ಪಿಟ್‌ನಲ್ಲಿದ್ದ. ವಿಮಾನದ ಪಥದರ್ಶಕ ವ್ಯವಸ್ಥೆಯಲ್ಲಿ ಪೈಲಟ್ 01519.8 ಈಸ್ಟ್ ಎಂಬ ಸಂಕೇತಾಕ್ಷರಗಳನ್ನು ಒತ್ತಬೇಕಾಗಿತ್ತು. ಆದರೆ ತಪ್ಪಿ ಆತ 15109.8 ಈಸ್ಟ್ ಎಂದು ಒತ್ತಿಬಿಟ್ಟಿದ್ದ.

ಇದರಿಂದ ವಿಮಾನದ ಪಥದರ್ಶಕ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿತ್ತು. ಈ ತಪ್ಪನ್ನು ಸರಿಪಡಿಸಲು ಸಿಬ್ಬಂದಿಗೆ ಹಲವಾರು ಅವಕಾಶಗಳಿದ್ದವು. ಆದರೆ ವಿಮಾನ ಆಗಸಕ್ಕೇರುವವರೆಗೂ ತಪ್ಪು ಪೈಲಟ್ ಮತ್ತು ಫಸ್ಟ್ ಆಫೀಸರ್ ಗಮನಕ್ಕೆ ಬಂದಿರಲಿಲ್ಲ. ನಿಯಂತ್ರಣ ಕೊಠಡಿಯಿಂದ ರವಾನಿಸಲಾಗಿದ್ದ ಎಚ್ಚರಿಕೆ ಸಂಧೇಶಗಳನ್ನೂ ಅವರು ಕಡೆಗಣಿಸಿದ್ದರು. ಹೀಗಾಗಿ ವಿಮಾನವು ತಪ್ಪುದಿಕ್ಕಿಗೆ ಚಲಿಸಲಾರಂಭಿಸಿತ್ತು.

ತಮ್ಮ ತಪ್ಪು ಅರಿವಾದಾಗ ಅವರಿಬ್ಬರೂ ಪಥದರ್ಶಕ ವ್ಯವಸ್ಥೆಯನ್ನು ಸರಿಪಡಿಸಲು ಯತ್ನಿಸಿದ್ದರು. ಆದರೆ ಆವೇಳೆಗಾಗಲೇ ತುಂಬ ತಡವಾಗಿತ್ತು.ಅವರ ಪ್ರಯತ್ನಗಳಿಂದಾಗಿ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿತ್ತು. ಸಿಡ್ನಿಗೆ ಮರಳುವಂತೆ ಮತ್ತು ಪಥಧರ್ಶಕ ವ್ಯವಸ್ಥೆಯನ್ನು ಬಳಸದೆ ವಿಮಾನವನ್ನು ಕೆಳಗಿಳಿಸುವಂತೆ ಪೈಲಟ್‌ಗೆ ಸೂಚಿಸಲಾಗಿತ್ತು. ಆದರೆ ಸಿಡ್ನಿಯಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ವಿಮಾನವನ್ನು ಮೆಲ್ಬರ್ನ್‌ನಲ್ಲಿ ಇಳಿಸುವುದು ಅನಿವಾರ್ಯವಾಗಿತ್ತು ಎಂದು ವರದಿಯು ವಿವರಿಸಿದೆ.


ಮೂರು ಗಂಟೆಗಳ ಕಾಲ ಮೆಲ್ಬರ್ನ್ ನಿಲ್ದಾಣದಲ್ಲಿ ಕಳೆದ ಬಳಿಕ ವಿಮಾನ ಕೌಲಾಲಂಪೂರ್‌ಗೆ ಪ್ರಯಾಣಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X